Karnataka AQI: ಬೆಂಗಳೂರು ಸೇರಿ ಕರ್ನಾಟಕ ರಾಜ್ಯದ 4 ನಗರಗಳಲ್ಲಿ ಕಳಪೆ ವಾಯು ಗುಣಮಟ್ಟ! ಯಾವ ನಗರಗಳು?
ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ ನಾಲ್ಕು ನಗರಗಳನ್ನು ವಾಯು ಗುಣಮಟ್ಟ ಸಾಧಿಸದ ಪ್ರದೇಶಗಳೆಂದು ಗುರುತಿಸಲಾಗಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ವಿಶೇಷ ಕ್ರಿಯಾ ಯೋಜನೆಗಳನ್ನು ಜಾರಿಗೊಳಿಸಿದೆ.
- ವಾಯು ಗುಣಮಟ್ಟ, ರಾಜ್ಯದ 4 ಪ್ರಮುಖ ನಗರಗಳಲ್ಲಿ ಆತಂಕ
- ಬೆಂಗಳೂರು ಸೇರಿ ನಾಲ್ಕು ನಗರಗಳು ಪಟ್ಟಿಯಲ್ಲಿ
- ಮಾಲಿನ್ಯ ನಿಯಂತ್ರಣ ಕ್ರಮ ಜಾರಿಗೆ ಕ್ರಿಯಾ ಯೋಜನೆ
Karnataka AQI: ದೆಹಲಿ ಮಾದರಿಯ ವಾಯು ಮಾಲಿನ್ಯ ಪರಿಸ್ಥಿತಿ ಕರ್ನಾಟಕದಲ್ಲೂ ಕಾಣಿಸಿಕೊಳ್ಳಬಹುದೇ ಎಂಬ ಆತಂಕ ನಿಧಾನವಾಗಿ ಗಂಭೀರವಾಗುತ್ತಿದೆ. ರಾಜ್ಯದ ನಾಲ್ಕು ನಗರಗಳಲ್ಲಿ ವಾಯು ಗುಣಮಟ್ಟ ನಿರೀಕ್ಷಿತ ಮಟ್ಟಕ್ಕಿಂತ ಕೆಳಗೆ ಇರುವುದಾಗಿ ಕೇಂದ್ರದ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಗುರುತಿಸಿದೆ.
ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ (NCAP) ಅಡಿಯಲ್ಲಿ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮತ್ತು ದಾವಣಗೆರೆ ನಗರಗಳನ್ನು ‘ವಾಯು ಗುಣಮಟ್ಟ ಸಾಧಿಸದ ನಗರಗಳು’ ಎಂದು ಪಟ್ಟಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸರ್ಕಾರ ವಿಭಿನ್ನ ಮಟ್ಟದ ಕ್ರಿಯಾ ಯೋಜನೆಗಳನ್ನು ಜಾರಿಗೆ ತಂದಿದೆ.
ಬೆಂಗಳೂರು ನಗರಕ್ಕೆ (Bengaluru AQI) ವಿಶೇಷವಾಗಿ 44 ಅಂಶಗಳ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಉಳಿದ ಮೂರು ನಗರಗಳಿಗೆ 27 ಅಂಶಗಳ ಯೋಜನೆ ಅನುಷ್ಠಾನದಲ್ಲಿದೆ. ವಾಹನಗಳಿಂದ ಹೊರಸೂಸುವ ಹೊಗೆ ಪ್ರಮುಖ ಕಾರಣವಾಗಿರುವುದರಿಂದ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಹಯೋಗದಲ್ಲಿ ಸಂಚಾರಿ ಹೊಗೆ ತಪಾಸಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ವಾಹನ ಮಾಲಿನ್ಯ ತಡೆಗೆ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಹೊಗೆಯನ್ನು ಪರೀಕ್ಷಿಸುವ ಸುಸಜ್ಜಿತ 12 ಸಂಚಾರಿ ಹೊಗೆ ಮಾಪನ ವಾಹನಗಳನ್ನು ಖರೀದಿಸಲಾಗಿದೆ. ಇದರಲ್ಲಿ ಆರು ವಾಹನಗಳನ್ನು ಬೆಂಗಳೂರಿಗೆ ನಿಯೋಜಿಸಲಾಗಿದೆ. ಮಿತಿಗಿಂತ ಹೆಚ್ಚು ಹೊಗೆ ಹೊರಸೂಸುವ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ವಾಯು ಗುಣಮಟ್ಟದ ಮೇಲ್ವಿಚಾರಣೆಗೆ ಒಟ್ಟು 43 ಮಾನವ ಚಾಲಿತ ವಾಯು ಮಾಪನ ಕೇಂದ್ರಗಳು ಹಾಗೂ 39 ನಿರಂತರ ಪರಿವೇಶಕ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ PM10, PM2.5, SO₂, NO₂, CO, ಓಜೋನ್ ಸೇರಿದಂತೆ ಎಂಟು ಪ್ರಮುಖ ಮಲಿನಕಾರಕಗಳನ್ನು ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ಮಾಪನ ಮಾಡಲಾಗುತ್ತಿದೆ.
