ಫ್ರೀ ಬಸ್ ಸೌಲಭ್ಯ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಇದೇ ಗುಡ್ ನ್ಯೂಸ್.. KSRTC ಬಿಗ್ ಅಪ್ಡೇಟ್!
ನಮಸ್ಕಾರ ಸ್ನೇಹಿತರೇ, ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಬಾಂದು ಒಂದೆರಡು ತಿಂಗಳು ಕಳೆದಿದೆ. ಎಲೆಕ್ಷನ್ ಗಿಂತ ಮೊದಲು ಕಾಂಗ್ರೆಸ್ ಸರ್ಕಾರವು (Congress Government) ಕೆಲವು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡುವ ಭರವಸೆ ಕೊಟ್ಟಿತ್ತು. ಅದೇ ರೀತಿ ಈಗ ಎಲ್ಲಾ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಕಾಂಗ್ರೆಸ್ ಸರ್ಕಾರ ಈಗಾಗಲೇ ಒಂದು ಯೋಜನೆಯನ್ನು ಪೂರ್ತಿಯಾಗಿ ಲಾಂಚ್ ಮಾಡಿದೆ. ಗೃಹಲಕ್ಷ್ಮಿ (Gruhalakshmi) ಮತ್ತು ಗೃಹಜ್ಯೋತಿ (Gruhajyoti) ಯೋಜನೆಗೆ ಈಗಷ್ಟೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಕಾಂಗ್ರೆಸ್ ಸರ್ಕಾರ ಪೂರ್ತಿಯಾಗಿ ಲಾಂಚ್ ಮಾಡಿರುವ ಯೋಜನೆ ಶಕ್ತಿ (Shakti Yojane) ಯೋಜನೆ ಆಗಿದೆ. ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಮಹಿಳೆಯರು ಸರ್ಕಾರಿ ನಾನ್ ಎಸಿ ಬಸ್ ಗಳಲ್ಲಿ ಇಡೀ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಉಚಿತವಾಗಿ ಓಡಾಡಬಹುದು.
ಜೂನ್ 11ರಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಶಕ್ತಿ ಯೋಜನೆ ಶುರುವಾದ ನಂತರ ಮಹಿಳೆಯರು ಬಸ್ ನಲ್ಲಿ ಓಡಾಡುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಬಸ್ ಗಳು ಯಾವಾಗಲೂ ರಶ್ ಇರುತ್ತದೆ.. ಹಾಗೆಯೇ ಮಹಿಳೆಯರು ತೀರ್ಥಕ್ಷೇತ್ರ, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.
ಈ ರೀತಿ ಮಹಿಳೆಯರಿಗೆ ಮಾತ್ರ ಸೌಲಭ್ಯ ಕೊಟ್ಟರೆ ಹೇಗೆ ಪುರುಷರಿಗೂ ಸೌಲಭ್ಯ ಕೊಡಬೇಕು ಎನ್ನುವ ಮಾತುಗಳು ಕೇಳಿಬಂದಿತ್ತು. ಈ ರೀತಿ ಕೇಳುತ್ತಿದ್ದ ಪುರುಷರಿಗೂ ಈಗ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ, ಪುರುಷರಿಗೆ ಒಂದು ಹೊಸ ಯೋಜನೆಯನ್ನು ತರಲಿದೆ. ಈಗ ಮಹಿಳೆಯರೇ ಹೆಚ್ಚಾಗಿ ಬಸ್ ನಲ್ಲಿ ಓಡಾಡುತ್ತಿರುವುದರಿಂದ, ನೂಕು ನುಗ್ಗಲು ಕೂಡ ಜಾಸ್ತಿ ಇದೆ.
ಪುರುಷರಿಗೆ ಬಸ್ ನಲ್ಲಿ ಪ್ರಯಾಣ ಮಾಡುವುದಕ್ಕೂ ಕಷ್ಟ ಆಗುತ್ತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.. ಹಾಗಾಗಿ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಇನ್ನು ಕೆಲವೇ ದಿನಗಳಲ್ಲಿ ಪುರುಷರಿಗೆ ಒಂದು ವಿಶೇಷ ಸೌಲಭ್ಯ ಸಿಗಲಿದೆ. ಅದೇನು ಎಂದರೆ, ಇನ್ನುಮುಂದೆ ಪುರುಷರಿಗೆ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗುತ್ತದೆ..
ನಮಗೆಲ್ಲ ಗೊತ್ತಿರುವ ಈಗ ಟೆಕ್ನಾಲಜಿ ಮುಂದುವರೆದು, ಸಾಕಷ್ಟು ಹೊಸ ವಿಚಾರಗಳು ಜಾರಿಗೆ ಬರುತ್ತಿವೆ. ನಮ್ಮ ರಾಜ್ಯದಲ್ಲಿ ಈಗ ಡೀಸೆಲ್ ಚಾಲಿತ ಬಸ್ ಗಳ ಜೊತೆಗೆ ವಿದ್ಯುತ್ ಚಾಲಿತ ಬಸ್ ಗಳನ್ನು ಸಹ ನೋಡಬಹುದು. ಇದರ ಜೊತೆಗೆ ಶೀಘ್ರದಲ್ಲೇ CNG ಚಾಲಿತ ಬಸ್ ಗಳು ರಾಜ್ಯಕ್ಕೆ ಎಂಟ್ರಿ ಕೊಡಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಡೀಸೆಲ್ ಗಿಂತಲು CNG ಚಾಲಿತ ಬಸ್ ಗಳು ಒಳ್ಳೆಯ ಪರ್ಫಾರ್ಮೆನ್ಸ್ ಕೊಡುತ್ತದೆ.
ಬಸ್ ಗಳನ್ನು ಹೆಚ್ಚು ಬೂಸ್ಟ್ ಮಾಡುತ್ತದೆ. ಸರ್ಕಾರಕ್ಕೂ ಸಹ CNG ಚಾಲಿತ ಬಸ್ ಗಳನ್ನು ನಿರ್ವಹಿಸುವುದು ಕೂಡ ಸುಲಭ ಆಗುತ್ತದೆ. ಈ ಕಾರಣಗಳಿಂದ ರಾಜ್ಯಕ್ಕೆ CNG ಚಾಲಿತ ಬಸ್ ಗಳು ಟಿಕೆಟ್ ದರದಲ್ಲಿ ಇಳಿಕೆ ಆಗುವುದು ಖಂಡಿತ ಎನ್ನಲಾಗುತ್ತಿದೆ. ಈ ಕಾರಣದಿಂದ ಪುರುಷರು ಕೂಡ ಕಡಿಮೆ ಹಣದಲ್ಲಿ ಪ್ರಯಾಣ ಮಾಡಬಹುದು. ಪುರುಷರಿಗೂ ಈ ಸೌಲಭ್ಯ ಸಿಗಲಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ.
Ksrtc will give a good news to men