ಬಿಗ್ ನ್ಯೂಸ್, ರೇಷನ್ ಕಾರ್ಡ್ ಇ-ಕೆವೈಸಿ ಗಡುವು ವಿಸ್ತರಣೆ: ನವೆಂಬರ್ 10ರವರೆಗೆ ಅವಕಾಶ
ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಸರ್ಕಾರ ಮತ್ತಷ್ಟು ಕಾಲಾವಕಾಶ ನೀಡಿದೆ. ಅಕ್ಟೋಬರ್ 20ರ ಬದಲು ನವೆಂಬರ್ 10 ಕೊನೆಯ ದಿನವಾಗಿದ್ದು, ಅನ್ನ ಸೇವೆ ಆ್ಯಪ್ ಅಥವಾ ನ್ಯಾಯಬೆಲೆ ಅಂಗಡಿಯಲ್ಲಿ ದೃಢೀಕರಣ ಮಾಡಿಸಬಹುದು.

ಬೆಂಗಳೂರು (Bengaluru): ಕರ್ನಾಟಕ ರಾಜ್ಯದ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಪಡಿತರ ಚೀಟಿಯ ಇ-ಕೆವೈಸಿ (Ration Card e-KYC) ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ನವೆಂಬರ್ 10ರವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ಅಕ್ಟೋಬರ್ 20 ಕೊನೆಯ ದಿನವಾಗಿತ್ತು ಎಂದು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ.
ಒಂದು ವರ್ಷಕ್ಕಿಂತ ಹಿಂದೆ ಇ-ಕೆವೈಸಿ ಮಾಡಿಸಿಕೊಂಡಿದ್ದ ಫಲಾನುಭವಿಗಳು ಮತ್ತೊಮ್ಮೆ ದೃಢೀಕರಣ ಮಾಡಿಸಬೇಕೆಂದು ಇಲಾಖೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ (Karnataka) ಒಟ್ಟು 1,15,87,298 ಫಲಾನುಭವಿಗಳಿಗೆ ಮರು ಇ-ಕೆವೈಸಿ ಮಾಡುವ ಅಗತ್ಯವಿದೆ. ನಿಗದಿತ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆ: 16 ಲಕ್ಷ ಫಲಾನುಭವಿಗಳಿಗೆ ಫ್ರೀ ಕರೆಂಟ್ ಸೌಲಭ್ಯ ಕಟ್! ಇಲ್ಲಿದೆ ಕಾರಣ
ಇದಲ್ಲದೆ, ಈವರೆಗೆ ಒಮ್ಮೆಯೂ ಇ-ಕೆವೈಸಿ ಮಾಡಿಸದ 82,362 ಫಲಾನುಭವಿಗಳು ಹಾಗೂ ಐದು ವರ್ಷಕ್ಕಿಂತ ಹಿಂದೆ ಇ-ಕೆವೈಸಿ ಮಾಡಿಸಿಕೊಂಡಿರುವ 54,27,396 ಫಲಾನುಭವಿಗಳು ಕೂಡ ಇನ್ನೂ ದೃಢೀಕರಣ ಮಾಡಿಸಬೇಕಿದೆ. ಈ ಎಲ್ಲರೂ ನವೆಂಬರ್ 10ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಇಲಾಖೆ ಸೂಚಿಸಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ವ್ಯವಸ್ಥಿತ ಸಂಚು; ಯಡಿಯೂರಪ್ಪ ಗಂಭೀರ ಆರೋಪ
ಇ-ಕೆವೈಸಿ ಮಾಡಿಸಲು ಫಲಾನುಭವಿಗಳು ಎರಡು ಮಾರ್ಗಗಳನ್ನು ಬಳಸಬಹುದು. ತಮ್ಮ ಮೊಬೈಲ್‌ನಲ್ಲಿ ಲಭ್ಯವಿರುವ ಅನ್ನ ಸೇವೆ ಆ್ಯಪ್ (Anna Seve App) ಮೂಲಕ ಸ್ವತಃ ದೃಢೀಕರಣ ಮಾಡಿಸಬಹುದು. ಇಲ್ಲವೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಆಹಾರ ಇಲಾಖೆಯ AHARA ತಂತ್ರಾಂಶ (AHARA Software) ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಹೊರರಾಜ್ಯಗಳಲ್ಲಿ ಉದ್ಯೋಗಕ್ಕಾಗಿ ನೆಲೆಸಿರುವ ಕರ್ನಾಟಕದ ಪಡಿತರ ಚೀಟಿದಾರರಿಗೂ (Karnataka Ration Card Holders) ಅನುಕೂಲವಾಗುವಂತೆ ಅನ್ನ ಸೇವೆ ಆ್ಯಪ್‌ನ ಲಭ್ಯತೆಯನ್ನು ದೇಶಾದ್ಯಂತ ವಿಸ್ತರಿಸಲಾಗಿದೆ.
ಹೀಗಾಗಿ ಬೇರೆ ರಾಜ್ಯಗಳಲ್ಲಿರುವ ಫಲಾನುಭವಿಗಳು ತಾವು ವಾಸಿಸುವ ಸ್ಥಳದಿಂದಲೇ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಇ-ಕೆವೈಸಿ ಪೂರ್ಣಗೊಳಿಸಬಹುದು ಎಂದು ಇಲಾಖೆ ಮನವಿ ಮಾಡಿದೆ.
ಇದನ್ನೂ ಓದಿ: ಇನ್ಮುಂದೆ ಎಲ್ಲಾ ಶಾಲೆಗಳಲ್ಲೂ ಕನ್ನಡ ರಾಜ್ಯೋತ್ಸವ ಕಡ್ಡಾಯ; ಕರ್ನಾಟಕ ಸರ್ಕಾರ ಆದೇಶ
ಈಗಾಗಲೇ ಮೊಬೈಲ್‌ನಲ್ಲಿ ಅನ್ನ ಸೇವೆ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡಿರುವವರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ (Google Play Store) ಲಭ್ಯವಿರುವ ಹೊಸ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳಬಹುದು. ನಿಗದಿತ ಗಡುವಿನೊಳಗೆ ಇ-ಕೆವೈಸಿ ಮಾಡಿಸದಿದ್ದರೆ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಆದ್ದರಿಂದ ಇನ್ನು ದೃಢೀಕರಣ ಮಾಡಿಸದ ಪಡಿತರ ಚೀಟಿದಾರರು ಕೊನೆಯ ದಿನದವರೆಗೆ ಕಾಯದೆ ಆದಷ್ಟು ಬೇಗ ಇ-ಕೆವೈಸಿ ಪೂರ್ಣಗೊಳಿಸುವುದು ಉತ್ತಮ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.





