ಗೃಹಲಕ್ಷ್ಮಿ ಯೋಜನೆ ಮೆಸೇಜ್ ಬಂದಿಲ್ಲ ಎಂದು ಆತಂಕ ಬೇಡ, ಇಲ್ಲಿದೆ ಯೋಜನೆಯ ಹೊಸ ಲಿಂಕ್!

Story Highlights

ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಮೆಸೇಜ್ ಬಂದಿಲ್ಲ ಎಂದರೆ, ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಇದೀಗ ಹೊಸ ಲಿಂಕ್ ಒಂದು ಬಂದಿದ್ದು, ನಿಮ್ಮ ಎಲ್ಲಾ ಸಮಸ್ಯೆಗೆ ಅದು ಪರಿಹಾರ ಆಗಿದೆ.

ನಮ್ಮ ರಾಜ್ಯದ ಮಹಿಳಾ ಮಣಿಯರಿಗಾಗಿ ತಂದಿರುವ ಹೊಸ ಯೋಜನೆ ಗೃಹಲಕ್ಷ್ಮಿ ಯೋಜನೆ (Gruhalakshmi Yojane) ಆಗಿದೆ. ಈ ಯೋಜನೆಯು ಮನೆಯ ಯಜಮಾನಿಗೆ ಸಹಾಯ ಮಾಡುತ್ತದೆ. ಮನೆಯನ್ನು ನಡೆಸುವ ಮಹಿಳೆಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ 2000 ಸಿಗಲಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ (Gruhalakshmi Application) ಸಲ್ಲಿಸುವ ವಿಷಯದಲ್ಲಿ ಮತ್ತು ನಿಯಮಗಳ ವಿಷಯಗಳಲ್ಲಿ ಕೆಲವು ಗೊಂದಲಗಳು ಜನರಲ್ಲಿದ್ದವು.

ಹಾಗೆಯೇ ಈ ಯೋಜನೆ ಜಾರಿಯಾಗುವುದಕ್ಕೂ ಸಮಯ ತೆಗೆದುಕೊಂಡಿತು.. ಈಗ ಕೊನೆಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ್ ಪ್ರಕ್ರಿಯೆ ಶುರುವಾಗಿದೆ. ಸಾಕಷ್ಟು ಮಹಿಳೆಯರು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಹಲವರಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಸರ್ವರ್ ಪ್ರಾಬ್ಲಮ್ ಇಂದಾಗಿ ಅರ್ಜಿ ಸಲ್ಲಿಕೆ ಆಗಿರಲಿಲ್ಲ.

ಹಲವರಿಗೆ ಇದೇ ತೊಂದರೆಯಿಂದ ಗೃಹಲಕ್ಷ್ಮಿ ಮೆಸೇಜ್ ಕೂಡ ಬಂದಿರಲಿಲ್ಲ. ಅವರಿಗೆಲ್ಲಾ ಮೆಸೇಜ್ ಬಂದಿಲ್ಲ ಎಂದು ಆತಂಕ ಶುರುವಾಗಿತ್ತು. ಒಂದು ವೇಳೆ ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಮೆಸೇಜ್ ಬಂದಿಲ್ಲ ಎಂದರೆ, ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಇದೀಗ ಹೊಸ ಲಿಂಕ್ ಒಂದು ಬಂದಿದ್ದು, ನಿಮ್ಮ ಎಲ್ಲಾ ಸಮಸ್ಯೆಗೆ ಅದು ಪರಿಹಾರ ಆಗಿದೆ.

ಗೃಹಲಕ್ಷ್ಮೀ ಯೋಜನೆ ಮೆಸೇಜ್ ಬಂದಿಲ್ಲದ ಸಮಸ್ಯೆ ಪರಿಹರಿಸಲು ಮೊದಲು ಈ http://sevasindhugs.karnataka.gov.in/ ಲಿಂಕ್ ಕ್ಲಿಕ್ ಮಾಡಿ. ಹೋಮ್ ಪೇಜ್ ನಲ್ಲಿ ಒಂದಷ್ಟು ಆಯ್ಕೆಗಳು ಬರುತ್ತದೆ. ಅದರಲ್ಲಿ ಗೃಹಲಕ್ಷ್ಮಿ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಈಗ ನಿಮ್ಮ ಎದುರು ಗೃಹಲಕ್ಷ್ಮಿ ಯೋಜನೆ ಅರ್ಜಿ ನೋಂದಣಿ ಪ್ರಕ್ರಿಯೆ ಶುರುವಾಗಿದೆ ಎಂದು ಬರುತ್ತದೆ.

