ಕೋಲಾರದಲ್ಲಿ ಕೇವಲ 5 ಸೆಕೆಂಡುಗಳಲ್ಲಿ ಕುಸಿದ ಕಟ್ಟಡ, ವೀಡಿಯೋ ವೈರಲ್

Story Highlights

ಕೋಲಾರದಲ್ಲಿ ಕಟ್ಟಡವೊಂದು ಕುಸಿಯುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ, ಕಟ್ಟಡ ಕುಸಿಯುವ ಮುನ್ನ ಕಟ್ಟಡದಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.

  • ಕೋಲಾರ ಬಂಗಾರಪೇಟೆ ಕಟ್ಟಡ ಕುಸಿತ
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
  • ಕೇವಲ 5 ಸೆಕೆಂಡುಗಳಲ್ಲಿ ಕುಸಿದ ಕಟ್ಟಡ
  • ದುರಸ್ತಿಯಿಂದಾಗಿ ಕಟ್ಟಡದಲ್ಲಿ ಬಿರುಕು

ಕೋಲಾರ (Kolar): ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ (Viral Video) ಆಗುತ್ತಿದೆ. ಈ ಕ್ಲಿಪ್‌ನಲ್ಲಿ ಕಟ್ಟಡವೊಂದು ಕುಸಿಯುತ್ತಿರುವುದನ್ನು (Building Collapse) ಕಾಣಬಹುದು. ಕೋಲಾರದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಕಟ್ಟಡ ಕುಸಿದಿದೆ. ಈ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ (Bangarapete) ಯಲ್ಲಿ ನಡೆದಿದ್ದು, ಸ್ಥಳೀಯರು ಹೇಳುವಂತೆ ಕಟ್ಟಡದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿತ್ತು, ಇದರಿಂದಾಗಿ ಕಟ್ಟಡದಲ್ಲಿ ಭಾರಿ ಬಿರುಕುಗಳು ಉಂಟಾಗಿದ್ದವು.

ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸಕಾಲಕ್ಕೆ ಸ್ಥಳಕ್ಕೆ ಆಗಮಿಸಿ, ಕಟ್ಟಡ ಕುಸಿಯುವ ಮುನ್ನ ಕಟ್ಟಡದಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಇದರಿಂದಾಗಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

ಕಟ್ಟಡ ಕುಸಿತದಿಂದ ಮುಂಬಾಗದ ಶಾಲೆಗೆ ಹಾನಿಯಾಗಿದೆ ಎನ್ನಲಾಗಿದೆ, ಇನ್ನು ಕಟ್ಟಡದ ದುಸ್ಥಿತಿ ಮಾಲೀಕರಿಗೆ ಮೊದಲೇ ಗೊತ್ತಿದ್ದರೂ ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಸರಿಯಾದ ಸಮಯಕ್ಕೆ ಕಟ್ಟದಲ್ಲಿದ್ದವರೆಲ್ಲ ಹೊರ ಬಂದಿದ್ದರಿಂದ ಆಗಬಹುದಾಗಿದ್ದ ಭಾರೀ ಅವಘಡ ತಪ್ಪಿದೆ.

Kolar Bangarpet Building Collapse Video Goes

Related Stories