Karnataka AQI: ಬೆಂಗಳೂರು ಸೇರಿದಂತೆ ಶಿವಮೊಗ್ಗ, ಬಳ್ಳಾರಿ ಗಾಳಿ ಗುಣಮಟ್ಟ ಮತ್ತಷ್ಟು ಕುಸಿತ

Karnataka AQI: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗಾಳಿಯ ಗುಣಮಟ್ಟ ಮತ್ತೆ ಕುಸಿದಿದ್ದು, ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ AQI ಬೆಂಗಳೂರಿಗಿಂತ ಕಳಪೆಯಾಗಿರುವುದು ಆರೋಗ್ಯ ತಜ್ಞರಲ್ಲಿ ಆತಂಕ ಹೆಚ್ಚಿಸಿದೆ

  • ಬೆಂಗಳೂರು ಏರ್ ಕ್ವಾಲಿಟಿ ಅನಾರೋಗ್ಯಕರ ಹಂತ
  • ಶಿವಮೊಗ್ಗ, ಬಳ್ಳಾರಿಯಲ್ಲಿ AQI ಬೆಂಗಳೂರಿಗಿಂತ ಹೆಚ್ಚು
  • ಕಳಪೆ ಏರ್ ಕ್ವಾಲಿಟಿಯಿಂದ ಆರೋಗ್ಯ ಅಪಾಯ

ಬೆಂಗಳೂರು (Bengaluru AQI): ಕೆಲ ದಿನಗಳ ಹಿಂದೆ ಕರ್ನಾಟಕದ ಕೆಲವು ನಗರಗಳಲ್ಲಿ ಗಾಳಿಯ ಗುಣಮಟ್ಟ (Karnataka Air Quality) ಸ್ವಲ್ಪ ಸುಧಾರಿಸಿದಂತೆ ಕಂಡಿತ್ತು. ಆದರೆ ಇತ್ತೀಚಿನ ಅಂಕಿಅಂಶಗಳು ಮತ್ತೆ ಆತಂಕ ಮೂಡಿಸಿವೆ. ರಾಜ್ಯದ ಹಲವೆಡೆ AQI ಅನಾರೋಗ್ಯಕರ ಮಟ್ಟದಲ್ಲೇ ಉಳಿದಿದ್ದು, ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೆಂಗಳೂರು ಮೀರಿಸಿದ ಶಿವಮೊಗ್ಗ, ಬಳ್ಳಾರಿ

ರಾಜಧಾನಿ ಬೆಂಗಳೂರಿನ AQI 162ರಲ್ಲಿದ್ದು ಅನಾರೋಗ್ಯಕರ ಹಂತದಲ್ಲಿದೆ. ಆದರೆ ಶಿವಮೊಗ್ಗ ಮತ್ತು ಬಳ್ಳಾರಿಯ ವಾಯು ಗುಣಮಟ್ಟ ಬೆಂಗಳೂರಿಗಿಂತಲೂ ಕೆಟ್ಟ ಸ್ಥಿತಿಗೆ ತಲುಪಿರುವುದು ಗಮನ ಸೆಳೆದಿದೆ. ಶಿವಮೊಗ್ಗದಲ್ಲಿ AQI ಏಕಾಏಕಿ 175ಕ್ಕೆ ಏರಿಕೆಯಾದರೆ, ಬಳ್ಳಾರಿಯಲ್ಲಿ 178 ದಾಖಲಾಗಿದೆ.

ಯಾರಿಗಿದೆ ಹೆಚ್ಚು ಅಪಾಯ?

ಈ ಮಟ್ಟದ ಕಳಪೆ ಗಾಳಿಯಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಹೆಚ್ಚಿನ ಅಪಾಯ ಎದುರಾಗಬಹುದು. ಅಸ್ತಮಾ, ಹೃದಯ ಸಂಬಂಧಿ ಸಮಸ್ಯೆ ಹಾಗೂ ಶ್ವಾಸಕೋಶ ಕಾಯಿಲೆಗಳಿರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ; ಮಳೆ ಇಲ್ಲ! ಬೆಂಗಳೂರು ಭಾಗದಲ್ಲಿ ಬೆಳಿಗ್ಗೆ ಮಂಜು, ರಾತ್ರಿ ಚಳಿ

Karnataka Air Quality
Karnataka Air Quality

WHO ಮಿತಿಗಿಂತ ಹೆಚ್ಚಾದ ಸೂಕ್ಷ್ಮ ಕಣಗಳು

ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಗಾಳಿಯಲ್ಲಿನ ಸೂಕ್ಷ್ಮ ಕಣಗಳ ಪ್ರಮಾಣ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಸಂಖ್ಯೆಯಲ್ಲಿ ಸಣ್ಣ ಏರಿಳಿತ ಕಂಡರೂ, ಒಟ್ಟಾರೆ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ಇಂದಿನ ಪ್ರಮುಖ ನಗರಗಳ AQI ಸ್ಥಿತಿ

ಬೆಂಗಳೂರು 162, ಶಿವಮೊಗ್ಗ 175, ಬಳ್ಳಾರಿ 178, ಮಂಗಳೂರು 156, ಹುಬ್ಬಳ್ಳಿ 156, ಉಡುಪಿ 157, ಬೆಳಗಾವಿ 138, ಕಲಬುರಗಿ 129, ವಿಜಯಪುರ 111, ಮೈಸೂರು 94.

ತಜ್ಞರ ಪ್ರಕಾರ 150ರ ಮೇಲ್ಪಟ್ಟ AQI ಅನಾರೋಗ್ಯಕರ ಹಂತಕ್ಕೆ ಸೇರುತ್ತದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories