Karnataka News
ಆದಿ ದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವ ಭಾನುವಾರ ಮುಕ್ತಾಯ
ಹಾಸನ / ಕರ್ನಾಟಕ: ನಾಡಿನಲ್ಲಿ ಎಲ್ಲಿಯೂ ಇಲ್ಲದಂತೆ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡಿ ಕೃಪೆ ತೋರುವ ಆದಿ ದೇವತೆ ಹಾಸನಾಂಬೆ (Hasanamba) ಜಾತ್ರಾ ಮಹೋತ್ಸವ ಭಾನುವಾರ ಮುಕ್ತಾಯಗೊಳ್ಳಲಿದೆ. ಶನಿವಾರ ರಾತ್ರಿಯವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಕಳೆದ 10 ದಿನಗಳಿಂದ ನಡೆದ ಹಾಸನಾಂಬೆ ದೇವಿ ಜಾತಾರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಕಳೆದ ತಿಂಗಳು 24ರಿಂದ ಆರಂಭವಾದ ಹಾಸನಾಂಬೆ ಜಾತಾರಾ ಮಹೋತ್ಸವದಲ್ಲಿ 11 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬ ದೇವಿಯ ದರ್ಶನ ಪಡೆದರು.
ಹಲವು ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಅನೇಕರು ಶ್ರಮಿಸಿದರು. ಕೇಂದ್ರ, ರಾಜ್ಯ ನಾಯಕರು ಹಾಗೂ ಹೊರ ರಾಜ್ಯಗಳ ಭಕ್ತರೂ ದೇವಿಯ ದರ್ಶನಕ್ಕೆ ಬಂದಿದ್ದರು.
Hasanamba Jatra Mahotsava ends on Sunday
Our Whatsapp Channel is Live Now 👇