ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್! ಮಹಿಳೆಯರಿಗೆ ಬಿಗ್ ಅಪ್‌ಡೇಟ್
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ₹2,000 ಹಣ ಜಮಾ ವಿಳಂಬ ಕುರಿತ ಗೊಂದಲಕ್ಕೆ ತೆರೆ ಬಿದ್ದಿದ್ದು, ಕಂತುಗಳು ನಿಲ್ಲುವುದಿಲ್ಲ, ತಾಂತ್ರಿಕ ಹಾಗೂ ಜಿಎಸ್‌ಟಿ ಕಾರಣದಿಂದ ಕೆಲವೊಮ್ಮೆ ಒಟ್ಟಿಗೆ ಜಮಾ ಆಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದು ಸಿಎಂ ಸಲಹೆಗಾರರು ಸ್ಪಷ್ಟವಾಗಿ ಹೇಳಿದ್ದಾರೆ
- ಗೃಹಲಕ್ಷ್ಮಿ ಯೋಜನೆ ₹2,000 ಕಂತುಗಳು ನಿಲ್ಲಲ್ಲ
- ಹಣ ಜಮಾ ವಿಳಂಬಕ್ಕೆ ತಾಂತ್ರಿಕ ಕಾರಣ ಸ್ಪಷ್ಟನೆ
- ಕಾಂಗ್ರೆಸ್ ಗ್ಯಾರಂಟಿ ಮುಂದುವರಿಕೆ ಬಗ್ಗೆ ಭರವಸೆ
Karnataka Gruha lakshmi Scheme: ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ತಡವಾಗುತ್ತಿದೆ ಎಂಬ ಚರ್ಚೆ ಜೋರಾಗುತ್ತಿದ್ದಂತೆ, ಸರ್ಕಾರದ ಮಟ್ಟದಲ್ಲಿ ಸ್ಪಷ್ಟನೆ ಹೊರಬಿದ್ದಿದೆ.
ತಿಂಗಳಿಗೆ ₹2,000 ನೀಡುವ ಈ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯ ಹಣವನ್ನು ತಿಂಗಳಿಗೊಮ್ಮೆ ನೀಡುವ ಉದ್ದೇಶ ಇದ್ದರೂ, ಕೆಲವೊಮ್ಮೆ ತಾಂತ್ರಿಕ ಅಡಚಣೆಗಳು ಹಾಗೂ ಆರ್ಥಿಕ ನಿರ್ವಹಣೆಯ ಕಾರಣ ಒಂದೇ ಬಾರಿ ಎರಡು ಅಥವಾ ಮೂರು ತಿಂಗಳ ಹಣ ಜಮಾ ಆಗುತ್ತಿದೆ ಎಂದು ವಿವರಿಸಿದರು. ಇದನ್ನು ಹಣ ಬಾಕಿ ಇಡುವಂತೆ ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು ಎಂದರು.
ಇದನ್ನೂ ಓದಿ: ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ
ಜಿಎಸ್‌ಟಿ ಹಣ ವಿಳಂಬವೂ ಕಾರಣ
ರಾಜ್ಯ ಸರ್ಕಾರ ಆರ್ಥಿಕವಾಗಿ ಸ್ಥಿರವಾಗಿದೆ ಎಂದು ತಿಳಿಸಿದ ರಾಯರೆಡ್ಡಿ, ಜಿಎಸ್‌ಟಿ ಪಾಲಿನ ಹಣವನ್ನು ಕೇಂದ್ರದಿಂದ ಸಮಯಕ್ಕೆ ಸರಿಯಾಗಿ ನೀಡದಿರುವುದು ಕೆಲವೊಮ್ಮೆ ಹಣ ಜಮಾ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ ಎಂದರು. ಆದರೂ, ಮೂರು ತಿಂಗಳಿಗೊಮ್ಮೆ ಆದರೂ ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳಿಗೆ ತಲುಪಿಸುವುದಾಗಿ ಭರವಸೆ ನೀಡಿದರು.
ಇದಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಯೋಜನೆ ಆರಂಭವಾದ ಬಳಿಕ ಇದುವರೆಗೆ 1.24 ಕೋಟಿ ಮಹಿಳೆಯರಿಗೆ ₹54,000 ಕೋಟಿ ಹಣ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಒಟ್ಟು 23 ಕಂತುಗಳಲ್ಲಿ ಪ್ರತಿಯೊಬ್ಬ ಯಜಮಾನಿಗೂ ಸರಾಸರಿ ₹46,000 ತಲುಪಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ ವಿತರಣೆ, ಅರ್ಹರಿಗೆ ಶೀಘ್ರವೇ ಹೊಸ ಪಡಿತರ ಚೀಟಿ: ಸಚಿವ ಮುನಿಯಪ್ಪ
ವಿಳಂಬಕ್ಕೆ ಆಡಳಿತಾತ್ಮಕ ಬದಲಾವಣೆ
ಮೊದಲು ಇಲಾಖೆಯಿಂದ ನೇರವಾಗಿ ಹಣ ಜಮಾ ಮಾಡಲಾಗುತ್ತಿತ್ತು. ಈಗ ತಾಲ್ಲೂಕು ಪಂಚಾಯಿತಿಗಳ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿರುವುದರಿಂದ ಕೆಲ ತಿಂಗಳುಗಳಲ್ಲಿ ಕಂತು ತಡವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಇದು ತಾತ್ಕಾಲಿಕ ಸಮಸ್ಯೆ ಮಾತ್ರ ಎಂದೂ ಹೇಳಿದರು.
ಬಡ ಕುಟುಂಬಗಳಿಗೆ ಗೃಹಲಕ್ಷ್ಮಿ ಆಧಾರ
ಗೃಹಲಕ್ಷ್ಮಿ ಯೋಜನೆ ಅನೇಕ ಬಡ ಕುಟುಂಬಗಳಿಗೆ ಆರ್ಥಿಕ ನೆಲೆ ನೀಡಿದೆ. ದಿನಸಿ ಖರೀದಿ, ಮಕ್ಕಳ ಶಿಕ್ಷಣ, ಕೃಷಿ ಚಟುವಟಿಕೆಗಳು ಸೇರಿದಂತೆ ಹಲವು ಅಗತ್ಯಗಳಿಗೆ ಈ ಹಣ ಉಪಯೋಗವಾಗುತ್ತಿದೆ.
ಆದರೂ ಕೆಲ ಫಲಾನುಭವಿಗಳು ಕಂತುಗಳು ಒಟ್ಟಿಗೆ ಬರುವುದರಿಂದ ತೊಂದರೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಗೊಂದಲ ನಿವಾರಣೆಗೆ ಸರ್ಕಾರ ನಿರಂತರವಾಗಿ ಸ್ಪಷ್ಟನೆ ನೀಡುತ್ತಿದೆ.
ಮಳೆ ಜೊತೆ ಮೈ ನಡುಗಿಸುವ ಚಳಿ! ಬೆಂಗಳೂರು ಸೇರಿ 2 ದಿನಗಳ ಕರ್ನಾಟಕ ಹವಾಮಾನ ಮುನ್ಸೂಚನೆ ಹೀಗಿದೆ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ಇನ್ನು ಮೂರೇ ದಿನ ಗಡುವು! ನವೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಹೊಸ ನಿಯಮ
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story



