ಗೃಹಲಕ್ಷ್ಮಿ ಯೋಜನೆ 3ನೇ ಕಂತು ಇಂಥವರಿಗೆ ಸಿಗುವುದೇ ಇಲ್ಲ! ಫಲಾನುಭವಿಗಳ ಲಿಸ್ಟ್ ಬಿಡುಗಡೆ
ಇನ್ನೂ ಒಂದಿಷ್ಟು ಫಲಾನುಭವಿಗಳು ಈವರೆಗೆ ಒಂದೇ ಒಂದು ರೂಪಾಯಿಗಳನ್ನು ಕೂಡ ಈ ಯೋಜನೆಯ ಅಡಿಯಲ್ಲಿ ಸ್ವೀಕರಿಸದೆ ಇರುವುದು. ಯಾಕೆ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಹಣ ಜಮಾ ಆಗಿಲ್ಲ (DBT) ಎನ್ನುವುದರ ಬಗ್ಗೆ ಸರ್ಕಾರ ಈಗಾಗಲೇ ಸಾಕಷ್ಟು ಮಾಹಿತಿಯನ್ನು ನೀಡಿದೆ.
ರಾಜ್ಯದ್ಯಂತ ಇಂದು ದಿನಬೆಳಗಾದರೆ ಜನರ ಬಾಯಲ್ಲಿ ಸರ್ಕಾರದಲ್ಲಿ ಚರ್ಚೆ ಆಗುತ್ತಿರುವ ಪ್ರಮುಖ ಯೋಜನೆ ಅಂದ್ರೆ ಅದು ಗೃಹಲಕ್ಷ್ಮಿ ಯೋಜನೆ (Gruha Lakshmi scheme). ಇದಕ್ಕೆ ಮುಖ್ಯ ಕಾರಣ ಲಕ್ಷಾಂತರ ಜನರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಂಡಿರುವುದು.
ಅದರ ಜೊತೆಗೆ ಇನ್ನೂ ಒಂದಿಷ್ಟು ಫಲಾನುಭವಿಗಳು ಈವರೆಗೆ ಒಂದೇ ಒಂದು ರೂಪಾಯಿಗಳನ್ನು ಕೂಡ ಈ ಯೋಜನೆಯ ಅಡಿಯಲ್ಲಿ ಸ್ವೀಕರಿಸದೆ ಇರುವುದು. ಯಾಕೆ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಹಣ ಜಮಾ ಆಗಿಲ್ಲ (DBT) ಎನ್ನುವುದರ ಬಗ್ಗೆ ಸರ್ಕಾರ ಈಗಾಗಲೇ ಸಾಕಷ್ಟು ಮಾಹಿತಿಯನ್ನು ನೀಡಿದೆ.
ಸರ್ಕಾರದ ಸರ್ವರ್ ಸಮಸ್ಯೆ; (server problem)
ಇದು ಇನ್ನೂ ಬಗೆಹರಿಯದ ಸಮಸ್ಯೆಯಾಗಿ ಉಳಿದುಕೊಂಡಿದೆ, ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಅದಕ್ಕೆ ಸಾಕಷ್ಟು ನಿಯಮಗಳನ್ನು ಹೇರಲಾಗಿತ್ತು ಮುಖ್ಯವಾಗಿ ರೇಷನ್ ಕಾರ್ಡ್ (ration card) ನಲ್ಲಿ ಮೊದಲ ಹೆಸರು ಮಹಿಳೆಯಂತೆ ಆಗಿರಬೇಕಿತ್ತು, ಯಾರೆಲ್ಲ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೋ ಅಂತವರು ಅರ್ಜಿ ಸಲ್ಲಿಸಿದ ನಂತರ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (ration card correction) ಮಾಡಿಕೊಂಡಿದ್ದರೆ ಅದು ಸರ್ಕಾರದ ಡೇಟಾಬೇಸ್ ನಲ್ಲಿ ಅಪ್ಡೇಟ್ (update) ಆಗದೇ ಇದ್ರೆ ಅಂಥವರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.
ಸರ್ಕಾರದ ಸರ್ವರ್ ಸಮಸ್ಯೆಯಿಂದಾಗಿ ಈಗಾಗಲೇ ನಾಲ್ಕು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಮಾಡಿಕೊಟ್ಟಿದ್ದರು ಎಲ್ಲಾ ಮಹಿಳೆಯರ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಆಗಿಲ್ಲ, ಇದಕ್ಕೆ ಮುಖ್ಯವಾದ ಕಾರಣ ಸರ್ವರ್ ಸಮಸ್ಯೆ ಎನ್ನಲಾಗಿದೆ.
ಇಷ್ಟು ಮಾತ್ರವಲ್ಲದೆ ಕೆಲವು ಟೆಕ್ನಿಕಲ್ ಎರರ್ ನಿಂದಾಗಿ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಇವೆಲ್ಲವನ್ನ ಸರಿಪಡಿಸಿಕೊಂಡು ಮಹಿಳೆಯರ ಖಾತೆಗೆ ಹಣ ಜಮಾ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.
ಇನ್ನೂ ಬಂದಿಲ್ಲ ಲಕ್ಷಾಂತರ ಮಹಿಳೆಯರ ಖಾತೆಗೆ ಹಣ!
ಅರ್ಜಿ ಸಲ್ಲಿಸಿರುವ 1.14 ಕೋಟಿ ಮಹಿಳೆಯರಲ್ಲಿ ಸುಮಾರು 80% ಮಹಿಳೆಯರ ಖಾತೆಗೆ ಸರ್ಕಾರ ನೇರ ಹಣ ವರ್ಗಾವಣೆ ಮಾಡಿದೆ, ಆದರೆ ಇನ್ನೂ 20% ಮಹಿಳೆಯರು ಮಾತ್ರ ಇದರಿಂದ ವಂಚಿತರಾಗಿದ್ದಾರೆ ಎನ್ನಬಹುದು.
ಸರ್ಕಾರ (State government) ಪ್ರತಿದಿನ ಇಂತಿಷ್ಟು ಹಣವನ್ನು ಮಾತ್ರ ಬಿಡುಗಡೆ ಮಾಡಬಹುದಾಗಿತ್ತು ನವೆಂಬರ್ ಒಳಗೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಎರಡು ಸಾವಿರ ರೂಪಾಯಿಗಳು ಜಮಾ ಆಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.
ಅಕ್ಟೋಬರ್ ತಿಂಗಳ ಫಲಾನುಭವಿಗಳ ಪಟ್ಟಿ ಪ್ರಕಟ ನಿಮ್ಮ ಹೆಸರು ಇದೆಯಾ ನೋಡಿಕೊಳ್ಳಿ!
ಇನ್ನು ಅಕ್ಟೋಬರ್ ತಿಂಗಳಿನ ಫಲಾನುಭವಿಗಳ ಪಟ್ಟಿ ಪ್ರಕಟಸಲಾಗಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ (official website) ನೀವು ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
Gruha Lakshmi Yojana 3rd installment is not available for such people
Follow us On
Google News |