ಗೃಹಜ್ಯೋತಿ ಉಚಿತ ವಿದ್ಯುತ್‌ಗೆ ಕತ್ತರಿ; ಬರೋಬ್ಬರಿ 1.10 ಲಕ್ಷ ಫಲಾನುಭವಿಗಳ ಹೆಸರು ಡಿಲೀಟ್! ಬಿಗ್ ಅಪ್‌ಡೇಟ್

ಕರ್ನಾಟಕ ಗೃಹಜ್ಯೋತಿ ಯೋಜನೆಯಡಿ ದಾಖಲಾಗಿರುವ 24 ಲಕ್ಷ ಫಲಾನುಭವಿಗಳು ಪರಿಶೀಲನೆಗೆ ಅಗತ್ಯ ದಾಖಲೆ ಸಲ್ಲಿಸಿಲ್ಲ. ಅಕ್ಟೋಬರ್ 31 ಕೊನೆಯ ದಿನವಾಗಿದ್ದು, ಗಡುವು ವಿಸ್ತರಣೆ ಇಲ್ಲವೆಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

  • 24 ಲಕ್ಷ ಫಲಾನುಭವಿಗಳಿಂದ ದಾಖಲೆ ಸಲ್ಲಿಕೆ ಬಾಕಿ
  • 1.10 ಲಕ್ಷ ಗ್ರಾಹಕರು ಯೋಜನೆಯಿಂದ ಹೊರಗೆ
  • ದಾಖಲೆ ಸಲ್ಲಿಸಲು ಅಕ್ಟೋಬರ್ 31 ಕೊನೆ

ಬೆಂಗಳೂರು (Bengaluru): ಉಚಿತ ವಿದ್ಯುತ್ ಸೌಲಭ್ಯ (Free Electricity) ಪಡೆಯುತ್ತಿರುವ ಗ್ರಾಹಕರ ದಾಖಲೆ ಪರಿಶೀಲನೆಗೆ ರಾಜ್ಯದಲ್ಲಿ ವೇಗ ನೀಡಲಾಗಿದ್ದು, ಇನ್ನೂ ಲಕ್ಷಾಂತರ ಮಂದಿ ಅಗತ್ಯ ದಾಖಲೆಗಳನ್ನು ಸಲ್ಲಿಸದಿರುವುದು ಬೆಳಕಿಗೆ ಬಂದಿದೆ.

ಗೃಹಜ್ಯೋತಿ ಯೋಜನೆ (Gruha Jyothi Scheme) ಅಡಿಯಲ್ಲಿ ನೋಂದಾಯಿಸಿಕೊಂಡಿರುವ ಗ್ರಾಹಕರಲ್ಲಿ 24 ಲಕ್ಷ ಮಂದಿ ಪರಿಶೀಲನೆಗೆ ಬೇಕಾದ ದಾಖಲೆಗಳನ್ನು ನೀಡಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯಾದ್ಯಂತ (Karnataka) ಯೋಜನೆಯಡಿ ಒಟ್ಟು 1.69 ಕೋಟಿ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ದಾಖಲೆ ಸಲ್ಲಿಕೆ ಬಾಕಿ ಇರುವವರ ಸಂಖ್ಯೆ 24 ಲಕ್ಷದಷ್ಟಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯಲ್ಲೇ 69 ಲಕ್ಷ ಫಲಾನುಭವಿಗಳಿದ್ದು, ಅವರಲ್ಲಿ ಸುಮಾರು 16 ಲಕ್ಷ ಮಂದಿ ಇನ್ನೂ ಪರಿಶೀಲನೆಗೆ ಸ್ಪಂದಿಸಿಲ್ಲ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ತಿಳಿಸಿದ್ದಾರೆ.

