ಗೃಹಲಕ್ಷ್ಮಿ ಯೋಜನೆ ಆಯ್ತು, ಈಗ ₹1500 ಸಿಗುವ ಇನ್ನೊಂದು ಮಹಿಳಾ ಯೋಜನೆಗೆ ಅರ್ಜಿ ಸಲ್ಲಿಕೆ ಶುರು! ನೋಂದಣಿ ಮಾಡಿಕೊಳ್ಳಿ

ಗೃಹ ಲಕ್ಷ್ಮಿ ಯೋಜನೆ ಬೆನ್ನಲ್ಲೇ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ನಾರಿ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದೆ.

ರಾಜ್ಯದ ಜನರ ನಿರ್ಧಾರ ಬದಲಾಗಿ ಸರ್ಕಾರ ಕೂಡ ಬದಲಾಗಿದೆ. ಈಗ ಜನರಲ್ಲಿ ಯೋಜನೆಗಳ ಭರವಸೆ ಮೂಡಿಸಿರುವ ಕಾರಣದಿಂದ ಜನರ ಮನಸ್ಸು ಹಾಗೂ ಮತ ಕೊಡ ಕಾಂಗ್ರೆಸ್ ಕಡೆಗೆ ವಾಲಿದೆ. ಈ ಕಾರಣದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆಯುತ್ತಿದೆ.

ಈ ಮೂರು ತಿಂಗಳ ಅವಧಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ತಾವು ತಿಳಿಸಿದ್ದ ಐದು ಭರವಸೆಯ ಯೋಜನೆಗಳಲ್ಲಿ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಇನ್ನುಳಿದ ಯೋಜನೆಗಳನ್ನು ಆದಷ್ಟು ಬೇಗ ಜಾರಿಗೆ ತರುವ ಪ್ರಯತ್ನದಲ್ಲಿ ಇದ್ದಾರೆ. ಸರ್ಕಾರದ ಯೋಜನೆಗಳಲ್ಲಿ ಹೆಚ್ಚು ಒತ್ತು ರಾಜ್ಯದ ಮಹಿಳೆಯರಿಗೆ ಹಾಗೂ ರೈತರಿಗೆ ನೀಡಲಾಗುತ್ತಿದೆ ಎಂದರೆ ತಪ್ಪಾಗಲಾರದು.

ಇದೀಗ ಜುಲೈ 17 ರಂದು ಕರ್ನಾಟಕದ ಲಕ್ಷ್ಮಿಯರಿಗೆ ಗೃಹ ಲಕ್ಷ್ಮಿ (Gruha Lakshmi Scheme) ಯೋಜನೆ ಜಾರಿಗೆ ಬಂದಿದ್ದು , ಈ ಯೋಜನೆಯ ಫಲವನ್ನು ಪಡೆಯಲು ಫಲಾನುಭವಿಗಳು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕೋಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಅರ್ಜಿ ಸಲ್ಲಿಸುತ್ತಿದ್ದಾರೆ.

ಗೃಹಲಕ್ಷ್ಮಿ ಯೋಜನೆ ಆಯ್ತು, ಈಗ ₹1500 ಸಿಗುವ ಇನ್ನೊಂದು ಮಹಿಳಾ ಯೋಜನೆಗೆ ಅರ್ಜಿ ಸಲ್ಲಿಕೆ ಶುರು! ನೋಂದಣಿ ಮಾಡಿಕೊಳ್ಳಿ - Kannada News

ಇದರ ಬೆನ್ನಲ್ಲೇ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆ ಸಿಹಿ ಸುದ್ದಿ ಏನು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.. ಸರ್ಕಾರ ಈಗ ನಾರಿ ಸಮ್ಮಾನ್ ಯೋಜನೆಯನ್ನು (Naari Samman Yojane) ಜಾರಿಗೆ ತಂದಿದೆ. ಈ ಹೊಸ ಯೋಜನೆ ಕೂಡ ರಾಜ್ಯ ಸರ್ಕಾರ ಮಹಿಳೆಯರಿಗೆ ತಂದಿದೆ.

ಈ ಯೋಜನೆಯಿಂದ ರಾಜ್ಯದ ಒಂಟಿ ಮಹಿಳೆಯರಿಗೆ ಸರ್ಕಾರದ ವತಿಯಿಂದ 500 ರಿಂದ 1500 ರೂಪಾಯಿಯವರೆಗು ಮನೆಗೆ ಬಳಸುವ ಗ್ಯಾಸ್ ಸಿಲಿಂಡರ್ (LPG Gas Cylinder) ಪಡೆಯುವಂತಹ ಅವಕಾಶ ಮಾಡಿಕೊಟ್ಟಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಯೋಜನೆಯೇ ಪ್ರಾಮುಖ್ಯತೆ, ಉಪಯೋಗಗಳನ್ನು ತಿಳಿಯಲು ಮುಂದಿನ ಸಾಲುಗಳನ್ನು ಓದಿ..

ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿರುವ ಹೊಸ ಯೋಜನೆಯಾಗಿರುವ “ನಾರಿ ಸಮ್ಮಾನ್” ಯೋಜನೆಗೆ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೀವು ಕೂಡ ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಿ. ರಾಜ್ಯ ಸರ್ಕಾರ ಈಗ ಅಡಿಯಲ್ಲಿ ಮಹಿಳೆಯ ಪರವಾಗಿ ಹಾಗೂ ಅವರಿಗೆ ಒತ್ತಾಸೆಯಾಗಿ ನಿಲ್ಲುವಂತಹ ಯೋಜನೆಗಳನ್ನು ಬಿಡುಗಡೆ ಮಾಡುತ್ತಾ ಬರುತ್ತಿದೆ.

Another scheme like gruha lakshmi yojane apply today

ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾರಿ ಸಮ್ಮಾನ್ ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ 500 ರೂ.ಗೆ ಗ್ಯಾಸ್ ಸಿಲಿಂಡರ್ ಮತ್ತು ತಿಂಗಳಿಗೆ 1500 ರೂ.ಗೆ ಪಿಂಚಣಿ ಯಂತೆ ನೀಡುವುದಾಗಿ ನಿರ್ಧಾರ ಮಾಡಿದೆ. ನಾರಿ ಸಮ್ಮಾನ್ ಯೋಜನೆಯ ಮೂಲಕ ರಾಜ್ಯದ ಮಹಿಳೆಯರಿಗೆ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ವಿತರಿಸಲಾಗುವುದು.

ಈ ಯೋಜನೆಯ ಮೂಲಕ ಸರ್ಕಾರದಿಂದ ನೀಡುತ್ತಿರುವ ಹಣದ ಲಾಭದ ಮೂಲಕ ಎಲ್ಲಾ ಜಾತಿ, ಧರ್ಮದ ಒಂಟಿ ಮಹಿಳೆಯರಿಗೆ ಅನುಕೂಲವಾಗಲಿದೆ. ಆಸಕ್ತಿ ಇರುವ ಒಂಟಿ ಮಹಿಳೆಯರು ಸರ್ಕಾರ ಅನ್ವಯ ಮಾಡಿರುವ ನಿಗದಿತ ಷರತ್ತುಗಳನ್ನು ಅನುಸರಿಸಿ ಅರ್ಜಿಗಳನ್ನು ಸಲ್ಲಿಸಿ ಲಾಭವನ್ನು ಪಡೆಯಬಹುದಾಗಿದೆ.

ಈ ಯೋಜನೆಗೆ ಅರ್ಜಿ ಹಾಕುವವರು, ಆಯ್ಕೆಯಾದರೆ ಅವರ ಖಾತೆಗೆ ಹಣ ಜಮಾ ಆಗುತ್ತಡೆ. ಅತಿ ಶೀಘ್ರದಲ್ಲಿ ಆಫ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸುವ ಅವಕಾಶ ಮಾಡಿಕೊಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ನಾರಿ ಸಮ್ಮಾನ್ ಯೋಜನೆಗೆ ಬೇಕಾಗಿರುವ ದಾಖಲೆಗಳು ಹೀಗಿದೆ.. ಅರ್ಜಿ ದಾರರ ನಿವಾಸ ಪುರಾವೆ, ಮಹಿಳಾ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್ಬುಕ್, ಸಂಯೋಜಿತ ID, ಮೊಬೈಲ್ ನಂಬರ್, ಪಾಸ್ಪೋರ್ಟ್ ಗಾತ್ರದ ಫೋಟೋ, ಈ ಎಲ್ಲಾ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಬಹುದು.

Another scheme like gruha lakshmi yojane apply today

Follow us On

FaceBook Google News

Another scheme like gruha lakshmi yojane apply today