ಗೃಹಲಕ್ಷ್ಮಿ ಯೋಜನೆ ರಿಜಿಸ್ಟ್ರೇಶನ್ ಮೆಸೇಜ್ ಬಂದಿಲ್ವಾ? ಈ ರೀತಿ ಮಾಡಿದ್ರೆ ಮಾತ್ರ ನಿಮಗೆ ₹2000 ಬರೋದು!
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಷ್ಟೇ ಶುರುವಾಗಿದೆ, ಆದರೆ ಅರ್ಜಿ ಸಲ್ಲಿಕೆ ಶುರುವಾದ ಮೊದಲ ದಿನವೇ ಮಹಿಳೆಯರಿಗೆ ಸುಲಭವಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ.
ರಾಜ್ಯದ ಎಲ್ಲಾ ಮಹಿಳೆಯರು ಈಗ ಕಾದು ಕುಳಿತಿರುವುದು ಗೃಹಲಕ್ಷ್ಮಿ ಯೋಜನೆಗಾಗಿ (Gruhalakshmi Scheme). ಈ ಯೋಜನೆಯ ಮೂಲಕ ಮನೆಯ ಯಜಮಾನಿ ಆಗಿರುವ ಮಹಿಳೆಯ ಬ್ಯಾಂಕ್ ಖಾತೆಗೆ ತಿಂಗಳಿಗೆ ₹2000 ರೂಪಾಯಿ ಹಣವನ್ನು ಸರ್ಕಾರ ಜಮಾ ಮಾಡುತ್ತದೆ. ಮನೆಯ ಲಕ್ಷಿಯಾಗಿ ಮನೆಯ ನಿರ್ವಹಣೆ ಮಾಡುವ ಎಲ್ಲಾ ಹೆಣ್ಣುಮಕ್ಕಳಿಗೆ ಸರ್ಕಾರ ಕೊಡುತ್ತಿರುವ ವಿಶೇಷ ಯೋಜನೆ ಇದು. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಕೆಲವು ನಿಯಮಗಳನ್ನು ಸಹ ಇಡಲಾಗಿದೆ.
ಇದೆಲ್ಲವನ್ನು ಪಾಲಿಸಿದರೆ ಮಾತ್ರ ಈ ಯೋಜನೆಯ ಸೌಲಭ್ಯ ಪಡೆಯಬಹುದು. ಈಗಾಗಲೇ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಮಹಿಳೆಯರು ಅರ್ಜಿ ಸಲ್ಲಿಸುವುದಕ್ಕೆ ಸೈಬರ್ ಸೆಂಟರ್ ಗಳಿಗೆ ಮುಗಿಬೀಳುತ್ತಿದ್ದಾರೆ. ಒಂದು ವೇಳೆ ನೀವು ಅರ್ಜಿ ಸಲ್ಲಿಸಿದರೆ, ನಿಮಗೆ ಯಾವ ರೀತಿ ಕನ್ಫರ್ಮೇಷನ್ ಮೆಸೇಜ್ ಬರುತ್ತೆ? ಮೆಸೇಜ್ ಬಂದಿಲ್ಲ ಅಂದ್ರೆ ಏನು ಮಾಡಬೇಕು?
ಏನು ಮಾಡಿದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯಿಂದ 2000 ಬರುತ್ತೆ? ಈ ಎಲ್ಲಾ ಪ್ರಶ್ನೆಗಳು ನಿಮ್ಮಲ್ಲಿ ಇರುತ್ತದೆ. ಅದಕ್ಕೆಲ್ಲಾ ಉತ್ತರ ತಿಳಿಸುತ್ತೇವೆ ನೋಡಿ.. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಷ್ಟೇ ಶುರುವಾಗಿದೆ, ಆದರೆ ಅರ್ಜಿ ಸಲ್ಲಿಕೆ ಶುರುವಾದ ಮೊದಲ ದಿನವೇ ಮಹಿಳೆಯರಿಗೆ ಸುಲಭವಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಬಹುದು.
ಅದಕ್ಕೆ ಕಾರಣ ಮೊದಲ ದಿನವೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವೆಬ್ಸೈಟ್ ಗೆ ಎದುರಾದ ಸರ್ವರ್ ಸಮಸ್ಯೆ (Server Problem), ಹೆಂಗಸರು ಆಸಕ್ತಿಯಿಂದ ಅರ್ಜಿ ಸಲ್ಲಿಸಲು ಹೋದರೆ, ಬಹಳಷ್ಟು ಮಹಿಳೆಯರು ಅದಾಗಲೇ ಬಂದಿದ್ದರಿಂದ, ಕ್ಯೂ ನಲ್ಲಿ ಕಾಯುವ ಸಮಸ್ಯೆ ಎದುರಾಗಿತ್ತು. ಸಾಕಷ್ಟು ಮಹಿಳೆಯರು ಅರ್ಜಿ ಹಾಕುವುದಕ್ಕೆ ಗಂಟೆಗಟ್ಟಲೇ ಕ್ಯೂನಲ್ಲಿ ನಿಂತರು ಕೂಡ ಸರ್ವರ್ ಸಮಸ್ಯೆ ಇಂದ ಎಲ್ಲರೂ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.
