ಕಾಂಗ್ರೆಸ್ ಸರ್ಕಾರವು ಚುನಾವಣೆ ವೇಳೆ ರಾಜ್ಯದ ಜನತೆಗೆ 5 ಗ್ಯಾರಂಟಿ ಯೋಜನೆಗಳನ್ನು (Schemes) ನೀಡುವುದಾಗಿ ತಿಳಿಸಿದಾಗ, ಅನೇಕ ಜನರು ಟೀಕೆ ಮಾಡಿದ್ದಿದೆ. ಈ 5 ಯೋಜನೆಗಳು ಸುಳ್ಳು ಗ್ಯಾರಂಟಿ ಯೋಜನೆಗಳು, ಇದೆಲ್ಲವೂ ಜಾರಿಗೆ ತರುವುದಿಲ್ಲ ಎಂದು ಟೀಕೆ ಮಾಡಲಾಗಿತ್ತು.
ಆದರೆ ಕಾಂಗ್ರೆಸ್ ಸರ್ಕಾರ ಆ ಮಾತಿಗೆ ವಿರುದ್ಧವಾಗಿ ನಿಂತಿದೆ. ರಾಜ್ಯದಲ್ಲಿ ಈಗ ಬಹುತೇಕ ಯೋಜನೆಗಳನ್ನು (Govt Schemes) ಜಾರಿಗೆ ತಂದು ನುಡಿದಂತೆ ನಡೆಯುವ ಸರ್ಕಾರ ಎಂದು ಹೆಸರು ಪಡೆದಿದೆ..
ಈ 5 ಯೋಜನೆಗಳ ಜೊತೆಗೆ ಇದೀಗ ಸರ್ಕಾರವು ಮತ್ತೊಂದು ಹೊಸ ಯೋಜನೆಯನ್ನು ಜನರಿಗಾಗಿ ತರುತ್ತಿದೆ. ಈವರೆಗೂ ಹೆಂಗಸರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಣಕ್ಕೆ (Education Schemes) ಸಂಬಂಧಿಸಿದ ಹಾಗೆ ಯೋಜನೆಗಳನ್ನು ಜಾರಿಗೆ ತರಲಾಗಿತ್ತು, ಇದೀಗ ರಾಜ್ಯದ ಜನತೆಯ ಆರೋಗ್ಯಕ್ಕಾಗಿ ಹೊಸದೊಂದು ಯೋಜನೆಯನ್ನು (Health Scheme) ಜಾರಿಗೆ ತರುವ ಪ್ಲಾನ್ ಮಾಡಿದೆ ಸರ್ಕಾರ.
ಫ್ರೀ ಕರೆಂಟ್ ಸ್ಕೀಮ್! ಗೃಹಜ್ಯೋತಿ ಯೋಜನೆಯಲ್ಲಿ ಧಿಡೀರ್ ಹೊಸ ಬದಲಾವಣೆ ತಂದ ರಾಜ್ಯ ಸರ್ಕಾರ
ಈ ಹೊಸ ಯೋಜನೆಯ ಹೆಸರು ಗೃಹ ಆರೋಗ್ಯ ಯೋಜನೆ (Gruha Arogya Yojane) ಆಗಿದೆ. ಈ ಯೋಜನೆಯ ಮೂಲಕ ರಾಜ್ಯದ ಪ್ರತಿ ಮನೆಗಳಿಗೆ ವೈದ್ಯರನ್ನು ಕಳಿಸಿ ಜನರ ಆರೋಗ್ಯ ತಪಾಸಣೆ (Health Checkup) ಮಾಡಿಸಲಾಗುತ್ತದೆ.
ಈ ಮೂಲಕ ಜನರಿಗೆ ಮನೆಯಲ್ಲೇ ಔಷಧಿ ನೀಡಲಾಗುತ್ತದೆ. ವೈದ್ಯರು (Doctors) ಹಳ್ಳಿ ಮತ್ತು ಗ್ರಾಮೀಣ ಮಟ್ಟದಲ್ಲಿ ಪ್ರತಿಯೊಂದು ಮನೆಮನೆಗೆ ಭೇಟಿ ನೀಡಿ, ಮನೆಯಲ್ಲಿರುವ ಎಲ್ಲರ ಆರೋಗ್ಯವನ್ನು ಚೆಕ್ ಮಾಡಿ, ಬಿಪಿ ಶುಗರ್ ಇದ್ದರೆ ಅಂಥವರಿಗೆ ಅಲ್ಲೇ ಔಷಧಿಗಳನ್ನು ಒದಗಿಸಲಾಗುತ್ತದೆ. ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆ ಇದ್ದವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬನ್ನಿ ಎಂದು ಸಲಹೆ ನೀಡುತ್ತಾರೆ.
ಈ ಯೋಜನೆಯ ಹಿಂದೆ ಪ್ರಮುಖವಾದ ಉದ್ದೇಶವಿದೆ. ಈ ಯೋಜನೆ ಈಗ ಪ್ರಯೋಗ ಮಾಡುವ ಹಂತದಲ್ಲಿದ್ದು, ಮೊದಲನೆಯದಾಗಿ 8 ಜಿಲ್ಲೆಗಳಲ್ಲಿ ಜಾರಿಗೆ ತರಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ..
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜೊತೆ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರೋಗ್ಯ ಸಮಸ್ಯೆ ಅಥವಾ ಯಾವುದೇ ರೋಗ ಬರುವ ಮೊದಲೇ ಚಿಕಿತ್ಸೆ ಕೊಡುವುದು ಹಾಗೆಯೇ ಮೊದಲ ಸ್ಟೇಜ್ ನಲ್ಲಿ ಇರುವಾಗಲೇ ರೋಗ ಹೆಚ್ಚಾಗದ ಹಾಗೆ ತಡೆಗಟ್ಟುವುದು ಈ ಯೋಜನೆಯ ಉದ್ದೇಶವಾಗಿದೆ.
ಹೊಸ ಬಿಪಿಎಲ್ ಕಾರ್ಡ್ ಅಪ್ಲೈ ಮಾಡಿರುವವರಿಗೆ ಸಿಹಿ ಸುದ್ದಿ! ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್
ಈ ಯೋಜನೆಯಲ್ಲಿ ಬಾಲಕರಿಂದ ಹಿಡಿದು ವೃದ್ಧರವರೆಗು ಆರೋಗ್ಯ ಸೌಲಭ್ಯ ಮನೆಗೆ ಬರುತ್ತದೆ ಎಂದು ಆರೋಗ್ಯ ಸಚಿವ ಆಗಿರುವ ದಿನೇಶ್ ಗುಂಡೂರಾವ್ ಅವರು ಕೂಡ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರಿಗೆ ಒಳ್ಳೆಯ ಸೌಲಭ್ಯಗಳನ್ನು ನೀಡಲು ಈ ಯೋಜನೆಯನ್ನು ಜಾರಿಗೆ ತರುವ ಚಿಂತನೆ ನಡೆಸಿದ್ದು, ಇನ್ನುಮುಂದೆ ಜನರ ಆರೋಗ್ಯಕ್ಕೆ ಸರ್ಕಾರ ಹೆಚ್ಚು ಸಹಾಯ ಮಾಡುತ್ತದೆ.
Another scheme has been implemented by the government
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.