ಸಂಗ್ರಹಿಸಲಾದ ವಾಯು ಗುಣಮಟ್ಟದ ದತ್ತಾಂಶವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವಿದ್ಯುನ್ಮಾನವಾಗಿ ಕಳುಹಿಸಲಾಗುತ್ತಿದ್ದು, ಸಾರ್ವಜನಿಕರ ಮಾಹಿತಿಿಗಾಗಿ ಅಧಿಕೃತ ಜಾಲತಾಣದಲ್ಲೂ ಪ್ರಕಟಿಸಲಾಗುತ್ತಿದೆ. ಪ್ರತಿದಿನ ಬೆಂಗಳೂರಿನ 11 ಕೇಂದ್ರಗಳ AQI ಮಾಹಿತಿಯನ್ನು ಸಂಬಂಧಿಸಿದ ಇಲಾಖೆಗಳಿಗೂ ಎಸ್‌ಎಂಎಸ್ ಮೂಲಕ ರವಾನಿಸಲಾಗುತ್ತಿದೆ.
ಮಾಲಿನ್ಯದ ಮೂಲಗಳನ್ನು ನಿಖರವಾಗಿ ಗುರುತಿಸಲು ಬೆಂಗಳೂರಿನಲ್ಲಿ CSTEP ಹಾಗೂ ಇತರ ನಗರಗಳಲ್ಲಿ IIT ಮದ್ರಾಸ್ ಅಧ್ಯಯನ ನಡೆಸಿದೆ. ಈ ವರದಿಗಳ ಆಧಾರದ ಮೇಲೆ ಕ್ರಿಯಾ ಯೋಜನೆಗಳನ್ನು ಪರಿಷ್ಕರಿಸಿ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮಾಲಿನ್ಯ ತಡೆಗೆ ಕರ್ನಾಟಕ ಸರ್ಕಾರದ ಕ್ರಮಗಳು
- ಕೈಗಾರಿಕೆಗಳಿಗೆ ನಿಗದಿತ ವಾಯು ಮಾನದಂಡ ಕಡ್ಡಾಯ
- ಹೆಚ್ಚಿನ ಮಾಲಿನ್ಯ ಉಂಟುಮಾಡುವ ಘಟಕಗಳಲ್ಲಿ ನಿರಂತರ ಎಮಿಷನ್ ಮಾಪನ ಉಪಕರಣ ಅಳವಡಿಕೆ
- ಘನತ್ಯಾಜ್ಯ ಮತ್ತು ಎಲೆ-ರೆಂಬೆ ಸುಡುವುದಕ್ಕೆ ಸಂಪೂರ್ಣ ನಿಷೇಧ
- ಕಟ್ಟಡ ನಿರ್ಮಾಣ ತ್ಯಾಜ್ಯ ಸಾಗಣೆಗೆ ಮುಚ್ಚಿದ ವಾಹನ ಮತ್ತು ನೀರಿನ ಸಿಂಪರಣೆ ಕಡ್ಡಾಯ
ದಿನ ಭವಿಷ್ಯ 29-10-2026: ಮಹಾಲಕ್ಷ್ಮಿ ರಾಜಯೋಗ; 4 ರಾಶಿಗಳಿಗೆ ಶುಭ ಸೂಚನೆ! ಹಣಕಾಸು ಭವಿಷ್ಯ ಉಜ್ವಲ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story
ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ತೆರೆಯಲು ಸಿದ್ಧತೆ; ಗುರುವಾರದಿಂದ ಭಕ್ತರ ದರ್ಶನಕ್ಕೆ ವ್ಯವಸ್ಥೆ
Read the story
ಬೆಂಗಳೂರು: ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ! ಮನೆಯಲ್ಲೇ ಸ್ವಂತ ಉದ್ಯಮ ಶುರು ಮಾಡಿ
Read the story
ಬೆಂಗಳೂರು ಮೆಟ್ರೋ ಜಾಲ, ಹೊಸಕೋಟೆ, ತುಮಕೂರಿಗೂ ವಿಸ್ತರಣೆ! ಈ ಭಾಗದ ಭೂಮಿಗೆ ಬಂಗಾರದ ಬೆಲೆ
Read the story
ಇಳುವರಿ ಕುಸಿತ, ಮಾರುಕಟ್ಟೆಗೆ ಪೂರೈಕೆ ಕಡಿಮೆ! ಈರುಳ್ಳಿ ಬೆಲೆ ಭಾರೀ ಏರಿಕೆ
Read the story



