ಮುಡಾ ಹಗರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ
ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ನಗರದ ವಕೀಲರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮೈಸೂರು (Mysuru): ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ನಗರದ ವಕೀಲರೊಬ್ಬರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪತ್ರ ಬರೆದಿದ್ದಾರೆ. 296 ಪುಟಗಳ ದಾಖಲೆ ಸೇರಿದಂತೆ ಹಗರಣದ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಮುಡಾದ ಹಿಂದಿನ ಆಯುಕ್ತರಾದ ದಿನೇಶ್ ಕುಮಾರ್ ಮತ್ತು ಡಿ.ಬಿ.ನಟೇಶ್ ಅವರು 100 ಕೋಟಿ ರೂ.ಗೂ ಹೆಚ್ಚು ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣದ ಬಗ್ಗೆ ವಕೀಲ ರವಿಕುಮಾರ್ ಅವರಿಂದ ಪ್ರಧಾನಿ ನರೇಂದ್ರ ಮೋದಿಗೆ ದೂರು ಸಲ್ಲಿಕೆಯಾಗಿದೆ. ಅವರು ಜುಲೈ 19ರಂದು 296 ಪುಟಗಳ ದಾಖಲೆಗಳ ಜೊತೆಗೆ ದೂರು ಸಲ್ಲಿಸಿದ್ದು, ಈ ಹಗರಣದಲ್ಲಿ ಸೇಲ್ ಡೀಡ್ ಮತ್ತು ಸೆಟಲ್ ಮೆಂಟ್ ಡೀಡ್ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ.
ದಿನೇಶ್ ಕುಮಾರ್ ಹಾಗೂ ನಟೇಶ್ ಅವರೇ ಬೇನಾಮಿ ವಹಿವಾಟು ನಡೆಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 10 ಪುಟಗಳ ದೂರಿಗೆ ಆಧಾರವಾಗಿ 296 ಪುಟಗಳ ದಾಖಲೆಗಳನ್ನು ಕೂಡ ವಕೀಲರು ಮೋದಿ ಅವರಿಗೆ ಕಳುಹಿಸಿದ್ದಾರೆ.
Letter to Prime Minister Narendra Modi regarding Muda scam