ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸೋಕೆ ಅರ್ಜಿ ಹಾಕಿದ್ದೀರಾ? ಸರ್ಕಾರದಿಂದ ನಿಮಗಿದೆ ಗುಡ್ ನ್ಯೂಸ್!

ಕರ್ನಾಟಕ ವಿಧಾನ ಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರವು ಜನರಿಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು ನೀಡುವ ಭರವಸೆ ಕೊಟ್ಟಿತ್ತು. ಅದರಂತೆ ಈಗ ಒಂದೊಂದಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕಾಂಗ್ರೆಸ್ ಸರ್ಕಾರ ಮೊದಲನೇ ಯೋಜನೆ ಶಕ್ತಿ ಯೋಜನೆಯನ್ನು (Shakti Yojane) ಜೂನ್ 11ರಂದು ಜಾರಿಗೆ ತಂದಿತು.
ರಾಜ್ಯದ ಎಲ್ಲಾ ಹೆಣ್ಣುಮಕ್ಕಳು ಈಗ ಶಕ್ತಿ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ರಾಜ್ಯದ ಎಲ್ಲಾ ಊರುಗಳಿಗೂ ಉಚಿತವಾಗಿ ಪ್ರಯಾಣ (Free Bus) ಮಾಡುತ್ತಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆ (Gruha Lakshmi) ಮತ್ತು ಗೃಹಜ್ಯೋತಿ ಯೋಜನೆ (Gruha Jyoti Yojane) ಈ ಎರಡಕ್ಕೂ ಕೂಡ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಹೆಂಗಸರು ಈಗಾಗಲೇ ಅರ್ಜಿ ಸಲ್ಲಿಸುವುದಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ.
ಈ ಎಲ್ಲಾ ಯೋಜನೆಗಳ ಸೌಲಭ್ಯಗಳು ನಿಮಗೆ ಸಿಗಬೇಕು ಎಂದರೆ, ಸರ್ಕಾರದ ಕೆಲವು ನಿಯಮಗಳನ್ನು ನೀವು ಪಾಲಿಸಬೇಕಾಗುತ್ತದೆ. ಸರ್ಕಾರ ಕೆಲವು ನಿಯಮಗಳನ್ನು ಷರತ್ತುಗಳನ್ನು (Government Rules) ಹಾಕಿದೆ. ನಿಯಮಗಳೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ, ಎಲ್ಲಾ ಯೋಜನೆಗಳ ಅನುಕೂಲ ನಿಮಗೆ ಸಿಗಬೇಕು ಎಂದರೆ ನಿಮ್ಮ ಹತ್ತಿರ ಬಿಪಿಎಲ್ ರೇಶನ್ ಕಾರ್ಡ್ (BPL Ration Card) ಇರುವುದು ಕಡ್ಡಾಯವಾಗಿದೆ.
ಅದರಲ್ಲೂ ಸರ್ಕಾರದ ಅನ್ನಭಾಗ್ಯ ಯೋಜನೆಯ ಮೂಲಕ ಅಕ್ಕಿ ಮತ್ತು ಹಣ ಪಡೆಯಲು ನಿಮ್ಮ ಹತ್ತಿರ ಬಿಪಿಎಲ್ ರೇಶನ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ (Anthyodaya Card) ಎರಡರಲ್ಲಿ ಒಂದು ಇರಬೇಕು. ಈ ಕಾರ್ಡ್ ಗಳು ಇದ್ದರೆ ಮಾತ್ರ ಅನ್ನಭಾಗ್ಯ (Annabhagya) ಸೌಲಭ್ಯ ನಿಮಗೆ ಸಿಗುತ್ತದೆ. ಹಾಗಾಗಿ ಬಿಪಿಎಲ್ ಕಾರ್ಡ್ ಇಲ್ಲದ ಜನರು ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಶುರು ಮಾಡಿದ್ದಾರೆ.
ಸರ್ಕಾರವು ಎಲ್ಲ ಅರ್ಜಿಗಳನ್ನು ಚೆಕ್ ಮಾಡಿ, ಹೊಸ ಬಿಪಿಎಲ್ ಕಾರ್ಡ್ ಗಳನ್ನು ಅರ್ಜಿದಾರರಿಗೆ ವಿತರಿಸಬೇಕಿದೆ. ಇದೆಲ್ಲವೂ ನಡೆಯುವ ಮೊದಲೇ ಸರ್ಕಾರ ಈಗ ಹೊಸ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಒಂದು ಗುಡ್ ನ್ಯೂಸ್ ನೀಡಿದೆ.. ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ (Krishna Bhyregowda) ಅವರು ಹೊಸದಾಗಿ ಬಿಪಿಎಲ್ ಕಾರ್ಡ್ ಗೆ ಅಪ್ಲೈ ಮಾಡಿರುವ ಎಲ್ಲರಿಗೂ ಒಂದು ಭರ್ಜರಿಯಾದ ಗುಡ್ ನ್ಯೂಸ್ ನೀಡಿದ್ದಾರೆ.
ಅದೇನು ಎಂದರೆ, ಹೊಸ ಬಿಪಿಎಲ್ ಕಾರ್ಡ್ ಗಳ ಅರ್ಜಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಅರ್ಜಿ ಹಾಕಿರುವವರಿಗೆ ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ ವಿತರಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅವರು ಹೇಳಿರುವುದು ಏನು ಎಂದರೆ, “ಕೇಂದ್ರ ಸರ್ಕಾರ 60% ಬಿಪಿಎಲ್ ಕಾರ್ಡ್ ಗಳನ್ನು ನೀಡಲು ತಿಳಿಸಿತ್ತು, ದರೆ ರಣ್ಯ ಸರ್ಕಾರ 80% ರೇಷನ್ ಕಾರ್ಡ್ ಗಳ ವಿತರಣೆ ಮಾಡಿದೆ..
ಆರೋಗ್ಯದ ದೃಷ್ಟಿಯಲ್ಲಿ ಬಿಪಿಎಲ್ ಕಾರ್ಡ್ ಗೆ ಹೆಚ್ಚು ಬೇಡಿಕೆ ಇರುವುದರಿಂದ ಕೆಲವು ನಿಯಮಗಳನ್ನು ಮೀರಲಾಗಿದೆ. ಸಭೆಯಲ್ಲಿ ಬಿಪಿಎಲ್ ಕಾರ್ಡ್ ಅರ್ಜಿದಾರರ ಬಗ್ಗೆ ಮಾತನಾಡಿದ, ಆದಷ್ಟು ಬೇಗ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ..” ಎಂದು ಹೇಳಿ ಗುಡ್ ನ್ಯೂಸ್ ನೀಡಿದ್ದಾರೆ.
Good news to new ration card applicants from Karnataka government
ನಾಳೆಯ ದಿನ ಭವಿಷ್ಯ: 11-11-2026, ಬುಧವಾರ
Read the story
ಹಾಸನಾಂಬೆ ದರ್ಶನದ ಅವಧಿ ವಿಸ್ತರಣೆ; ಬಿಗ್ ಅಪ್ಡೇಟ್
Read the story
ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮುಕ್ತಾಯ; ಲಕ್ಷಾಂತರ ಕಾರ್ಡುಗಳು ರದ್ದು
Read the story
ಕರ್ನಾಟಕ ಬರ ಪರಿಹಾರ ಹಣದಲ್ಲೂ ಕತ್ತರಿ
Read the story
KSRTC ಲಗೇಜ್ ಶುಲ್ಕ ಹೆಚ್ಚಳ; ಇಂದಿನಿಂದಲೇ ಹೊಸ ದರ ಜಾರಿ
Read the story
ಪಿಎಂ ಕಿಸಾನ್ ಹಣ ಇನ್ನೂ ಬಂದಿಲ್ವ? ತಕ್ಷಣ ಈ ಕೆಲಸ ಮಾಡಿ
Read the story