ಅದರ ಕೆಳಗೆ ಸೇವಾಸಿಂಧು ಲಿಂಕ್ ಬರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ಈ ಲಿಂಕ್ ಓಪನ್ ಮಾಡಿದ ಮೇಲೆ, ಇಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ, ಇಲ್ಲಿ ಒಂದು ಕೇಸರಿ ಬಣ್ಣದ ಲೈನ್ ಬರುತ್ತದೆ, ಅದನ್ನು ಉದ್ದ ಇರುವ ಹಸಿರು ಬಣ್ಣದ ಲೈನ್ ಗೆ ಸೇರಿಸಿ. ಈಗ Fetch RC deatails ಮೇಲೆ ಕ್ಲಿಕ್ ಮಾಡಿ. ಈಗ ನೀವು ಅರ್ಜಿ ಸಲ್ಲಿಸಬೇಕಾದ ಸಮಯ ಮತ್ತು ದಿನಾಂಕವನ್ನು ತೋರಿಸುತ್ತದೆ.

ಇದು ಒಂದು ರೀತಿಯಾದರೆ, ಮತ್ತೊಂದು ರೀತಿ ಕೂಡ ಇದೆ. ಇನ್ನೊಂದು ಲಿಂಕ್ ಲಭ್ಯವಿದ್ದು, ಆ ಲಿಂಕ್ ಮೂಲಕ ಕೂಡ ನೀವು ಚೆಕ್ ಮಾಡಬಹುದು, ಇದು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು ಮತ್ತೊಂದು ಲಿಂಕ್ ಆಗಿದೆ. https://sevasindhugs1.karnataka.gov.in/gl-stat-sp/Slot_Track

New link for gruha lakshmi yojane message

ಈ ಲಿಂಕ್ ಓಪನ್ ಮಾಡ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ, ಅಲ್ಲಿ ಬರುವ ಕ್ಯಾಪ್ಚ ಎಂಟರ್ ಮಾಡುವ ಮೂಲಕ ಚೆಕ್ ಮಾಡಬಹುದು. ಈಗ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನೀವು ಆರ್ಜಿ ಸಲ್ಲಿಸಬೇಕಾದ ಸಮಯ ಮತ್ತು ದಿನಾಂಕ ತೋರಿಸುತ್ತದೆ, ಆ ಮಾಹಿತಿಯ ಅನುಸಾರ ನೀವು ಅರ್ಜಿ ಸಲ್ಲಿಸಬೇಕು.

ನೀವು ರಿಜಿಸ್ಟರ್ ಮಾಡುವುದಕ್ಕೆ ಮತ್ತೊಂದು ವಿಧಾನ ಇದೆ, 8147500500 ಈ ನಂಬರ್ ಗೆ ನಿಮ್ಮ ರೇಷನ್ ಕಾರ್ಡ್ ಐಡಿ ನಂಬರ್ ಅನ್ನ ಎಸ್.ಎಂ.ಎಸ್ ಅಥವಾ ವಾಟ್ಸಾಪ್ ಮಾಡಿ. ಈಗ ನಿಮ್ಮ ಮೊಬೈಲ್ ಗೆ ನೀವು ಎಸ್.ಎಂ.ಎಸ್ ಮೂಲಕ ಅರ್ಜಿ ಸಲ್ಲಿಸಬೇಕಾದಸ್ಥಳ ಮತ್ತು ದಿನಾಂಕದ ಮಾಹಿತಿ ಸಿಗುತ್ತದೆ. ನಿಮಗೆ ಈ ಮೆಸೇಜ್ ಬಂದ ನಂತರ https://bsk.karnataka.gov.in/BSK/csLogin/loginPage ಈ ಲಿಂಕ್ ನಲ್ಲಿ ರಿಜಿಸ್ಟ್ರೇಶನ್ ಮಾಡಿ, ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು.

New link for gruha lakshmi yojane message

Related Stories