ಭವಿಷ್ಯದಲ್ಲಿ ಇಂತಹವರಿಗೆ ರೇಷನ್ ಕಾರ್ಡ್ ಸಿಗಲ್ಲ, ಇದ್ದರೂ ಕೂಡ ರದ್ದು, ಶೀಘ್ರದಲ್ಲೇ ಕೇಂದ್ರದ ನಿರ್ಧಾರ
ರೇಷನ್ ಕಾರ್ಡ್ ಇದ್ದವರಿಗೆ ಕೇಂದ್ರದ ಬಿಗ್ ಅಪ್ಡೇಟ್: ಇನ್ಮೇಲೆ ಇಂತಹವರಿಗೆ ರೇಷನ್ ಕಾರ್ಡ್ (Ration Card Ban) ಸಿಗಲ್ಲ ಹಾಗು ಈಗಾಗಲೇ ಇದ್ದವರ ಕಾರ್ಡ್ ಕೂಡ ಬ್ಯಾನ್ ಆಗಲಿದೆ,
ಈ ರೀತಿಯ ರೇಷನ್ ಕಾರ್ಡ್ ಹೊಂದಿರುವ ರೇಷನ್ ಕಾರ್ಡ್(Ration Card) ಸಂಪೂರ್ಣವಾಗಿ ರದ್ದಾಗುತ್ತದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಈ ರೀತಿ ರೇಷನ್ ಕಾರ್ಡ್ ಹೊಂದಿರುವವರು ರೇಷನ್ ಕಾರ್ಡ್ ಅನ್ನು ಸೆರೆಂಡರ್ ಮಾಡದೆ ಹೋದಲ್ಲಿ ರೇಷನ್ ಕಾರ್ಡ್ ಅನ್ನು ರದ್ದುಪಡಿಸಿ ದಂಡವನ್ನು ವಿಧಿಸಲಾಗುತ್ತದೆ ಮಾತ್ರವಲ್ಲದೇ ಇದುವರೆಗೂ ಆ ರೇಷನ್ ಕಾರ್ಡ್ ಮೂಲಕ ಪಡೆದುಕೊಂಡಿರುವಂತಹ ರೇಷನ್ ಅನ್ನು ರಿಕವರಿ(Ration card recovery) ಮಾಡುವಂತಹ ಕೆಲಸವನ್ನು ಕೂಡ ಮಾಡಲಾಗುತ್ತದೆ.
ಇನ್ನು ಯಾವುದೇ ಕಾರಣಕ್ಕೂ ಕೂಡ ಅತ್ಯಂತ ಅಗತ್ಯವಿರುವಂತಹ ರೇಷನ್ ಕಾರ್ಡ್ ದಾರರಿಗೆ ಅವರಿಗೆ ಸಿಗಬೇಕಾಗಿರುವಂತಹ ಯೋಜನೆಗಳು ಬೇಕು ಅಂತಾನೆ ನಿಲ್ಲಿಸಿದ್ದೇ ಆದಲ್ಲಿ ನಿಮಗೂ ಕೂಡ ಸಂಪೂರ್ಣವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಭಾರತ ದೇಶದಲ್ಲಿ ಅನರ್ಹ ವ್ಯಕ್ತಿಗಳು ಕೂಡ ಬಡವರಿಗೆ ತಲುಪ ಬೇಕಾಗಿರುವ ರೇಷನ್ ಕಾರ್ಡ್ ಅನ್ನು ಪಡೆಯುತ್ತಿರುವ ಕಾರಣಕ್ಕಾಗಿ ಅವರ ಕಾರ್ಡ್ ಅನ್ನು ಸರೆಂಡರ್ ಮಾಡುವುದಕ್ಕೆ ಹೇಳಲಾಗಿದೆ.
ಈ ಪ್ರಮುಖ ರೀತಿಯಲ್ಲಿ ನಡೆಯುತ್ತಿದ ರೇಷನ್ ಕಾರ್ಡ್ ಪರೀಕ್ಷಣೆ
ಈಗಾಗಲೇ ಈ ಯೋಜನೆಯನ್ನು ಯೋಗಿ ಆದಿತ್ಯನಾಥ(Yogi Adityanath) ರವರ ಉತ್ತರ ಪ್ರದೇಶ ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ರೀತಿಯಲ್ಲಿ ಕೂಡ ಅಂದರೆ ಮೂರು ರೀತಿಯಲ್ಲಿ ಈ ವಿಚಾರದ ಬಗ್ಗೆ ಸಮೀಕ್ಷೆ ಹಾಗೂ ಪರೀಕ್ಷೆ ನಡೆಯಲಿದೆ. ಮೂರು ರೀತಿಯಲ್ಲಿ ಪರೀಕ್ಷೆ ನಡೆಸಿ ಯಾರಿಗೆಲ್ಲ ನಿಜಕ್ಕೂ ಕೂಡ ಸಿಗಬೇಕಾಗಿದೆಯೊ ಅವರಿಗೆ ಸಿಗುತ್ತಿಲ್ಲ ಎಂದಾದಲ್ಲಿ ಆ ವಿಚಾರದಲ್ಲಿ ಕೂಡ ಕೂಡಲೆ ಕಾರ್ಯಾಚರಣೆ ಮಾಡುವಂತಹ ಭರವಸೆಯನ್ನು ನೀಡಿದ್ದಾರೆ. ಅರ್ಹ ವ್ಯಕ್ತಿಗಳಿಗೆ ಅರ್ಹ ಮೌಲ್ಯದ ರೇಷನ್ ಅನ್ನು ವಿತರಿಸುವ ಕೆಲಸವನ್ನು ಕೂಡ ಮಾಡಬೇಕಾಗಿದೆ ಎಂಬುದಾಗಿ ಹೇಳಿದ್ದಾರೆ.
