ಮೂವರು ಮಕ್ಕಳನ್ನು ತುಂಗಭದ್ರಾ ನದಿಗೆ ತಳ್ಳಿ ತಂದೆ ಆತ್ಮಹತ್ಯೆ
ಮೂವರು ಮಕ್ಕಳನ್ನು ನದಿಗೆ ತಳ್ಳಿ ತಂದೆ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನಲ್ಲಿ ನಡೆದಿದೆ.
ಆ ಮಕ್ಕಳ ಪಾಲಿಗೆ ಜವರಾಯ ತಂದೆಯೇ ಆಗಿದ್ದ, ತನ್ನ ದುಡುಕು ನಿರ್ಧಾರಕ್ಕೆ ಮಕ್ಕಳನ್ನೂ ಬಲಿಯಾಗಿಸಿರುವುದು ಅಮಾನುಷ ಘಟನೆ. ಹೌದು, ತಂದೆಯೊಬ್ಬ ತನ್ನ ಮಕ್ಕಳನ್ನು ನದಿಗೆ ಎಸೆದು ತಾನೂ ಪ್ರಾಣ ಬಿಟ್ಟಿದ್ದಾನೆ.
ಮೂವರು ಮಕ್ಕಳನ್ನು ನದಿಗೆ ತಳ್ಳಿ ತಂದೆ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮಂಜುನಾಥ್ (41) ತನ್ನ ಮಕ್ಕಳಾದ ಧನ್ಯ (6), ಪವನ್ (4), ಪತ್ನಿ ಅಣ್ಣನ ಮಗ ವೇದಾಂತ್ (4) ಅವರೊಂದಿಗೆ ನದಿಗೆ ಹಾರಿದ್ದಾರೆ. ಮದ್ಯವ್ಯಸನಿಯಾಗಿರುವ ಮಂಜುನಾಥ್ ನಿತ್ಯ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇಬ್ಬರ ನಡುವೆ ಜಗಳ ಹೆಚ್ಚಾಯಿತು.
ಇದರಿಂದ ಜಿಗುಪ್ಸೆಗೊಂಡು ಮಂಜುನಾಥ್ ಮೂರು ಮಕ್ಕಳನ್ನು ಕರೆದುಕೊಂಡು ತುಂಗಭದ್ರಾ ನದಿ ಬಳಿ ಬಂದು ನದಿಗೆ ಎಸೆದು, ನಂತರ ತಾನೂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬುಧವಾರ ಬೆಳಗ್ಗೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಇನ್ನು ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.
Father commits suicide by pushing three children into Tungabhadra river