ರೇಷನ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಕಳೆದು ಹೋಗಿದ್ಯಾ? ಈ ರೀತಿ ಸುಲಭವಾಗಿ ಚೇಂಜ್ ಮಾಡಿ

ರೇಶನ್ ಕಾರ್ಡ್ ಕುರಿತ ಅಪ್ಡೇಟ್ ಗಳು ನಿಮ್ಮ ಫೋನ್ ಗೆ ಬರುತ್ತಿಲ್ಲ ಎಂದರೆ ತಕ್ಷಣವೇ ನೀವು ನಿಮ್ಮ ಹೊಸ ಫೋನ್ ನಂಬರ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡಿ ಅಪ್ಡೇಟ್ ಮಾಡಬೇಕಾಗುತ್ತದೆ.

Bengaluru, Karnataka, India
Edited By: Satish Raj Goravigere

ಸರ್ಕಾರ ಈಗ ಮಹಿಳೆಯರಿಗಾಗಿ ಶುರು ಮಾಡಿರುವ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಶುರು ಮಾಡಿದೆ. ಈ ಯೋಜನೆಗಾಗಿ ನೀವು ಆನ್ಲೈನ್ ಅರ್ಜಿ ಸಲ್ಲಿಸಬಹುದು. ಈಗಾಗಲೇ ಹಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ, ಆದರೆ ಸರ್ವರ್ ತೊಂದರೆ ಕಾರಣದಿಂದ ಹಲವರು ಅರ್ಜಿ ಸಲ್ಲಿಸಲು ಹೋಗಿ ಗಂಟೆಗಟ್ಟಲೇ ಕಾದು ವಾಪಸ್ ಬರುವ ಹಾಗೆ ಆಗಿದೆ.

ಇನ್ನು ಸರ್ಕಾರ ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವದಕ್ಕೆ ಹೊಸ ನಿಯಮಗಳನ್ನು (Gruhalakshmi Scheme Rules) ಜಾರಿಗೆ ತಂದಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕಿಂತ ಬಿಪಿಎಲ್ ಕಾರ್ಡ್ (BPL Card) ಕಡ್ಡಾಯವಾಗಿ ಬೇಕೇ ಬೇಕು. ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ರೇಷನ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಗೆ ಅರ್ಜಿ ಸಲ್ಲಿಸುವ ದಿನಾಂಕ ಮತ್ತು ಸ್ಥಳದ ಬಗ್ಗೆ ಮೆಸೇಜ್ ಬರುತ್ತದೆ.

New Ration card

ಆದರೆ ಕೆಲವು ಜನರ ವಿಚಾರದಲ್ಲಿ ರೇಷನ್ ಕಾರ್ಡ್ ಲಿಂಕ್ ಮಾಡಲು ಕೊಟ್ಟಿರುವ ಫೋನ್ ನಂಬರ್ ಕಳೆದುಹೋಗಿರಬಹುದು. ಅಥವಾ ನೀವು ಸಿಮ್ ಬದಲಿಸಿ ಬೇರೆ ಸಿಮ್ ತೆಗೆದುಕೊಂಡಿದ್ದು, ರೇಶನ್ ಕಾರ್ಡ್ ಕುರಿತ ಅಪ್ಡೇಟ್ ಗಳು ನಿಮ್ಮ ಫೋನ್ ಗೆ ಬರುತ್ತಿಲ್ಲ ಎಂದರೆ ತಕ್ಷಣವೇ ನೀವು ನಿಮ್ಮ ಹೊಸ ಫೋನ್ ನಂಬರ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡಿ ಅಪ್ಡೇಟ್ ಮಾಡಬೇಕಾಗುತ್ತದೆ.

