Ration Card: ಕರ್ನಾಟಕ ಪಡಿತರ ಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ, ಬೇಕಾಗುವ ದಾಖಲೆಗಳು ಇಲ್ಲಿವೆ

ಕರ್ನಾಟಕ ರಾಜ್ಯದಲ್ಲಿ ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆ ಮತ್ತೆ ಆರಂಭವಾಗಿದ್ದು, ಹೆಸರು, ವಿಳಾಸ, ಕುಟುಂಬ ಸದಸ್ಯರ ಸೇರ್ಪಡೆ ಸೇರಿದಂತೆ ಹಲವು ಬದಲಾವಣೆಗಳಿಗೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ.

  • ಕರ್ನಾಟಕ ರೇಷನ್ ಕಾರ್ಡ್ ತಿದ್ದುಪಡಿ, ಬದಲಾವಣೆಗಳಿಗೆ ಅವಕಾಶ
  • ಬೆಂಗಳೂರು ಒನ್, ಗ್ರಾಮ ಒನ್‌ನಲ್ಲಿ ಪಡಿತರ ಚೀಟಿ ತಿದ್ದುಪಡಿ ಸೇವೆ
  • ಪಡಿತರ ಚೀಟಿ ತಿದ್ದುಪಡಿಗೆ ಅಗತ್ಯ ದಾಖಲೆಗಳ ವಿವರ

ಬೆಂಗಳೂರು (Bengaluru): ಪಡಿತರ ಚೀಟಿ (Ration Card) ಸಾಮಾನ್ಯ ದಾಖಲೆ ಮಾತ್ರವಲ್ಲ, ಹಲವು ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳಿಗೆ ಮುಖ್ಯ ಆಧಾರವಾಗಿದೆ. ಪಡಿತರ ವಿತರಣೆ ಜೊತೆಗೆ, ವಿವಿಧ ಸರ್ಕಾರಿ ಅರ್ಜಿಗಳಲ್ಲಿ ಇದನ್ನು ಕಡ್ಡಾಯವಾಗಿ ಕೇಳಲಾಗುತ್ತದೆ.

ಈ ಚೀಟಿಯಲ್ಲಿ ಹೆಸರು, ವಿಳಾಸ ಅಥವಾ ಕುಟುಂಬ ಸದಸ್ಯರ ವಿವರಗಳಲ್ಲಿ ಯಾವುದೇ ತಪ್ಪಿದ್ದರೆ, ಅನೇಕ ಸೇವೆಗಳು ಕೈ ತಪ್ಪುವ ಸಾಧ್ಯತೆ ಇರುತ್ತದೆ.

ಇಂತಹ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳಿಗೆ ಇದೀಗ ನಿರಾಳ ಸುದ್ದಿ ಬಂದಿದೆ. ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ಪಡಿತರ ಚೀಟಿ ತಿದ್ದುಪಡಿ (Ration Card Correction) ಪ್ರಕ್ರಿಯೆಯನ್ನು ಸರ್ಕಾರ (Karnataka Govt) ಮತ್ತೆ ಆರಂಭಿಸಿದೆ. ಈ ಮೂಲಕ ಅರ್ಹ ಫಲಾನುಭವಿಗಳು ತಮ್ಮ ಪಡಿತರ ಚೀಟಿಯಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ದೊರಕಿದೆ.

ಇದನ್ನೂ ಓದಿ: ಕರ್ನಾಟಕ ರಾಜ್ಯದಲ್ಲಿ 5 ದಿನ ತೀವ್ರ ಚಳಿ, ಬೆಂಗಳೂರು ಸೇರಿ ಕೆಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಎಲ್ಲಿ ಅರ್ಜಿ ಸಲ್ಲಿಸಬಹುದು?

ರೇಷನ್ ಕಾರ್ಡ್ ತಿದ್ದುಪಡಿಗೆ ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳು ಹಾಗೂ ಮಾನ್ಯತೆ ಪಡೆದ ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸುವ ವ್ಯವಸ್ಥೆ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್ https://ahara.kar.nic.in ಗೆ ಭೇಟಿ ನೀಡಬಹುದು.

ಯಾವ ಯಾವ ತಿದ್ದುಪಡಿಗೆ ಅವಕಾಶ ಇದೆ?

  1. ಹೆಸರು ತಿದ್ದುಪಡಿ
  2. ಕುಟುಂಬ ಸದಸ್ಯರ ಹೆಸರು ಸೇರ್ಪಡೆ
  3. ಸದಸ್ಯರ ಹೆಸರು ತೆಗೆದುಹಾಕುವಿಕೆ
  4. ವಿಳಾಸ ಬದಲಾವಣೆ
  5. ಕುಟುಂಬ ಮುಖ್ಯಸ್ಥರ ಬದಲಾವಣೆ
  6. ನ್ಯಾಯಬೆಲೆ ಅಂಗಡಿ ಬದಲಾವಣೆ
  7. ಫೋಟೋ ನವೀಕರಣ

ಇದನ್ನೂ ಓದಿ: ಬೆಂಗಳೂರು, ಮೈಸೂರು, ತುಮಕೂರು ಸೇರಿ ಕರ್ನಾಟಕ ರಾಜ್ಯದ ಪೆಟ್ರೋಲ್–ಡೀಸೆಲ್ ದರಗಳು

ತಿದ್ದುಪಡಿಗೆ ಬೇಕಾಗುವ ದಾಖಲೆಗಳು

  1. ಹಳೆಯ ಪಡಿತರ ಚೀಟಿ
  2. ಎಲ್ಲಾ ಸದಸ್ಯರ ಆಧಾರ್ ಕಾರ್ಡ್
  3. ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
  4. 6 ವರ್ಷ ಮೇಲ್ಪಟ್ಟ ಸದಸ್ಯರಿಗೆ ಜಾತಿ–ಆದಾಯ ಪ್ರಮಾಣ ಪತ್ರ
  5. 6 ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ

ಪತ್ನಿ ಹೆಸರು ಸೇರಿಸಲು ಬೇಕಾದ ದಾಖಲೆಗಳು

  1. ಆಧಾರ್ ಕಾರ್ಡ್
  2. ಮದುವೆ ಪ್ರಮಾಣ ಪತ್ರ
  3. ಪೋಷಕರ ಪಡಿತರ ಚೀಟಿ

ಮಗುವಿನ ಹೆಸರು ಸೇರಿಸಲು ಬೇಕಾದ ದಾಖಲೆಗಳು

  1. ಮಗುವಿನ ಜನನ ಪ್ರಮಾಣ ಪತ್ರ
  2. ಪೋಷಕರ ಆಧಾರ್ ಕಾರ್ಡ್

ಆನ್‌ಲೈನ್ ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಇ-ಸೇವೆಗಳ ವಿಭಾಗವನ್ನು ಆಯ್ಕೆಮಾಡಬೇಕು. ತಿದ್ದುಪಡಿ ಅಥವಾ ಹೊಸ ಸೇರ್ಪಡೆ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು. ಎಲ್ಲಾ ವಿವರಗಳು ಸರಿಯಾಗಿದ್ದರೆ, ನವೀಕರಿಸಿದ ಪಡಿತರ ಚೀಟಿ ಮನೆಗೆ ತಲುಪಲಿದೆ.

TRENDING ARTICLES1 / 8

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories