Eid-ul-Fitr: ರಂಜಾನ್ ಹಬ್ಬ ಸಂಭ್ರಮ; ದಕ್ಷಿಣ ಕನ್ನಡ ಭಾಗದಲ್ಲಿ ಮಾ.20ಕ್ಕೆ ರಜೆ ಘೋಷಣೆ
Eid-ul-Fitr: ರಂಜಾನ್ ಹಬ್ಬ ಹಿನ್ನೆಲೆ ದಕ್ಷಿಣ ಕನ್ನಡದಲ್ಲಿ ಮಾ.20ರಂದು ರಜೆ, ರಂಜಾನ್ ಹಬ್ಬದ ಸಂಭ್ರಮದಿಂದ ಕರಾವಳಿ ಭಾಗದಲ್ಲಿ ವಿಶೇಷ ಸಿದ್ಧತೆ. ಹಬ್ಬದ ನಿಮಿತ್ತ ಜಿಲ್ಲಾಧಿಕಾರಿ ಸಾರ್ವಜನಿಕ ರಜೆ ಘೋಷಿಸಿದ್ದು ಕರಾವಳಿ ಭಾಗದಲ್ಲಿ ಸಂಭ್ರಮ ಹೆಚ್ಚಾಗಿದೆ.

Eid-ul-Fitr: ಕರಾವಳಿ ಭಾಗದಲ್ಲಿ ರಂಜಾನ್ ಹಬ್ಬದ ಸಂಭ್ರಮ ಜೋರಾಗಿದೆ. ಶವ್ವಾಲ್ ಮಾಸದ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಮಾ.20ರಂದು ಈದುಲ್ ಫಿತ್ರ್ ಹಬ್ಬ ಆಚರಿಸಲಾಗುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಘೋಷಣೆ ಮಾಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಮುಸ್ಲಿಂ ಸಮುದಾಯದವರು ಶ್ರದ್ಧೆಯಿಂದ ಉಪವಾಸ ವ್ರತ ಆಚರಿಸುತ್ತಿದ್ದರು. ಚಂದ್ರದರ್ಶನವಾದ ಬಳಿಕ ಉಪವಾಸ ವ್ರತ ಮುಕ್ತಾಯಗೊಂಡಿದ್ದು, ಇದೀಗ ಈದುಲ್ ಫಿತ್ರ್ ಹಬ್ಬವನ್ನು ಉತ್ಸಾಹದಿಂದ ಆಚರಿಸಲು ಸಿದ್ಧತೆಗಳು ಆರಂಭವಾಗಿವೆ.
ಮಾ.20ರಂದು ಬೆಳಿಗ್ಗೆ ಜಿಲ್ಲೆಯ ಪ್ರಮುಖ ಮಸೀದಿಗಳಲ್ಲಿ ವಿಶೇಷ ಈದ್ ನಮಾಜ್ ನಡೆಯಲಿದೆ. ಸಾವಿರಾರು ಭಕ್ತರು ಒಂದೇ ಸ್ಥಳದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬದ ಸಂತೋಷ ಹಂಚಿಕೊಳ್ಳುವ ಸಂಪ್ರದಾಯ ಮುಂದುವರಿಯಲಿದೆ.
ಇನ್ನೊಂದೆಡೆ ಮನೆಗಳಲ್ಲಿ ಹಬ್ಬದ ಅಡುಗೆ ತಯಾರಿಗಳು ಕೂಡ ಜೋರಾಗಿದೆ. ಕುಟುಂಬ ಸದಸ್ಯರು ಮತ್ತು ಬಂಧುಬಳಗದವರೊಂದಿಗೆ ಹಬ್ಬ ಆಚರಿಸಲು ಜನರು ಸಿದ್ಧರಾಗಿದ್ದಾರೆ.
ರಂಜಾನ್ ಹಬ್ಬ ಘೋಷಣೆ ಹೊರಬಿದ್ದ ತಕ್ಷಣವೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ಮಾ.20ರಂದು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಿಸಿದ್ದಾರೆ. ಹೀಗಾಗಿ ಸರ್ಕಾರಿ ಕಚೇರಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ರಜೆಯಾಗಲಿವೆ.
ಒಟ್ಟಾರೆ ಕರಾವಳಿ ಭಾಗದಲ್ಲಿ ರಂಜಾನ್ ಹಬ್ಬದ ಸಂಭ್ರಮ ಮನೆಮಾಡಿದ್ದು, ಮಸೀದಿಗಳು ಮತ್ತು ಮನೆಗಳಲ್ಲಿ ಹಬ್ಬದ ತಯಾರಿ ಜೋರಾಗಿದೆ.
ನಾಳೆಯ ದಿನ ಭವಿಷ್ಯ 31-10-2026: ನಿಮ್ಮ ರಾಶಿಗೆ ಹೇಗಿದೆ? ತಿಳಿಯಿರಿ
Read the story
ಭಾರೀ ಮಳೆ ಮುನ್ಸೂಚನೆ! ಗುಡುಗು, ಮಿಂಚು ಸಂಭವ
Read the story
ನವೆಂಬರ್ 1ರಿಂದ ಹೊಸ ಹೊಸ ರೂಲ್ಸ್! ನಿಮ್ಮ ಜೇಬಿಗೆ ಹೊರೆ
Read the story
ತಂದೆ ಬದುಕಿರುವಾಗಲೇ ಮಕ್ಕಳು ಆಸ್ತಿ ಭಾಗ ಕೇಳಬಹುದಾ?
Read the story
ಈ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸಿಗುತ್ತೆ ಗೃಹಲಕ್ಷ್ಮಿ ಹಣ
Read the story
ಪಿಎಂ ಕಿಸಾನ್ ಹಣ ಇಂದು ಬಿಡುಗಡೆ! ನಿಮ್ಮ ಖಾತೆಗೆ ಬಂದಿದ್ಯಾ?
Read the story



