Karnataka SSLC Results: ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ 2025
Karnataka SSLC Results 2025: ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಲಿದ್ದಾರೆ

- ನಾಳೆ ಬೆಳಗ್ಗೆ 11:30ಕ್ಕೆ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಣೆ
- KSEAB ಅಧಿಕೃತ ವೆಬ್ಸೈಟ್ನಲ್ಲಿ SSLC ಫಲಿತಾಂಶ ಲಭ್ಯ
- 8.90 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು
Karnataka SSLC Results 2025: ಕರ್ನಾಟಕ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನಿರೀಕ್ಷೆಯ ದಿನ ಬಂದೇ ಬಿಟ್ಟಿದೆ. ನಾಳೆ, ಮೇ 2ರಂದು ಎಸ್ಎಸ್ಎಲ್ಸಿ ಫಲಿತಾಂಶ (Karnataka SSLC Result 2025) ಪ್ರಕಟವಾಗಲಿದೆ.
ಬೆಳಿಗ್ಗೆ 11:30ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಸುದ್ದಿಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಲಿದ್ದಾರೆ.
ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆದಿತ್ತು. ರಾಜ್ಯದಾದ್ಯಂತ 8.90 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಬಹುತೇಕ ವಿದ್ಯಾರ್ಥಿಗಳು ಈಗ ತಮಗೆ ಬಂದ ಅಂಕಗಳನ್ನು ನೋಡಲು ಉತ್ಸುಕತೆಯಿಂದ ಕಾಯುತ್ತಿದ್ದಾರೆ.
ಫಲಿತಾಂಶ ಪ್ರಕಟಣೆ ನಂತರ ಮಧ್ಯಾಹ್ನ 12:30ಕ್ಕೆ kseab.karnataka.gov.in ಮತ್ತು karresults.nic.in ವೆಬ್ಸೈಟ್ಗಳಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನೋಡಬಹುದು. ಇದಕ್ಕಾಗಿ ಅವರು ತಮ್ಮ ರೋಲ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕಾಗುತ್ತದೆ.
How To Check SSLC Result 2025
ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ “ಕರ್ನಾಟಕ SSLC ಫಲಿತಾಂಶ 2025” ಎಂಬ ಲಿಂಕ್ನ್ನು ಕ್ಲಿಕ್ ಮಾಡಬೇಕು. ಈ ಮೂಲಕ ಅವರು ತಮ್ಮ ಅಂಕಪಟ್ಟಿಯನ್ನು ಪರದೆಯ ಮೇಲೆ ನೋಡಿ ಪ್ರಿಂಟ್ ಮಾಡಿಕೊಳ್ಳಬಹುದು. ಇದು ಭವಿಷ್ಯಕ್ಕೆ ಬಹಳ ಉಪಯೋಗವಾಗಲಿದೆ.
ಯಾವುದೇ ತೊಂದರೆ ಇಲ್ಲದೆ ಫಲಿತಾಂಶ ತಲುಪಿಸಬೇಕೆಂಬ ನಿಟ್ಟಿನಲ್ಲಿ ಇಲಾಖೆಯು ಸಕಾಲದಲ್ಲಿ ತಂತ್ರಾಂಶವನ್ನು ಸಿದ್ಧಪಡಿಸಿದೆ. ವಿವಿಧ ಬ್ರೌಸರ್ಗಳು ಹಾಗೂ ಮೊಬೈಲ್ಗಳು (mobile devices) ಮೂಲಕವೂ ಈ ಫಲಿತಾಂಶ ಲಭ್ಯವಿರುವುದರಿಂದ, ಪ್ರವೇಶ ಸುಲಭವಾಗಿದೆ.
SSLC Result 2025 Checking Govt Websites
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ, ಕೆಎಸ್ಇಎಬಿ ಮೇ 2 ರಂದು ಬೆಳಿಗ್ಗೆ 11:30 ಕ್ಕೆ 10 ನೇ ತರಗತಿ ಫಲಿತಾಂಶಗಳನ್ನು ಪ್ರಕಟಿಸಲಿದೆ.
Karnataka SSLC Result 2025







