ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಕೆರೆಗೆ ಉರುಳಿ ಇಬ್ಬರು ಸಾವು
ಮಹದೇಶ್ವರಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ತಡರಾತ್ರಿ ಕಾರು ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ, ಘಟನೆಯಲ್ಲಿ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ
ಮೈಸೂರು (Mysuru): ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ (Male Mahadeshwara Hills) ತೆರಳುತ್ತಿದ್ದ ಕಾರೊಂದು ಕೊಳ್ಳೇಗಾಲ ತಾಲೂಕಿನ ಬಳಿ ಕೆರೆಗೆ (Lake) ಉರುಳಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಮೈಸೂರಿನಲ್ಲಿ ಟೆಲಿಕಾಲರ್ ಆಗಿ ಕೆಲಸ ಮಾಡುತ್ತಿದ್ದ ಶುಭಾ ಹಾಗೂ ಕಾರು ಚಾಲಕ ಉರ್ಜಿತ್ ಮೃತಪಟ್ಟವರು. ಶುಭಾ ಅವರು ರೆಸ್ಟೋರೆಂಟ್ ಉದ್ಯೋಗಿ ಮಣಿತ್ ಅವರೊಂದಿಗೆ ಮಹದೇಶ್ವರಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ತಡರಾತ್ರಿ ಕಾರು ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ.
ಮಣಿತ್ ಹೇಗೋ ಹೊರಗೆ ಬಂದು, ಕಾರಿನ ಬಾನೆಟ್ ಮೇಲೆ ನಿಂತು ಕೂಗಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಅವರು ಬಂದು ಮಣಿತ್‌ನನ್ನು ರಕ್ಷಿಸಿದರು. ಕಾರಿನಲ್ಲಿ ಉಸಿರುಗಟ್ಟಿ ಶುಭಾ ಮತ್ತು ಊರ್ಜಿತ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Mysuru Tragedy: Two Dead After Car Plunges into Lake Near Kollegala