ಇದನ್ನೂ ಓದಿ: ರೈತರಿಗೆ ಶೇ.50 ಸಬ್ಸಿಡಿ, ಹೊಸ ಆ್ಯಪ್‌ ಸಿದ್ಧ; ಕರ್ನಾಟಕ ನೇಗಿಲಯೋಗಿ ಯೋಜನೆಯ ಬಿಗ್ ಅಪ್‌ಡೇಟ್‌

Gruha Jyothi Scheme

ಕಳೆದ ನಾಲ್ಕು ತಿಂಗಳಿಂದ ಸಿಬ್ಬಂದಿ ಮನೆಮನೆಗೆ ತೆರಳಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ, ಕೆಲವು ಮನೆಗಳು ಬೀಗ ಹಾಕಿರುವುದು, ಬಾಡಿಗೆದಾರರು ಬೇರೆಡೆಗೆ ಸ್ಥಳಾಂತರಗೊಂಡಿರುವುದು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲವರು ಸಹಕರಿಸದಿರುವುದು ಪ್ರಕ್ರಿಯೆಗೆ ಅಡ್ಡಿಯಾಗಿದೆ.

ಯೋಜನೆಯ ಸೌಲಭ್ಯ ಬೇಡ ಎಂದು ಕೆಲವರು ಮೌಖಿಕವಾಗಿ ಹೇಳುತ್ತಿದ್ದರೂ, ಅಧಿಕೃತವಾಗಿ ಹೊರಗುಳಿಯುವ ಘೋಷಣೆಗೆ ಸಹಿ ಹಾಕಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮುಂದೂಡಿಕೆ! ವಿದ್ಯಾರ್ಥಿಗಳೇ ಗಮನಿಸಿ

ಇನ್ನೊಂದೆಡೆ, ಬೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು 1.10 ಲಕ್ಷ ಗ್ರಾಹಕರು ಸ್ವಯಂಪ್ರೇರಿತವಾಗಿ ಯೋಜನೆಯಿಂದ ಹೊರಬರುವುದಾಗಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಈ ಗ್ರಾಹಕರಿಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಸೌಲಭ್ಯವನ್ನು ನಿಯಮಾನುಸಾರ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಕರ್ನಾಟಕ ಗೃಹಜ್ಯೋತಿ ಯೋಜನೆ

ಅಕ್ಟೋಬರ್ 31 ಕೊನೆಯ ದಿನ

ದಾಖಲೆ ಸಲ್ಲಿಸದ ಗ್ರಾಹಕರನ್ನು ಸಂಪರ್ಕಿಸಲು ಬೆಸ್ಕಾಂ ಸಿಬ್ಬಂದಿ ಈಗಾಗಲೇ ಮೂರು ಬಾರಿ ಮನೆಗಳಿಗೆ ಭೇಟಿ ನೀಡಿದ್ದಾರೆ. ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೂ ಎಸ್‌ಎಂಎಸ್ (SMS) ಸಂದೇಶ ಕಳುಹಿಸಲಾಗಿದೆ. ಆದರೂ ಬೆಸ್ಕಾಂ ವ್ಯಾಪ್ತಿಯ 16 ಲಕ್ಷ ಗ್ರಾಹಕರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ದಾಖಲೆಗಳನ್ನು ಸಲ್ಲಿಸದವರು ಅಕ್ಟೋಬರ್ 31ರೊಳಗೆ ತಮ್ಮ ವ್ಯಾಪ್ತಿಯ ಬೆಸ್ಕಾಂ ಉಪವಿಭಾಗದ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಈ ಗಡುವನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಿಗದಿತ ದಿನಾಂಕದೊಳಗೆ ದಾಖಲೆ ಸಲ್ಲಿಸದವರ ಕುರಿತು ಸಂಪೂರ್ಣ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುತ್ತದೆ. ನಂತರ ಅಂತಹ ಗ್ರಾಹಕರಿಗೆ ಗೃಹಜ್ಯೋತಿ ಯೋಜನೆಯ ಸಬ್ಸಿಡಿ (Subsidy) ಸೌಲಭ್ಯ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories