ತೆರಿಗೆ ಕಟ್ಟೋ ಮಗ ಅಥವಾ ಮಗಳಿದ್ರೆ ತಾಯಿಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತಾ? ಕೊನೆ ಗಳಿಗೆಯಲ್ಲಿ ಹೊಸ ರೂಲ್ಸ್
ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನಿಯ ಬ್ಯಾಂಕ್ ಅಕೌಂಟ್ ಗೆ ತಿಂಗಳಿಗೆ ₹2000 ಬರುತ್ತದೆ. ಈ ಯೋಜನೆಯ ಸೌಲಭ್ಯ ಪಡೆಯುವ ಮಹಿಳೆ 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು..
ಕರ್ನಾಟಕ ರಾಜ್ಯ ಸರ್ಕಾರ ಹೆಣ್ಣುಮಕ್ಕಳಿಗಾಗಿ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojane). ಮನೆಯ ಪರಿಸ್ಥಿತಿ ಹೇಗೆ ಇದ್ದರು, ಗಂಡ ಮನೆ ಮಕ್ಕಳು ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ಮನೆಯ ಯಜಮಾನಿಗೆ ಸಹಾಯ ಮಾಡುವುದಕ್ಕೆ ಜಾರಿಗೆ ತಂದಿರುವ ಯೋಜನೆ ಇದು.
ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನಿಯ ಬ್ಯಾಂಕ್ ಅಕೌಂಟ್ ಗೆ (Bank Account) ತಿಂಗಳಿಗೆ ₹2000 ಬರುತ್ತದೆ. ಈ ಯೋಜನೆಯ ಸೌಲಭ್ಯ ಪಡೆಯುವ ಮಹಿಳೆ 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು..
ಹಾಗೆಯೇ ಮನೆಯ ಯಜಮಾನಿ ಎಂದು ರೇಷನ್ ಕಾರ್ಡ್ ನಲ್ಲಿ (Ration Card) ಉಲ್ಲೇಖಿಸಿರಬೇಕು. ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯವಾಗಿ ಇರಬೇಕು. ಇದೆಲ್ಲವೂ ಇರುವವರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಯ ಪ್ರಯೋಜಯ (Gruha Lakshmi Scheme) ಪಡೆಯುವ ಮಹಿಳೆಯ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇರಬೇಕು, ಒಂದು ವೇಳೆ ಮನೆಯ ಯಜಮಾನಿಯ ಗಂಡ ಟ್ಯಾಕ್ಸ್ ಕಟ್ಟುವವರಾದರೆ, ಅವರು ಈ ಯೋಜನೆಗೆ ಅರ್ಹತೆ ಪಡೆಯುವುದಿಲ್ಲ ಟ್ಯಾಕ್ಸ್ ಕಟ್ಟುವವರ ಹತ್ತಿರ ಎಪಿಎಲ್ ಕಾರ್ಡ್ ಇರುತ್ತದೆ.
ಎಪಿಎಲ್ ಕಾರ್ಡ್ ಹೊಂದಿರುವವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದರು, ಅವರಿಗೆ ₹2000 ಸಿಗುವುದಿಲ್ಲ. ಇನ್ನು ಮಹಿಳೆಯ ಗಂಡ ಮಾತ್ರವಲ್ಲ, ಆಕೆಯ ಮಕ್ಕಳು ಟ್ಯಾಕ್ಸ್ ಕಟ್ಟುತ್ತಿದ್ದರೆ, ಆಗಲು ಗೃಹಲಕ್ಷ್ಮಿಯ ₹2000 ಸಿಗುವ ಸಾಧ್ಯತೆ ಕಡಿಮೆ ಇರುತ್ತದೆ.
ಏಕೆಂದರೆ, ಆಕೆಯ ಮಕ್ಕಳ ಹತ್ತಿರ ಎಪಿಎಲ್ ರೇಶನ್ ಕಾರ್ಡ್ ಇರುತ್ತದೆ. ಇದೊಂದು ವಿಚಾರವಾದರೆ, ಗೃಹಲಕ್ಷ್ಮಿ ಯೋಜನೆಯ ವಿಷಯದಲ್ಲಿ ಸರ್ಕಾರ ಕೆಲವು ನಿಯಮಗಳನ್ನು ತಂದಿದ್ದು, ಅದನ್ನೆಲ್ಲ ನೀವು ತಿಳಿದುಕೊಂಡು, ನಿಮಗೆ ಅರ್ಹತೆ ಇದ್ದರೆ ಮಾತ್ರ ನೀವು ಈ ಯೋಜನೆಯ ಫಲ ಪಡೆಯುತ್ತೀರಿ.
ಪ್ರಸ್ತುತ ಸರ್ಕಾರ (Karnataka Govt) ಇನ್ನು ಅಧಿಕೃತ ಮಾಹಿತಿ ನೀಡಿಲ್ಲ, ಆದರೆ ಎಪಿಎಲ್ ಕಾರ್ಡ್ ಹೊಂದಿರುವವರು ಟ್ಯಾಕ್ಸ್ ಕಟ್ಟುತ್ತಾರೆ, ಅದರಿಂದಲೇ ಅವರ ಹತ್ತಿರ ಬಿಪಿಎಲ್ ಕಾರ್ಡ್ ಇರುವುದಿಲ್ಲ. ಇವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಹಣ ಬರುವ ಸಾಧ್ಯೆತೆ ಕಡಿಮೆ ಇದೆ.
ಆದರೆ ಎಪಿಎಲ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ ಇರುವ ಜನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದು, ಹಣ ಬಂದಮೇಲೆ ಎಲ್ಲ ಪ್ರಶ್ನೆಗೆ ಉತ್ತರ ಸಿಗಲಿದೆ.
ಗೃಹಲಕ್ಷ್ಮಿ ಯೋಜನೆಗೆ ಈಗ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಆಗಸ್ಟ್ 15ರಂದು ಯೋಜನೆ ಲಾಂಚ್ ಆಗಲಿದೆ. ಈ ಯೋಜನೆಯ ಅರ್ಹತೆ ಪಡೆಯುವ ಮನೆಯ ಯಜಮಾನಿಯರಿಗೆ ತಿಂಗಳಿಗೆ ₹2000 ಅವರ ಖಾತೆಗೆ ಸೇರುತ್ತದೆ.
If the son or daughter pays tax, the mother gets the Gruha Lakshmi Yojane money