ಎಲ್ಲರಿಗಿಂತ ಮೊದಲು ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಪತ್ರ ಪಡೆಯಲು ಇದೊಂದು ಕೆಲಸ ಮಾಡಿ ಸಾಕು
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Yojane) ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದೆ, ಆದರೆ ಸರ್ವರ್ ತೊಂದರೆಯಿಂದ ಹಲವರಿಗೆ ಅರ್ಜಿ ಹಾಕಲು ತೊಂದರೆಯಾಗಿದೆ.
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Yojane) ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದೆ, ಆದರೆ ಸರ್ವರ್ ತೊಂದರೆಯಿಂದ ಹಲವರಿಗೆ ಅರ್ಜಿ ಹಾಕಲು ತೊಂದರೆಯಾಗಿದೆ. ಲಕ್ಷಾಂತರ ಮಹಿಳೆಯರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ ಆದರೆ ಹಲವರಿಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಗೊಂದಲ ಆತಂಕ ಶುರುವಾಗಿದ್ದು, ಗೃಹಲಕ್ಷ್ಮಿ ಯೋಜನೆ ಬಗ್ಗೆ ಇಂದು ನಿಮಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ.
ಯೋಜನೆ ಅರ್ಜಿ ಲ್ಲಿಸುವುದಕ್ಕಿಂತ ಮೊದಲು ರೇಷನ್ ಕಾರ್ಡ್ ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಗೆ ಮೆಸೇಜ್ ಬರಬೇಕು. ನೀವು ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು (Gruhalakshmi Application) ಎನ್ನುವುದನ್ನು ಈ ಮೆಸೇಜ್ ನಲ್ಲಿ ತಿಳಿಸಲಾಗುತ್ತದೆ. ಆದರೆ ಹಲವರು ಮೆಸೇಜ್ ಬಂದಿಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ. ಇದಕ್ಕಾಗಿ ನೀವು ಮೊದಲು ಮಾಡಬೇಕಿರುವುದು ಏನು ಎಂದರೆ.
ರೇಷನ್ ಕಾರ್ಡ್ (BPL Ration card) ನ ಮನೆಯ ಯಜಮಾನಿಯ ರಿಜಿಸ್ಟರ್ಡ್ ಮೊಬೈಲ್ ನಂಬರ್ ಇಂದ 8147500500/ 8277000500 ಈ ನಂಬರ್ ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಮೆಸೇಜ್ ಮಾಡಿ, ಈಗ VM-SEVSIN ಪೋರ್ಟಲ್ ಇಂದ ನೀವು ಯಾವ ದಿನ ಎಲ್ಲಿ ಅಪ್ಲಿಕೇಶನ್ ಹಾಕಬೇಕು ಎಂದು ಕೆಲವೇ ಸಮಯದಲ್ಲಿ ಮೆಸೇಜ್ ಬರುತ್ತದೆ.
ಮೆಸೇಜ್ ಬರಲಿಲ್ಲ ಎಂದರೆ ಸರ್ವರ್ ಪ್ರಾಬ್ಲಮ್ ಆಗಿದೆ ಎಂದು ಅರ್ಥ. ನಿಮಗೆ ಮೆಸೇಜ್ ಬರುವವರೆಗೂ ಇದನ್ನು ಟ್ರೈ ಮಾಡುತ್ತಿರಬಹುದು.. ಅಥವಾ ಸೇವಾಸಿಂಧು (Sevasindhu Portal) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು, https://sevasindhugs.karnataka.gov.in/ ಇದು ವೆಬ್ಸೈಟ್ ಲಿಂಕ್ ಆಗಿದೆ.. ಈ ಲಿಂಕ್ ಓಪನ್ ಮಾಡಿ, ಕ್ಯಾಪ್ಚ ಹಾಕಿ ಮುಂದಿನ ಪ್ರೊಸಿಜರ್ ನಡೆಸಬಹುದು.
ಇಲ್ಲಿ ನಿಮಗೆ ಅರ್ಜಿ ಸಲ್ಲಿಸುವ ಸ್ಥಳ ಮತ್ತು ಸಮಯ ಗೊತ್ತಾಗುತ್ತದೆ. ಮೆಸೇಜ್ ಬರದೆ ಹೋದರೆ, ಈ ರೀತಿ ಮಾಡುವುದು ಗೊತ್ತಾಗದೇ ಇದ್ದರೆ ಹತ್ತಿರದ ಗ್ರಾಮ ಒನ್ ಆಫೀಸ್ ಭೇಟಿ ನೀಡಿ, ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಈ ಬಗ್ಗೆ ಸರ್ಕಾರದ ವತಿಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಆದರೆ ಗ್ರಾಮ ಒನ್ (Grama One) ಸಿಬ್ಬಂದಿಗಳು ತಾವು ಮಾಡಿಕೊಡುವುದಾಗಿ ಹೇಳಿದ್ದಾರೆ. ಹಾಗಾಗಿ ನೀವು ಗ್ರಾಮಒನ್ ಕಚೇರಿಗೆ ಭೇಟಿ ನೀಡಿ ಸುಲಭವಾಗಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಹಾಕಲು 60 ದಿನಗಳ ಮಿತಿ ಇದೆ ಎಂದು ಇಷ್ಟು ದಿವಸಗಳ ಕಾಲ ಹೇಳಲಾಗುತ್ತಿತ್ತು. ಆದರೆ ಈಗ ಮಿತಿಯನ್ನು ತೆಗೆದು ಹಾಕಲಾಗಿದ್ದು, ಹೆಂಗಸರು ಈಗ ಯಾವಾಗ ಬೇಕಾದರು ಅರ್ಜಿ ಸಲ್ಲಿಸಬಹುದು.
ಈ ಮೂಲಕ ಹೆಣ್ಣುಮಕ್ಕಳು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ, ಸರ್ಕಾರದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಆನ್ಲೈನ್ ಮೂಲಕ ಕೂಡ ನೀವೇ ಈ ಯೋಜನೆಗೆ ಅಪ್ಲೈ ಮಾಡಬಹುದು, ಮೊದಲಿಗೆ ಸೇವಾ ಸಿಂಧು ಪೋರ್ಟಲ್ ಗೆ ಹೋಗಿ, ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ಕ್ಯಾಪ್ಚ ಹಾಕಿ, Fetch RC Details ಆಯ್ಕೆಯನ್ನು ಕ್ಲಿಕ್ ಮಾಡಿ, ಈಗ ಹೊಸ ವಿಂಡೋದಲ್ಲಿ ವಿವರ ಬರುತ್ತದೆ. ಆ ದಿನ ಆ ಸ್ಥಳಕ್ಕೆ ಹೋಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಆಗಸ್ಟ್ ಇಂದ ಈ ಸೌಲಭ್ಯ ಪಡೆಯಬಹುದು.
Do this to get grulakshmi scheme approval letter before anybody else