‘ಗಾಂಧಿ ಭಾರತ’ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಕಾಂಗ್ರೆಸ್ ನಾಯಕರ ಆಗಮನ
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ರಾಷ್ಟ್ರೀಯ ನಾಯಕರು ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ 'ಗಾಂಧಿ ಭಾರತ' ಶತಮಾನೋತ್ಸವ ಅಧಿವೇಶನದಲ್ಲಿ ಭಾಗವಹಿಸಿದ್ದಾರೆ, ಇದು ಎರಡು ದಿನಗಳ ಮಟ್ಟಿಗೆ ನಡೆಯಲಿದೆ.
ಬೆಳಗಾವಿ (Belagavi): ಬೆಳಗಾವಿ ನಗರದಲ್ಲಿ ‘ಗಾಂಧಿ ಭಾರತ’ (Gandhi Bharat) ಹೆಸರಿನ ಕಾಂಗ್ರೆಸ್ ಅಧಿವೇಶನ ಇಂದು ಪ್ರಾರಂಭವಾಗಿದ್ದು, ಎರಡು ದಿನಗಳ ಕಾಲ ನಡೆಯಲಿದೆ. ಈ ವೇಳೆ ದೇಶದ ವಿವಿಧೆಡೆಗಳಿಂದ ಕಾಂಗ್ರೆಸ್ (Congress) ನಾಯಕರು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್ ಶತಮಾನೋತ್ಸವ ಅಧಿವೇಶನದ ಪ್ರಯುಕ್ತ ಬೆಳಗಾವಿ ನಗರದಾದ್ಯಂತ ಕಾಂಗ್ರೆಸ್ ಬಾವುಟಗಳು ಮತ್ತು ನಾಯಕರ ಕಟೌಟ್ಗಳು ಕಂಗೊಳಿಸುತ್ತಿವೆ. ಬೆಳಗಾವಿಗೆ ಆಗಮಿಸಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಕ್ಕು, ಮಾಜಿ ಕೇಂದ್ರ ಸಚಿವ ಶಶಿ ತರೂರ್, ಯುವ ನಾಯಕ ಕನ್ನಯ್ಯಾ ಕುಮಾರ್ ಸೇರಿದಂತೆ ಇತರರಿಗೆ ಭರ್ಜರಿ ಸ್ವಾಗತ ಕೋರಲಾಯಿತು.
ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ನೇತೃತ್ವದ ತಂಡವು ಬರುವ ಪ್ರಮುಖರ ಸ್ವಾಗತ ಆಯೋಜಿಸಿತ್ತು. ಯುವತಿಯರು ಹಾಡು ಮತ್ತು ನೃತ್ಯ ಮೂಲಕ ವಿಶಿಷ್ಟ ಸ್ವಾಗತ ನೀಡಿದ್ದು, ಸಮಾರಂಭವನ್ನು ಆರಂಭಿಸಲಾಯಿತು. ಕರ್ನಾಟಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಕೂಡ ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ.
Belagavi Gandhi Bharat Centenary Celebrations