ಗೃಹಲಕ್ಷ್ಮಿ ಯೋಜನೆ ಜೊತೆಗೆ ಮಹಿಳೆಯರಿಗೆ ಮತ್ತೊಂದು ವಿಶೇಷ ಕೊಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಹಾಕಿ!
ಮಹಿಳೆಯರ ಆರ್ಥಿಕ ಸ್ವಾತಂತ್ರ್ಯದ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸದೊಂದು ಯೋಜನೆ ಶುರು ಮಾಡಿದೆ.
ಒಂದು ದೇಶ ಉನ್ನತ ಸ್ಥಾನ ತಲುಪಬೇಕು ಎಂದರೆ, ಮಹಿಳೆಯರು ಉತ್ತಮ ಸ್ಥಾನದಲ್ಲಿ ಇರುವುದು ಮುಖ್ಯವಾಗುತ್ತದೆ. ಒಂದು ಹೆಣ್ಣು ಸ್ವಾವಲಂಬಯಾಗಿದ್ದು, ಜೀವನದಲ್ಲಿ ಯಾರದ್ದೇ ತೊಂದರೆ ಇಲ್ಲದೆ ಬದುಕಿದರೆ, ಆಕೆಯ ಬಲ ಹೆಚ್ಚಾಗುತ್ತಿದೆ, ಅದರಿಂದ ಮನೆ ಇನ್ನು ಉತ್ತಮ ಸ್ಥಿತಿ ತಲುಪುತ್ತದೆ..
ಒಂದು ಹೆಣ್ಣು ಏಳಿಗೆಯಾದರೆ ಆಕೆಯ ಕುಟುಂಬ, ಒಂದು ಕುಟುಂಬದ ಏಳಿಗೆ ಶುರುವಾದರೆ ಇಡೀ ಊರು ಏಳಿಗೆ ಕಾಣುವುದಕ್ಕೆ ಶುರುವಾಗುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ಸ್ವಾವಲಂಬಯಾಗಿ ಇರುವುದು ಬಹಳ ಮುಖ್ಯ. ನಮ್ಮ ದೇಶದ ಹೆಣ್ಣುಮಕ್ಕಳು ಹಣಕಾಸಿನ ವಿಷಯಕ್ಕೆ ಯಾರ ಮೇಲೂ ಅವಲಂಬಿಸಿ ಇರಬಾರದು ಎಂದು ಕೇಂದ್ರ ಸರ್ಕಾರ ಹೆಣ್ಣುಮಕ್ಕಳಿಗಾಗಿ (Central Government Scheme) ಹಲವು ವಿಶೇಷ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.
ಕೆಲಸದ ಯೋಜನೆ, ಬ್ಯುಸಿನೆಸ್ ಯೋಜನೆ ಇಂಥ ಹಲವು ಯೋಜನೆಗಳು ಇರಲಿದ್ದು, ಈ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ, ಹೆಣ್ಣಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯದ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸದೊಂದು ಯೋಜನೆ ಶುರು ಮಾಡಿದೆ. ಇದು ಎಲ್ಲಾ ಹೆಂಗಸರಿಗೆ ಹೊಲಿಗೆ ಯಂತ್ರ (Sewing Machine Scheme) ಕೊಡುವ ಯೋಜನೆ ಆಗಿದೆ.
ಇದರಿಂದಾಗಿ ಹಣಕಾಸಿನ ವಿಷಯದಲ್ಲಿ ಮಹಿಳೆಯರು ಸ್ವತಾಂತ್ರ್ಯ ಹೊಂದಬೇಕು, ಎಲ್ಲಾ ರೀತಿಗಳಲ್ಲಿ ಅಭಿವೃದ್ಧಿಯಾಗಬೇಕು ಎನ್ನುವುದಾಗಿದೆ. ದೇಶದಲ್ಲಿರುವ 18 ರಿಂದ 55 ವರ್ಷದ ಒಳಗಿನ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರ ಹೊಲಿಗೆ ಯಂತ್ರ (Tailoring Machine) ಕೊಡಲಿದೆ. ಕೇಂದ್ರ ಸರ್ಕಾರ ವ ಪ್ರಧಾನ ಮಂತ್ರಿಗಳು ಹೊಲಿಗೆ ಯಂತ್ರ ಯೋಜನೆಯಿಂದ (Pradhana Mantri Sewing Machine Yojane) ಈ ಯೋಜನೆಯನ್ನು ಜಾರಿಗೆ ತಂದಿದೆ.
ನಿಮ್ಮ ಮನೆಯಲ್ಲು 18 ವರ್ಷ ಮೇಲ್ಪಟ್ಟ ಮಹಿಳೆಯರು ಇದ್ದರೆ, ಖಂಡಿತವಾಗಿ ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಸೌಲಭ್ಯ ಪಡೆಯಬಹುದು. ಎಲ್ಲಾ ಹೆಣ್ಣುಮಕ್ಕಳು ಸ್ವಂತ ಕೆಲಸದ ಮೂಲಕ ಬದುಕ ಕಟ್ಟಿಕೊಳ್ಳಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶ. ಈ ಯೋಜನೆಯ ಫಲವನ್ನು ಹೆಣ್ಣುಮಕ್ಕಳು ಪಡೆದುಕೊಳ್ಳೋದು ಹೇಗೆ?
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಇದರಿಂದ ಏನೆಲ್ಲಾ ಪ್ರಯೋಜನ ಇದೆ.. ಎಲ್ಲವನ್ನು ತಿಳಿಸುತ್ತೇವೆ.. ಕೇಂದ್ರ ಸರ್ಕಾರದ ಈ ಆದೇಶದ ರೀತಿಯಲ್ಲೇ ನಮ್ಮ ರಾಜ್ಯದಲ್ಲಿ ಕೂಡ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರದ ಸೌಲಭ್ಯ ಸಿಗಲಿದ್ದು, ಸುಮಾರು 50,000 ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿ, ಹೊಲಿಗೆ ಯಂತ್ರವನ್ನು ನಿಮ್ಮದಾಗಿಸಿಕೊಳ್ಳಬಹುದು.
ಈ ಯೋಜನೆಗೆ ಅರ್ಜಿ ಹಾಕಿ ಹೊಲಿಗೆ ಯಂತ್ರ ಪಡೆಯಬಹುದು. ಕಷ್ಟದಲ್ಲಿರುವ ಬಡ ವರ್ಗದ ಹೆಣ್ಣುಮಕ್ಕಳಿಗಾಗಿ ಈ ಯೋಜನೆಯನ್ನು ತರಲಾಗಿದ್ದು, ಮನೆಯಿಂದಲೇ ದುಡಿದು ತಮ್ಮ ಕುಟುಂಬವನ್ನು ನೋಡಿಕೊಳ್ಳಬಹುದು. ಈ ಯೋಜನೆಗೆ ಅರ್ಜಿಯನ್ನು http://www.india.gov.in ಈ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಈ ಕೂಡಲೇ ಪ್ರಧಾನ ಮಂತ್ರಿ ಉಚಿತ ಹೊಲಿಗೆ ಯಂತ್ರದ ಯೋಜನೆಗೆ ಅರ್ಜಿ ಸಲ್ಲಿಸಿ, ಹೊಲಿಗೆ ಯಂತ್ರವನ್ನು ಪಡೆದು, ಆರ್ಥಿಕವಾಗಿ ಸ್ವಾತಂತ್ರ್ಯರಾಗಿ. ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಿ.
Apply for sewing machine scheme from central government
Follow us On
Google News |