ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಆದ ಮಾತ್ರಕ್ಕೆ ಹಣ ಜಮಾ ಆಗೋಲ್ಲ, ತಪ್ಪದೆ ಈ ಕೆಲಸ ಮಾಡಲೇಬೇಕು! ಹೊಸ ರೂಲ್ಸ್
ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಇನ್ನೂ ಅನೇಕ ಗೊಂದಲಗಳು ಫಲಾನುಭವಿಗಳನ್ನು ಕಾಡುತ್ತಿವೆ, ಒಂದೆಡೆ ಇನ್ನು ತಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದ ಅನೇಕ ಜನರಿದ್ದಾರೆ.
Gruha Lakshmi Yojane : ಜುಲೈ 19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಗೃಹ ಲಕ್ಷ್ಮಿ’ ಯೋಜನೆಗೆ (Gruha Lakshmi Scheme) ಚಾಲನೆ ನೀಡಿದರು. ಆಗಸ್ಟ್ 16 ರಂದು ಫಲಾನುಭವಿಗಳಿಗೆ ಹಣ ವರ್ಗಾವಣೆಯನ್ನು ಪ್ರಾರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ .
ಅರ್ಹ ಮಹಿಳೆಯರು ಕರ್ನಾಟಕ ಒನ್ (Karnataka One), ಗ್ರಾಮ ಒನ್ (Gram One), ಬೆಂಗಳೂರು ಒನ್ (Bangalore One) ಮತ್ತು ಬಾಪೂಜಿ ಸೇವಾ ಕೇಂದ್ರದಂತಹ (Bapuji Seva Kendra) ಗೊತ್ತುಪಡಿಸಿದ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು. ಫಲಾನುಭವಿಗಳನ್ನು ನೋಂದಾಯಿಸಲು ಯಾವುದೇ ನೋಂದಣಿ ಶುಲ್ಕದ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದು ಕರ್ನಾಟಕ ಸರ್ಕಾರವು ಮನೆಯ ಯಜಮಾನಿ ಮಹಿಳೆಗೆ ಆರ್ಥಿಕ ನೆರವು ನೀಡಲು ಪ್ರಾರಂಭಿಸಿರುವ ಪರಿಣಾಮಕಾರಿ ಯೋಜನೆಯಾಗಿದೆ.
ಖಾಸಗಿ ಬಸ್ಸಿನಲ್ಲೂ ಮಹಿಳೆಯರಿಗೆ ಫ್ರೀ ಫ್ರೀ ಫ್ರೀ.. ಪ್ರೈವೇಟ್ ಬಸ್ ಗಳಿಗೂ ಶಕ್ತಿ ಯೋಜನೆ ವಿಸ್ತರಣೆ ಸಾಧ್ಯತೆ!
ಯೋಜನೆಯ ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. sevasindhuservices.karnataka.gov.in ವೆಬ್ಸೈಟ್ ಮೂಲಕ ತಮ್ಮ ಗೊತ್ತು ಪಡಿಸಿದ ಸ್ಥಳ ಸಮಯ ತಿಳಿದುಕೊಳ್ಳಬಹುದು. ರಾಜ್ಯದ ಯಾವುದೇ ಗೊತ್ತುಪಡಿಸಿದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (CSC) ಆಫ್ಲೈನ್ ನೋಂದಣಿಯನ್ನು ಮಾಡಬಹುದು.
ಬ್ಯಾಂಕ್-ಲಿಂಕ್ ಮಾಡಿದ ಆಧಾರ್ ಕಾರ್ಡ್
ಹೌದು, ಸ್ನೇಹಿತರೆ ತಪ್ಪದೆ ತಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಲೇಬೇಕು. ಹಲವಾರು ಸೇವಾ ಕೇಂದ್ರಗಳಲ್ಲಿ ನೀವೆಲ್ಲ ಗಮನಿಸರುವ ಹಾಗೆ ನೋಂದಣಿ ಸಮಯದಲ್ಲಿ ಕೇವಲ ನಿಮ್ಮ ರೇಷನ್ ಕಾರ್ಡ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಜೊತೆಗೆ ಒಟಿಪಿಗಾಗಿ ಮೊಬೈಲ್ ನಂಬರ್ ಅನ್ನು ಮಾತ್ರ ಕೇಳಲಾಗುತ್ತಿದೆ.
ಕುಟುಂಬದ ಯಜಮಾನಿ ಮೃತ ಪಟ್ಟಿದ್ದರೆ ಗೃಹಲಕ್ಷ್ಮಿ ಯೋಜನೆ ಹಣ ಯಾರಿಗೆ ಸಿಗುತ್ತದೆ ಗೊತ್ತಾ? ಹೊಸ ರೂಲ್ಸ್
ಅಂದ ಮೇಲೆ ನಿಮ್ಮ ಆಧಾರ್ ಲಿಂಕ್ ಆಗಿರುವ ಖಾತೆಗೆ ಹಣ ಬರಬೇಕಾದರೆ, ಈ ಕೂಡಲೇ ನೀವು ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಳ್ಳಬೇಕು. ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಳ್ಳಿ
ಗೃಹ ಲಕ್ಷ್ಮಿ ಯೋಜನೆಗೆ ಅಗತ್ಯವಿರುವ ದಾಖಲೆಗಳು
ಬಡತನ ರೇಖೆಗಿಂತ ಮೇಲಿರುವ ಕಾರ್ಡ್ (APL)/ಬಡತನ ರೇಖೆಗಿಂತ ಕೆಳಗಿರುವ (BPL)/ಅಂತ್ಯೋದಯ ಕಾರ್ಡ್.
ಬ್ಯಾಂಕ್-ಲಿಂಕ್ ಮಾಡಿದ ಆಧಾರ್ ಕಾರ್ಡ್
ಫಲಾನುಭವಿಯ ಬ್ಯಾಂಕ್ ವಿವರಗಳು (ಸದ್ಯಕ್ಕೆ ಸೇವಾ ಕೇಂದ್ರಗಳಲ್ಲಿ ಬ್ಯಾಂಕ್ ವಿವರಗಳನ್ನು ಕೇಳಲಾಗುತ್ತಿಲ್ಲ).
ಆಧಾರ್ ಲಿಂಕ್ ಮಾಡಿದ ಫೋನ್ ಸಂಖ್ಯೆ (ಸದ್ಯ ಸೇವಾ ಕೇಂದ್ರಗಳಲ್ಲಿ ಯಾವುದೇ ಒಂದು ನಂಬರ್ ಇದ್ದರೆ ಸಾಕು ಎನ್ನಲಾಗುತ್ತಿದೆ).
Link your Aadhaar Card with Bank Account to avail Gruha Lakshmi Yojane
Follow us On
Google News |