ರಸ್ತೆ ಬದಿ ತ್ಯಾಜ್ಯ ಸುರಿದ ಮಾಂಸದ ಅಂಗಡಿಗೆ ಬೀಗ ಜಡಿದ ಅಧಿಕಾರಿಗಳು
ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಕಸವನ್ನು ರಸ್ತೆಬದಿಯಲ್ಲಿ ಸುರಿದ ಕಾರಣಕ್ಕೆ ಮಾಂಸದ ಅಂಗಡಿಗೆ ಅಧಿಕಾರಿಗಳು ಬೀಗ ಜಡಿದ ‘ಸೀಲ್’ ಹಾಕಿದ್ದಾರೆ. ಅಲ್ತಾಪ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದವರು. ಚಿಕ್ಕಮಗಳೂರಿಗೆ ಹೋಗುವ ರಸ್ತೆಯಲ್ಲಿ ಮಾಂಸದ ಅಂಗಡಿ ಇಟ್ಟುಕೊಂಡಿದ್ದಾರೆ.
ಹೀಗಿರುವಾಗ ಮಾಂಸದ ತ್ಯಾಜ್ಯವನ್ನು ಆ ಪ್ರದೇಶದಲ್ಲಿ ಸುರಿದಿದ್ದಾರೆ. ಇದರಿಂದ ದುರ್ವಾಸನೆ ಬೀರುತ್ತಿದ್ದು, ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಆ ಭಾಗದ ಜನರು ಪಟ್ಟಣ ಪಂಚಾಯಿತಿ ಆಯುಕ್ತರಿಗೆ ದೂರು ನೀಡಿದರು.
ದೂರಿನ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಲ್ತಾಪ್ ಅವರ ಮಾಂಸದ ಅಂಗಡಿಗೆ ಬೀಗ ಹಾಕಿ ಸೀಲ್ ಮಾಡಿದ್ದಾರೆ.
ಇದರಿಂದ ಕುಪಿತಗೊಂಡ ಅಲ್ತಾಪ್ ಆ ಪ್ರದೇಶದಲ್ಲಿ ಪ್ರತಿಭಟನೆ ಆರಂಭಿಸಿದರು. ಅಂಗಡಿಗೆ ಬೀಗ ಹಾಕಿದರೆ ಜೀವನ ನಿರ್ವಹಣೆಗೆ ತೊಂದರೆಯಾಗುತ್ತದೆ ಎಂದರು. ಈ ಜಾಗದಲ್ಲಿ ಮಾಂಸದ ತ್ಯಾಜ್ಯ ಸುರಿಯದಿದ್ದರೆ ಮತ್ತೆ ಅಂಗಡಿ ತೆರೆಯಲು ಅನುಮತಿ ನೀಡಲಾಗುವುದು ಎಂದು ಆಯುಕ್ತರು ತಿಳಿಸಿದರು. ಅದನ್ನು ಸ್ವೀಕರಿಸಿದ ಅಲ್ತಾಬ್ ಹೋರಾಟವನ್ನು ಕೈಬಿಟ್ಟು ಹೊರಟು ಹೋದರು.
Meat shop sealed for dumping waste on roadside