Karnataka AQI: ಬೆಂಗಳೂರು ವಾಯು ಗುಣಮಟ್ಟ ಆತಂಕಕಾರಿ! ಶಿವಮೊಗ್ಗ–ಬಳ್ಳಾರಿಯಲ್ಲಿ ಇನ್ನೂ ಗಂಭೀರ
Karnataka Air Quality: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟ ಕಳಪೆ ಮಟ್ಟ ತಲುಪಿದ್ದು ಶಿವಮೊಗ್ಗ ಬಳ್ಳಾರಿ ನಗರಗಳಲ್ಲಿ AQI ಇನ್ನೂ ಹೆಚ್ಚಾಗಿ ಆರೋಗ್ಯ ತಜ್ಞರು ತೀವ್ರ ಎಚ್ಚರಿಕೆ ನೀಡಿದ್ದಾರೆ

- ಬೆಂಗಳೂರು ವಾಯು ಗುಣಮಟ್ಟ ಇನ್ನೂ ಆತಂಕಕಾರಿ
- ಶಿವಮೊಗ್ಗ–ಬಳ್ಳಾರಿ AQI ಬೆಂಗಳೂರಿಗಿಂತ ಹೆಚ್ಚು
- ಕಳಪೆ ಗಾಳಿ ಪರಿಣಾಮ ಶ್ವಾಸಕೋಶ ಅಪಾಯ
ಬೆಂಗಳೂರು (Bengaluru): ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ (Karnataka AQI) ಮತ್ತೆ ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದೆ 200ರ ಗಡಿ ದಾಟಿದ್ದ ಬೆಂಗಳೂರಿನ AQI ಇದೀಗ 173ರ ಮಟ್ಟದಲ್ಲಿ ದಾಖಲಾಗಿದ್ದು, ಅಂಕಿ ಅಂಶಗಳಲ್ಲಿ ಸ್ವಲ್ಪ ಇಳಿಕೆಯಾಗಿದ್ದರೂ ಪರಿಸ್ಥಿತಿ ಸುರಕ್ಷಿತ ಎಂದು ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಇನ್ನೂ ಗಂಭೀರ ಸಂಗತಿ ಎಂದರೆ, ಬಳ್ಳಾರಿ ಮತ್ತು ಶಿವಮೊಗ್ಗ ನಗರಗಳ ಗಾಳಿಯ ಗುಣಮಟ್ಟ ಬೆಂಗಳೂರನ್ನೂ ಮೀರಿಸುವ ಮಟ್ಟಕ್ಕೆ ಕುಸಿದಿದೆ.
ಬಳ್ಳಾರಿ–ಶಿವಮೊಗ್ಗದಲ್ಲಿ ಗಂಭೀರ ಪರಿಸ್ಥಿತಿ
ಬಳ್ಳಾರಿಯಲ್ಲಿ ಇಂದಿನ AQI 196ಕ್ಕೆ ತಲುಪಿದ್ದು, ಶಿವಮೊಗ್ಗದಲ್ಲಿ 184 ದಾಖಲಾಗಿದೆ. ಈ ಮಟ್ಟದ ವಾಯು ಗುಣಮಟ್ಟ ಮುಂದುವರಿದರೆ, ಮುಂದಿನ ದಿನಗಳಲ್ಲಿ ಉತ್ತರ ಭಾರತದ ಮಾದರಿಯ ತೀವ್ರ ವಾಯು ಮಾಲಿನ್ಯ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.
ಈ ಕಳಪೆ ಗಾಳಿಯಿಂದ ಅಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಹೃದಯ ಸಮಸ್ಯೆಗಳು ಹಾಗೂ ದೀರ್ಘಾವಧಿಯಲ್ಲಿ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಇಂದೂ ಮಳೆ ಇಲ್ಲ! ಬೆಂಗಳೂರು ಸೇರಿ ರಾಜ್ಯದಲ್ಲಿ ಚಳಿ–ಒಣಹವೆ ಪ್ರಭಾವ
PM2.5, PM10 ಕಣಗಳ ಅಪಾಯ ಎಷ್ಟು?
ಗಾಳಿಯಲ್ಲಿ ಹೆಚ್ಚಿರುವ PM2.5 ಮತ್ತು PM10 ಅತಿ ಸೂಕ್ಷ್ಮ ಧೂಳಿನ ಕಣಗಳು ನೇರವಾಗಿ ಆರೋಗ್ಯಕ್ಕೆ ದೊಡ್ಡ ಹೊಡೆತ ನೀಡುತ್ತವೆ. PM2.5 ಮಾನವನ ಕೂದಲಿಗಿಂತಲೂ ಬಹಳ ತೆಳುವಾದ ಕಣವಾಗಿದ್ದು, ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದೊಳಗೆ ಪ್ರವೇಶಿಸಿ ರಕ್ತವನ್ನೂ ಸೇರುತ್ತದೆ.
ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 84, PM10 ಪ್ರಮಾಣ 109 ದಾಖಲಾಗಿದೆ. ಈ ಕಣಗಳು ದೀರ್ಘಾವಧಿಯಲ್ಲಿ ಉಸಿರಾಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ.
ಯಾರಿಗೆ ಹೆಚ್ಚು ಅಪಾಯ?
ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ಈಗಾಗಲೇ ಶ್ವಾಸಕೋಶ ಅಥವಾ ಹೃದಯ ಸಮಸ್ಯೆ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವುದು, ಮಾಸ್ಕ್ ಬಳಕೆ, ವಾಹನ ಸಂಚಾರ ಕಡಿಮೆ ಮಾಡುವುದು ಮತ್ತು ಹಸಿರು ವಾತಾವರಣ ಹೆಚ್ಚಿಸುವುದು ಈಗ ತುರ್ತು ಅಗತ್ಯವಾಗಿದೆ.
ರಾಜ್ಯದ ಪ್ರಮುಖ ನಗರಗಳ ಇಂದಿನ AQI
ಬೆಂಗಳೂರು – 173
ಬಳ್ಳಾರಿ – 196
ಶಿವಮೊಗ್ಗ – 184
ಮಂಗಳೂರು – 170
ಮೈಸೂರು – 168
ಉಡುಪಿ – 168
ವಿಜಯಪುರ – 160
ಹುಬ್ಬಳ್ಳಿ – 156
ಬೆಳಗಾವಿ – 144
ಕಲಬುರಗಿ – 134