ಹಾಗಿದ್ರೆ ಈಗ ಯಾರಿಗೆಲ್ಲ ರೇಷನ್ ಸಿಗುವುದಿಲ್ಲ
ಕೇವಲ ಆರ್ಥಿಕವಾಗಿ ಹಿಂದೆ ಉಳಿದಿರುವಂತಹ ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದಿರುವಂತಹ ವ್ಯಕ್ತಿಗಳು ಮಾತ್ರ ರೇಷನ್ ಕಾರ್ಡ್ ಗೆ ಸಿಗಬೇಕಾಗಿರುವಂತಹ ಪ್ರತಿಯೊಂದು ಸೌಲಭ್ಯದ ಲಾಭಗಳನ್ನು ಪಡೆದುಕೊಳ್ಳಲು ಸಿದ್ಧರಿದ್ದಾರೆ. ಇನ್ನು ಬಡತನದ ರೇಖೆಗಿಂತ ಮೇಲೆ ಇರುವಂತಹ(Above Poverty Line) ವ್ಯಕ್ತಿಗಳು ಕೂಡಲೇ ರೇಷನ್ ಕಾರ್ಡ್ ಅನ್ನು ಸರಂಡರ್ ಮಾಡಬೇಕು ಇಲ್ಲವಾದಲ್ಲಿ ಅವರ ಸಂಪೂರ್ಣ ರೇಷನ್ ಕಾರ್ಡ್ ಎನ್ನುವುದು ನಿಷ್ಕ್ರಿಯ ಆಗುತ್ತದೆ ಎಂಬುದನ್ನು ಹೇಳಬಹುದಾಗಿದೆ.
ನಿಜಕ್ಕೂ ಕೂಡ ಯಾರಿಗೆ ಸಿಗಲ್ಲ ಅನ್ನೋ ಅರ್ಹತೆಗಳ ವಿವರದ ಪಟ್ಟಿಯನ್ನು ನೋಡೋಣ ಬನ್ನಿ
ಕುಟುಂಬದಲ್ಲಿ ಯಾರಾದರೂ ಇನ್ಕಮ್ ಟ್ಯಾಕ್ಸ್ ಕಟ್ತಾ ಇದ್ರೆ, ನಾಲ್ಕು ಚಕ್ರಗಳ ವಾಹನವನ್ನು ಹೊಂದಿದ್ದರೆ, 5 ಕಿಲೋ ವ್ಯಾಟ್ ಗಳಿಗಿಂತ ಹೆಚ್ಚಿನ ಜನರೇಟರ್ ಹಾಗೂ ಯಾವುದೇ ಪೆನ್ಷನ್ ಯೋಜನೆಯಲ್ಲಿ ಕೂಡ ಒಳಗೊಂಡಿದ್ದರೂ ಕೂಡ ಅವರಿಗೆ ಸಿಗುವುದಿಲ್ಲ.
100 ಸ್ಕ್ವೇರ್ ಮೀಟರ್ ಜಾಗವನ್ನು ಸ್ವಂತವಾಗಿ ಹೊಂದಿರುವವರು ಕೂಡ ಇದನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ನಗರ ಭಾಗದಲ್ಲಿ ಇರುವಂತಹ ವಾರ್ಷಿಕ 3 ಲಕ್ಷ ರೂಪಾಯಿಗಳ ಆದಾಯವನ್ನು ಹೊಂದಿರುವಂತಹ ಕುಟುಂಬಕ್ಕೂ ಕೂಡ ಈ ರೀತಿಯ ರೇಷನ್ ಕಾರ್ಡ್ ಗಳನ್ನು ಹೊಂದಿರುವುದನ್ನು ತಡೆಹಿಡಿಯಲಾಗಿದ್ದು ಕೂಡಲೇ ಸರೆಂಡರ್ ಮಾಡಬೇಕು ಎಂಬುದಾಗಿ ಹೇಳಲಾಗಿದೆ.
In future such people will not get ration card also existing cards will be deleted