ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮತ್ತು ಇಬ್ಬರು ಗಂಡು ಮಕ್ಕಳು ಸಾವು

ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದು ತಾಯಿ ಮಕ್ಕಳು ಧಾರುಣ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ (Vijayapura District) ದೇವರಹಿಪ್ಪರಗಿ ತಾಲ್ಲೂಕಿನ ಹರನಾಳದಲ್ಲಿ ನಡೆದಿದೆ.

- - - - - - - - - - - - - Story - - - - - - - - - - - - -
  • ಕೃಷಿ ಹೊಂಡದಲ್ಲಿ ತಾಯಿ ಮತ್ತು ಮಕ್ಕಳಿಬ್ಬರು ಬಿದ್ದು ಸಾವು.
  • ವಿಜಯಪುರ ಜಿಲ್ಲೆ, ದೇವರಹಿಪ್ಪರಗಿ ತಾಲ್ಲೂಕಿನ ಹರನಾಳದಲ್ಲಿ ಘಟನೆ.
  • ಶವಗಳನ್ನು ಹೊರ ತೆಗೆದು, ಪೊಲೀಸರಿಂದ ತನಿಖೆ.

ವಿಜಯಪುರ (Vijayapura): ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಹರನಾಳ ಹತ್ತಿರ ತಾಯಿ ಮತ್ತು ಮಕ್ಕಳಿಬ್ಬರೂ ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ ದುರಂತ ಘಟನೆ ನಡೆದಿದ್ದು, ಈ ದುರಂತದಲ್ಲಿ ಗೀತಾ ಬಡಗಿ (28) ಮತ್ತು ಅವರ ಮಕ್ಕಳು ಶ್ರವಣ್ (6) ಹಾಗೂ ಶರಣ್ (4) ನೀರುಪಾಲಾದರು. ಈ ಘಟನೆ ಗೀತಾ ಅವರ ತಂದೆಯ ರಾಮಪ್ಪ ನಾಯ್ಕೋಡ ಜಮೀನಿನಲ್ಲಿ ನಡೆದಿದೆ.

ಗೀತಾ, ಶ್ರೀಶೈಲ ಅವರೊಂದಿಗೆ ವಿವಾಹವಾಗಿದ್ದು, ಅವರು ಗಂಡನೊಂದಿಗೆ ಜಗಳ ಮಾಡಿ ತವರಿನ ಮನೆಗೆ ಹಿಂತಿರುಗಿದ್ದರು. ಮಕ್ಕಳೊಂದಿಗೆ ಕೃಷಿ ಹೊಂಡದ ಬಳಿಯ ಕಡೆ ಹೋಗಿದ್ದ ವೇಳೆ ಅವರ ಕಾಲು ಜಾರಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ಸ್ಥಳೀಯರು ತಾಯಿ ಮತ್ತು ಮಕ್ಕಳ ಶವಗಳನ್ನು ಹೊರ ತೆಗೆದಿದ್ದಾರೆ. ಈ ಪ್ರಕರಣ ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮತ್ತು ಇಬ್ಬರು ಗಂಡು ಮಕ್ಕಳು ಸಾವು

Mother and children tragically drown in agricultural pond

English Summary
Related Stories