ಈಗ ಸರ್ಕಾರದ ಎಲ್ಲಾ ಯೋಜನೆಗೆ ಬಿಪಿಎಲ್ ರೇಷನ್ ಕಾರ್ಡ್ ಬಹಳ ಮುಖ್ಯ ಆಗಿರುವುದರಿಂದ ಸಕ್ರಿಯವಾಗಿರುವ ಮೊಬೈಲ್ ನಂಬರ್ ಅನ್ನು ರೇಶನ್ ಕಾರ್ಡ್ ಗೆ ಅಪ್ಡೇಟ್ ಮಾಡುವುದು ಬಹಳ ಮುಖ್ಯ. ಒಂದು ವೇಳೆ ನೀವು ಇದೇ ಪರಿಸ್ಥಿತಿಯಲ್ಲಿದ್ದು, ರೇಶನ್ ಕಾರ್ಡ್ ಗೆ ಹೊಸ ಫೋನ್ ನಂಬರ್ ಲಿಂಕ್ ಮಾಡಬೇಕು ಎಂದರೆ, ಹೇಗೆ ಲಿಂಕ್ ಮಾಡಬಹುದು ಎಂದು ತಿಳಿಸುತ್ತೇವೆ ನೋಡಿ.

ಹೊಸ ಮೊಬೈಲ್ ಲಿಂಕ್ ಮಾಡುವುದಕ್ಕೆ ಮೊದಲು ನೀವು ರಾಷ್ಟ್ರೀಯ ಭದ್ರತಾ ಪೋರ್ಟಲ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಲ್ಲಿ ನಿಮಗೆ ನಾಗರೀಕರ ಕಾರ್ನರ್ ಎನ್ನುವ ಆಯ್ಕೆ ಸಿಗುತ್ತದೆ, ಅದರಲ್ಲಿ “ರಿಜಿಸ್ಟರ್ ಅಥವಾ ಫೋನ್ ನಂಬರ್ ಬದಲಾಯಿಸಿ” ಎನ್ನುವ ಆಯ್ಕೆ ಸಿಗುತ್ತದೆ. ಈ ಆಯ್ಕೆಯನ್ನು ಸೆಲೆಕ್ಟ್ ಮಾಡಿ..

ಹೊಸ ವಿಂಡೋ ಓಪನ್ ಆದಾಗ, ನಿಮ್ಮ ಮನೆಯ ಯಜಮಾನಿಯ ಆಧಾರ್ ಕಾರ್ಡ್ ನಂಬರ್ ಎಂಟ್ರಿ ಮಾಡಿ. ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಬೇಕು. ಬಳಿಕ ರೇಷನ್ ಕಾರ್ಡ್ ನಲ್ಲಿರುವ ಮನೆಯ ಯಜಮಾನಿಯ ಹೆಸರನ್ನು ಹಾಕಿ, ಈಗ ನಿಮಗೆ ಹೊಸದಾಗಿ ಮೊಬೈಲ್ ನಂಬರ್ ಹಾಕುವ ಆಯ್ಕೆ ಸಿಗುತ್ತದೆ.

How to change mobile number linked to ration card

ಈಗ ಹೊಸ ಫೋನ್ ನಂಬರ್ ಹಾಕಿ, ಈ ಫೋನ್ ನಂಬರ್ ಅನ್ನು ಸೇವ್ ಮಾಡಿ.ಈ ಪ್ರಕ್ರಿಯೆ ಪೂರ್ತಿ ಮುಗಿದ ನಂತರ ನಿಮ್ಮ ಫೋನ್ ನಂಬರ್ ರೇಷನ್ ಕಾರ್ಡ್ ಗೆ ರಿಜಿಸ್ಟರ್ ಆಗಿದೆ ಎಂದು ಅರ್ಥ. ಈ ರೀತಿ ಮಾಡುವ ಮೂಲಕ ನೀವು ನಿಮ್ಮ ರೇಷನ್ ಕಾರ್ಡ್ ಗೆ ಆಕ್ಟಿವ್ ಆಗಿರುವ ಹೊಸ ಫೋನ್ ನಂಬರ್ ಸೇರಿಸಬಹುದು.

ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in ಇದು. ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ಗೆ ಹೊಸ ಸದಸ್ಯರ ಹೆಸರು ಸೇರಿಸಬೇಕು ಎಂದರೆ, ಇದೇ ವೆಬ್ಸೈಟ್ ಗೆ ಭೇಟಿ ನೀಡಿ ಹೆಸರನ್ನು ಸೇರಿಸಬಹುದು.

How to change mobile number linked to ration card