ಪದೇ ಪದೇ ಪದೇ ಸರ್ವರ್ ಸಮಸ್ಯೆ ಉಂಟಾಗಿ, ಮೊದಲ ದಿನ ಅರ್ಜಿ ಸಲ್ಲಿಸಲು ಸಾಧ್ಯವಾಗಿದ್ದು, ಕೇವಲ 60000 ಮಹಿಳೆಯರಿಗೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಹಳ ದಿನಗಳಿಂದ ಮಹಿಳೆಯರು ಕಾಯುತ್ತಿದ್ದರು, ರಾಜ್ಯ ರಾಜಧಾನಿಯ ಬೆಂಗಳೂರು 1 ಕೇಂದ್ರದಲ್ಲಿ ಬೆಳಗ್ಗೆ ಇಂದಲೇ ಸಾಕಷ್ಟು ಮಹಿಳೆಯರು ಬಂದಿದ್ದರು. ಆದರೆ ಸರ್ವರ್ ಸಮಸ್ಯೆ ಎಲ್ಲರನ್ನು ಕಾಡಿತು.
ಹಾಗಾಗಿ 60222 ಮಹಿಳೆಯರು ಮಾತ್ರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿದೆ. ಇಲ್ಲಿ ಗೃಹಲಕ್ಷ್ಮಿ ಅಪ್ಲಿಕೇಶನ್ (Gruhalakshmi App) ಮೂಲಕ 15276 ಅಪ್ಲಿಕೇಶನ್ ಹಾಕಿದ್ದಾರೆ, ವೆಬ್ಸೈಟ್ ಮೂಲಕ 44946 ಜನರು ಅಪ್ಲೈ ಮಾಡಿದ್ದಾರೆ. ಆದರೆ ಅರ್ಜಿ ಹಾಕಲು ಸಾಧ್ಯವಾಗಿಲ್ಲ ಎಂದು ಸಾಕಷ್ಟು ಮಹಿಳೆಯರು ಕೋಪಗೊಂಡು, ಅಪ್ಲೈ ಮಾಡುವ ಕೇಂದ್ರದವರ ಮೇಲೆ ಅಸಮಾಧಾನಗೊಂಡಿದ್ದರು.
ಆದರೆ ಅಲ್ಲಿನ ಸಿಬ್ಬಂದಿಗಳು ಅದು ಸರ್ವರ್ ಸಮಸ್ಯೆ ಒಂದೆರಡು ದಿನ ಬಿಟ್ಟು ಮತ್ತೆ ಬನ್ನಿ ಎಂದು ಹೇಳಿ ಕಳಿಸುವುದಕ್ಕೆ ಅವರಿಗು ಕಷ್ಟವಾಗಿದತ್ತು. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕಾಗಿ ಒಂದು ಮೆಸೇಜ್ ಈಗಾಗಲೇ ಮಹಿಳೆಯರಿಗೆ ಬಂದಿದೆ. ರೇಷನ್ ಕಾರ್ಡ್ (Ration Card) ಗೆ ಲಿಂಕ್ ಆಗಿರುವ ಮನೆಯ ಮುಖ್ಯಸ್ಥೆಯ ಫೋನ್ ನಂಬರ್ ಗೆ SMS ಬಂದಿದೆ..
ಆ ಮೆಸೇಜ್ ನಲ್ಲಿ ಯಾವ ಕೇಂದ್ರಕ್ಕೆ ಹೆಣ್ಣುಮಕ್ಕಳು ಹೋಗಬೇಕು, ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎನ್ನುವುದನ್ನು SMS ನಲ್ಲಿಯೇ ತಿಳಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಮಹಿಳೆಯು ರೇಷನ್ ಕಾರ್ಡ್ ತೆಗೆದುಕೊಂಡು ಹೋಗಬೇಕು, ಏಕೆಂದರೆ ರೇಷನ್ ಕಾರ್ಡ್ ನಂಬರ್ ಬೇಕಾಗುತ್ತದೆ.
ಹಾಗೆಯೇ ತಮ್ಮ ಪತಿಯ ಆಧಾರ್ ಕಾರ್ಡ್ (Aadhar Card) ಬೇಕಾಗುತ್ತದೆ, ಪತಿ ಮತ್ತು ಪತ್ನಿ ಇಬ್ಬರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಪಾಸ್ ಬುಕ್ ಮತ್ತು ಮತ್ತು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅವಶ್ಯವಾಗಿ ಬೇಕಾಗುತ್ತದೆ. ಅರ್ಜಿ ಸಲ್ಲಿಸುವಾಗ ಈ ಎಲ್ಲವನ್ನೂ ತಪ್ಪದೇ ತೆಗೆದುಕೊಂಡು ಹೋಗಿ.
Gruhalakshmi scheme registration problem