ಕರ್ನಾಟಕದಲ್ಲಿ ಪಡಿತರ ಚೀಟಿ ತಿದ್ದುಪಡಿ ಅವಕಾಶ: ಅಗತ್ಯ ದಾಖಲೆಗಳ ವಿವರ ಇಲ್ಲಿದೆ
ಪಡಿತರ ಚೀಟಿಯಲ್ಲಿ ತಪ್ಪುಗಳಿದ್ದರೆ ಈಗ ತಿದ್ದುಪಡಿ ಮಾಡಿಸಬಹುದು. ಹೆಸರು, ವಿಳಾಸ, ಸದಸ್ಯರ ಸೇರ್ಪಡೆ ಸೇರಿದಂತೆ ಹಲವು ಬದಲಾವಣೆಗಳಿಗೆ ಅವಕಾಶ ನೀಡಲಾಗಿದ್ದು, ಅಗತ್ಯ ದಾಖಲೆಗಳ ವಿವರ ಇಲ್ಲಿದೆ.
- ಪಡಿತರ ಚೀಟಿ ತಿದ್ದುಪಡಿ: ಹೆಸರು, ವಿಳಾಸ, ಸದಸ್ಯರ ಬದಲಾವಣೆ ಸಾಧ್ಯ
- ಬಿಪಿಎಲ್–ಎಪಿಎಲ್ ಪರಿಶೀಲನೆ: ಅರ್ಹರಿಗೆ ಪುನಃ ಅವಕಾಶ
- ಅರ್ಜಿ ಸಲ್ಲಿಕೆ: ಬೆಂಗಳೂರು ಒನ್, ಗ್ರಾಮ ಒನ್, ಆನ್‌ಲೈನ್ ಮೂಲಕ
ಬೆಂಗಳೂರು (Bengaluru): ಸರ್ಕಾರಿ ಸೌಲಭ್ಯಗಳ ಲಾಭ ಪಡೆಯಲು ಪಡಿತರ ಚೀಟಿ ಅತ್ಯಗತ್ಯ ದಾಖಲೆ. ರೇಷನ್ ಮಾತ್ರವಲ್ಲದೆ ಹಲವು ಯೋಜನೆಗಳಿಗೆ ಅರ್ಜಿ ಹಾಕುವಾಗ ಪಡಿತರ ಚೀಟಿಯ ವಿವರಗಳು ಸರಿಯಾಗಿರಬೇಕು. ಈ ಹಿನ್ನೆಲೆಯಲ್ಲಿ ಕಾರ್ಡ್‌ನಲ್ಲಿ ಇರುವ ತಪ್ಪುಗಳನ್ನು (Ration Card Correction) ಸರಿಪಡಿಸಿಕೊಳ್ಳಲು ಇದೀಗ ಸರ್ಕಾರ ಅವಕಾಶ ನೀಡಿದೆ.
ಇತ್ತೀಚೆಗೆ ನಕಲಿ ದಾಖಲೆಗಳ ಮೂಲಕ ಪಡೆದ ಬಿಪಿಎಲ್ ಕಾರ್ಡ್‌ಗಳನ್ನು (BPL Card) ರದ್ದುಪಡಿಸಿ ಎಪಿಎಲ್‌ಗೆ ವರ್ಗಾಯಿಸುವ ಪ್ರಕ್ರಿಯೆ ಮುಂದುವರಿದಿದೆ. ಈ ನಡುವೆ ಅರ್ಹರ ಕಾರ್ಡ್‌ಗಳು ರದ್ದಾದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟನೆ ನೀಡಿ, ಅರ್ಹರಿಗೆ ಮರುಪರಿಶೀಲನೆ ಅವಕಾಶ ಕಲ್ಪಿಸಿದೆ. ಇದೀಗ ಅದಕ್ಕೆ ಪೂರಕವಾಗಿ ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆ ಆರಂಭವಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಬಿಡುಗಡೆ ಬಗ್ಗೆ ಗುಡ್ ನ್ಯೂಸ್: ಮುಂದಿನ ಕಂತು ಜಮೆ ದಿನಾಂಕ ಬಹಿರಂಗ
ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?
ಬೆಂಗಳೂರು ನಿವಾಸಿಗಳು ಬೆಂಗಳೂರು ಒನ್ ಕೇಂದ್ರಗಳಲ್ಲಿ, ಗ್ರಾಮೀಣ ಪ್ರದೇಶದವರು ಗ್ರಾಮ ಒನ್ ಅಥವಾ ಮಾನ್ಯತೆ ಪಡೆದ ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕವೂ ಸೇವೆ ಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಬಹುದು.
ಯಾವ ಯಾವ ತಿದ್ದುಪಡಿ ಮಾಡಿಸಬಹುದು?
- ಹೆಸರು ತಿದ್ದುಪಡಿ ಅಥವಾ ಸೇರ್ಪಡೆ
- ಕುಟುಂಬದ ಸದಸ್ಯರ ಹೆಸರು ತೆಗೆದುಹಾಕುವಿಕೆ
- ವಿಳಾಸ ಬದಲಾವಣೆ
- ಕುಟುಂಬದ ಮುಖ್ಯಸ್ಥರ ಬದಲಾವಣೆ
- ನ್ಯಾಯಬೆಲೆ ಅಂಗಡಿ ಬದಲಾವಣೆ
- ಫೋಟೋ ಬದಲಾವಣೆ
ಇದನ್ನೂ ಓದಿ: ಕರ್ನಾಟಕ ಹವಾಮಾನ ಇಲಾಖೆ ಎಚ್ಚರಿಕೆ: ಮುಂದಿನ ಎರಡು ದಿನಗಳ ಕಾಲ ಚಳಿ ಇನ್ನಷ್ಟು ಹೆಚ್ಚಳ
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು
- ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- 6 ವರ್ಷ ಮೇಲ್ಪಟ್ಟವರಿಗೆ ಜಾತಿ ಹಾಗೂ ಆದಾಯ ಪ್ರಮಾಣಪತ್ರ
- 6 ವರ್ಷ ಒಳಗಿನ ಮಕ್ಕಳಿಗೆ ಜನನ ಪ್ರಮಾಣಪತ್ರ
ಪತ್ನಿ ಹೆಸರು ಸೇರ್ಪಡೆಗೆ:
- ಆಧಾರ್ ಕಾರ್ಡ್
- ಮದುವೆ ಪ್ರಮಾಣಪತ್ರ
- ಪೋಷಕರ ಪಡಿತರ ಚೀಟಿ
ಮಗುವಿನ ಹೆಸರು ಸೇರ್ಪಡೆಗೆ:
- ಮಗುವಿನ ಜನನ ಪ್ರಮಾಣಪತ್ರ
- ಪೋಷಕರ ಆಧಾರ್ ಕಾರ್ಡ್
ಆನ್‌ಲೈನ್ ಅರ್ಜಿ ವಿಧಾನ
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ‘ಇ-ಸೇವೆಗಳು’ ಆಯ್ಕೆಮಾಡಿ
- ತಿದ್ದುಪಡಿ/ಹೊಸ ಸೇರ್ಪಡೆ ವಿನಂತಿ ಕ್ಲಿಕ್ ಮಾಡಿ
- ಅಗತ್ಯ ಮಾಹಿತಿ ಭರ್ತಿ ಮಾಡಿ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ
- ಫಾರ್ಮ್ ಸಲ್ಲಿಸಿದ ಬಳಿಕ ಪರಿಶೀಲನೆ ಪೂರ್ಣಗೊಂಡರೆ, ಅಪ್‌ಡೇಟ್ ಆದ ಪಡಿತರ ಚೀಟಿ ಮನೆಗೆ ತಲುಪಲಿದೆ
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ಮಳೆ ಜೊತೆ ಮೈ ನಡುಗಿಸುವ ಚಳಿ! ಬೆಂಗಳೂರು ಸೇರಿ 2 ದಿನಗಳ ಕರ್ನಾಟಕ ಹವಾಮಾನ ಮುನ್ಸೂಚನೆ ಹೀಗಿದೆ
Read the story
ಇನ್ನು ಮೂರೇ ದಿನ ಗಡುವು! ನವೆಂಬರ್ 1ರಿಂದ ಗ್ಯಾಸ್ ಸಿಲಿಂಡರ್ ಹೊಸ ನಿಯಮ
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story




