Mysuru Power Cut: ಮೈಸೂರು ಜನರೇ ಗಮನಿಸಿ, ನಾಳೆ ಬೆಳಿಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಪೂರೈಕೆ ಸ್ಥಗಿತ
Mysuru Power Cut: ನವೆಂಬರ್ 12ರಂದು ಚೆಸ್ಕಾಂ ನಿರ್ವಹಣಾ ಕಾಮಗಾರಿ ಹಿನ್ನೆಲೆ ಮೈಸೂರಿನ ಆಯ್ದ ಗ್ರಾಮಗಳು ಮತ್ತು ಬಡಾವಣೆಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Mysuru Power Cut: ಮೈಸೂರಿನ ಕೆಲವು ಗ್ರಾಮಗಳು ಮತ್ತು ಬಡಾವಣೆಗಳ ನಿವಾಸಿಗಳು ನವೆಂಬರ್ 12ರಂದು ವಿದ್ಯುತ್ ಇಲ್ಲದೆ ದಿನ ಕಳೆಯಬೇಕಾಗಬಹುದು. ವಿದ್ಯುತ್ ವಿತರಣಾ ಜಾಲದ ತ್ರೈಮಾಸಿಕ ನಿರ್ವಹಣಾ ಕಾಮಗಾರಿ (Maintenance Work) ಕೈಗೊಳ್ಳುತ್ತಿರುವುದರಿಂದ ಆ ದಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC) ನಿರ್ಧರಿಸಿದೆ.
66/11 ಕೆ.ವಿ. ಆಯರಹಳ್ಳಿ, ಮಾರಶೆಟ್ಟಿಹಳ್ಳಿ ಹಾಗೂ ಮರಡಿಹುಂಡಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಕೆಲಸ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:30ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ನ.ರಾ. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ?
ಮಾರಶೆಟ್ಟಿಹಳ್ಳಿ ವ್ಯಾಪ್ತಿ: ಮಾರಶೆಟ್ಟಿಹಳ್ಳಿ, ಹಡಜನ, ಮಂಟಿ ವೃತ್ತ, ಪ್ರಶಾಂತ ಛಾಯ ಬಡಾವಣೆ, ಟಿ.ಎಂ. ಹುಂಡಿ, ದೇವಲಾಪುರ, ಕುಂಬ್ರಳ್ಳಿ, ಆವಂದವನ, ಚಿಕ್ಕೇಗೌಡನಹುಂಡಿ, ದಾಸೇಗೌಡ ಬಡಾವಣೆ ಹಾಗೂ ಶ್ರೀಶಾ ಹಿಲ್‌ವ್ಯೂ ಬಡಾವಣೆ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.
ಆಯರಹಳ್ಳಿ ವ್ಯಾಪ್ತಿ: ಆಯರಹಳ್ಳಿ, ಹಡಜನ, ದೇವಲಾಪುರ, ರಾಯನಹುಂಡಿ, ಮರಿಗೌಡನಹುಂಡಿ, ಕುಂಬ್ರಳ್ಳಿ, ಸೋಮೇಶ್ವರಪುರ, ಬಸಳ್ಳಿಹುಂಡಿ, ಕಿರಾಳು, ಸಜ್ಜೆಹುಂಡಿ ಮತ್ತು ಜಂತಗಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಇರುವುದಿಲ್ಲ.
ಮರಡಿಹುಂಡಿ ವ್ಯಾಪ್ತಿ: ಕಡವೆಕಟ್ಟೆಹುಂಡಿ, ದುದ್ದಗೆರೆ, ಲಕ್ಷ್ಮೀಪುರ ಹಾಗೂ ಮಾದೇವಿ ಕಾಲೋನಿ ಮತ್ತು ಅಕ್ಕಪಕ್ಕದ ಪ್ರದೇಶಗಳಿಗೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಕಾಮಗಾರಿ ಮುಗಿದ ತಕ್ಷಣ ವಿದ್ಯುತ್ ಸಂಪರ್ಕವನ್ನು ಪುನರಾರಂಭಿಸಲಾಗುವುದು ಎಂದು ಚೆಸ್ಕಾಂ ತಿಳಿಸಿದೆ. ಹೀಗಾಗಿ ಈ ಪ್ರದೇಶಗಳ ಜನರು ಮುಂಚಿತವಾಗಿಯೇ ಕುಡಿಯುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಉತ್ತಮ. ವಿದ್ಯುತ್ ಅವಲಂಬಿತ ಕೆಲಸಗಳಿದ್ದರೆ ಬೆಳಿಗ್ಗೆಯೇ ಪೂರ್ಣಗೊಳಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.
ಇಂದಿನ ದಿನ ಭವಿಷ್ಯ: 11-11-2026, ಬುಧವಾರ
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೇ ಲಾಭ; ಡಿಕೆ ಶಿವಕುಮಾರ್
Read the story
ರೈತರಿಗೆ 5,000 ಬರ ಪರಿಹಾರ ಖಚಿತ; ಡಿಕೆ ಶಿವಕುಮಾರ್
Read the story
ಒಂದೇ ಮನೆಯಲ್ಲಿ ಎರಡು ಗ್ಯಾಸ್ ಕನೆಕ್ಷನ್; ಕೇಂದ್ರ ಹೊಸ ರೂಲ್ಸ್
Read the story





