ಚಿಕ್ಕಮಗಳೂರು: ಪತ್ನಿಗೆ ಬೇರೊಬ್ಬ ಯುವಕನಿಂದ ಮೆಸೇಜ್! ಮನನೊಂದು ಪತಿ ಆತ್ಮಹತ್ಯೆ
ಚಿಕ್ಕಮಗಳೂರು ತಾಲೂಕಿನ ಬ್ಯಾಗದಹಳ್ಳಿಯಲ್ಲಿ ಪತ್ನಿಗೆ ಯುವಕನೊಬ್ಬ ಮೆಸೇಜ್ ಮಾಡಿದ ವಿಚಾರವಾಗಿ ನಡೆದ ಜಗಳದ ಬಳಿಕ 26 ವರ್ಷದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

- ಪತ್ನಿಗೆ ಮೆಸೇಜ್ ವಿಚಾರವಾಗಿ ದಂಪತಿ ಗಲಾಟೆ
- ಬ್ಯಾಗದಹಳ್ಳಿ, ಚಿಕ್ಕಮಗಳೂರುನಲ್ಲಿ ಪತಿ ಆತ್ಮಹತ್ಯೆ
- ಅಕ್ರಮ ಸಂಬಂಧ ಶಂಕೆ; ಪ್ರಕರಣ ದಾಖಲು
ಚಿಕ್ಕಮಗಳೂರು (Chikkamagaluru) ತಾಲೂಕಿನ ಬ್ಯಾಗದಹಳ್ಳಿಯಲ್ಲಿ ಕುಟುಂಬ ಕಲಹ ದುರಂತಕ್ಕೆ ತಿರುಗಿದ ಘಟನೆ ನಡೆದಿದೆ. 26 ವರ್ಷದ ಮನು ಎಂಬ ಯುವಕ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಫೆಬ್ರವರಿ 20ರ ರಾತ್ರಿ ಪತ್ನಿಗೆ ಮತ್ತೊಬ್ಬ ಯುವಕ ಮೆಸೇಜ್ ಮಾಡಿದ್ದ ವಿಚಾರವಾಗಿ ಮನೆಯಲ್ಲಿ ತೀವ್ರ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ 112 ಸಹಾಯವಾಣಿ ಮೂಲಕ ಪೊಲೀಸರು ಸ್ಥಳಕ್ಕೆ ಬಂದು ಸಮಾಧಾನಪಡಿಸಿದ್ದರು.
ಆದರೆ ಮರುದಿನ (ಫೆ.21) ಮನು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿಯ ಮೇಲೆ ಅಕ್ರಮ ಸಂಬಂಧದ ಶಂಕೆಯಿಂದ ಈ ತೀವ್ರ ನಿರ್ಧಾರ ಕೈಗೊಂಡಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಮನು ಸಾವಿಗೆ ನ್ಯಾಯ ಒದಗಿಸಬೇಕೆಂದು ಆತನ ಪೋಷಕರು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
TRENDING ARTICLES1 / 4







