ಹಾಸನಾಂಬ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ತಂದೆ-ಮಗಳು ಸಾವು
ಹಾಸನ, ಕರ್ನಾಟಕ (Hassan Karnataka): ಹಾಸನಾಂಬ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ (Road Accident) ತಂದೆ-ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹಾಸನ ಜಿಲ್ಲೆ ಆಲೂರು ತಾಲೂಕಿನ ಎನ್.ಎಚ್.ಪುರ ಗ್ರಾಮದ ನಿವಾಸಿಗಳಾದ ಕುಮಾರ್ (38), ಮಗಳು ಕಾವ್ಯ (12) ಹಾಗೂ ಅಜ್ಜಿ ಪುಟ್ಟಮ್ಮ (65) ಹಾಸನಾಂಬೆಯ (Hasanambha) ದರ್ಶನಕ್ಕೆ ಬಂದಿದ್ದರು.
ದರ್ಶನ ಮುಗಿಸಿ ವಿಜಯನಗರದಲ್ಲಿರುವ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಸ್ವಿಫ್ಟ್ ಕಾರು (Swift Car) ತಂದೆ ಕುಮಾರ್ ಮತ್ತು ಅವರ ಮಗಳಿಗೆ ಮೇಲೆ ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪುಟ್ಟಮ್ಮ ಗಾಯಗೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Father and daughter died in a road accident while returning from Hasanamba darshan
Our Whatsapp Channel is Live Now 👇