ಈ ರೀತಿ ಮಾಡುವ ಮೂಲಕ ರೇಷನ್ ನಲ್ಲಿ ಮನೆಯ ಯಜಮಾನರ ಹೆಸರನ್ನು ಸುಲಭವಾಗಿ ಬದಲಾಯಿಸಿ.

ನಿಮ್ಮ ರೇಷನ್ ಕಾರ್ಡ್ ನಲ್ಲಿ ಗಂಡನ ಹೆಸರು ಯಜಮಾನ ಎಂದು ಇದ್ದರೆ, ಅದನ್ನು ನೀವು ಬದಲಾಯಿಸಬೇಕು.

ಕಾಂಗ್ರೆಸ್ ಸರ್ಕಾರ (Congress Government) ಕೊಡುತ್ತಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ (Gruhalakshmi Yojane) ಮತ್ತು ಅನ್ನ ಭಾಗ್ಯ ಯೋಜನೆ (Anna Bhagya Yojane) ಮುಖ್ಯವಾದ ಯೋಜನೆ ಆಗಿದೆ. ಈ ಎರಡು ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ಶುರುವಾಗಿದೆ. ಆದರೆ ಈ ಸೌಲಭ್ಯ ಪಡೆಯಲು ಕೆಲವು ಷರತ್ತುಗಳು ಕೂಡ ಇದೆ. ಬಹಳಷ್ಟು ದಿನಗಳ ಕಾಲ ಎಲ್ಲಾ ರೀತಿಯಲ್ಲಿ ಪರಿಶೀಲನೆ ಮಾಡಿದ ನಂತರ.

ಎರಡು ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯ ಯಜಮಾನಿ ಆಗಿರುವ ಮಹಿಳೆಯ ಬ್ಯಾಂಕ್ ಖಾತೆಗೆ ತಿಂಗಳಿಗೆ ₹2000 ಹಣ ಸಿಗಲಿದೆ. ಇನ್ನು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ (BPL Card) ಮತ್ತು  ಅಂತ್ಯೋದಯ ಕಾರ್ಡ್ (Anthyodaya Card) ಇರುವವರಿಗೆ ಉಚಿತವಾಗಿ ಅಕ್ಕಿ ಮತ್ತು ಇನ್ನಿತರ ವಸ್ತುಗಳನ್ನು ಕೊಡಲಾಗುತ್ತದೆ.

ಈ ಯೋಜನೆಯ ಸೌಲಭ್ಯಗಳು ನಿಮಗೆ ಸಿಗಬೇಕು ಎಂದರೆ, ಮನೆಯ ಮಹಿಳೆಗೆ ಯಜಮಾನಿಯ ಸ್ಥಾನ ಇರಬೇಕು.  ಆಗ ಮಾತ್ರ ನೀವು ಈ ಯೋಜನೆಯ ಫಲ ಪಡೆಯುತ್ತೀರಿ. ಇದಕ್ಕಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಮನೆಯ ಮಹಿಳೆ ಯಜಮಾನಿ ಎಂದು ಇರಬೇಕು. ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಮನೆಯ ಗಂಡಸರು ಯಜಮಾನ ಎಂದು ಇದ್ದರೆ, ನಿಮಗೆ ಈ ಯಾವುದೇ ಸೌಲಭ್ಯ ಸಿಗುವುದಿಲ್ಲ.

ಈ ರೀತಿ ಮಾಡುವ ಮೂಲಕ ರೇಷನ್ ನಲ್ಲಿ ಮನೆಯ ಯಜಮಾನರ ಹೆಸರನ್ನು ಸುಲಭವಾಗಿ ಬದಲಾಯಿಸಿ. - Kannada News

ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಗಂಡನ ಹೆಸರು ಯಜಮಾನ ಎಂದು ಇದ್ದರೆ, ಅದನ್ನು ನೀವು ಬದಲಾಯಿಸಬೇಕು. ಈ ಬದಲಾವಣೆ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ರೇಷನ್ ಕಾರ್ಡ್ ನಲ್ಲಿ ಯಜಮಾನರ ಹೆಸರನ್ನು ಬದಲಾಯಿಸಲು ಮೊದಲಿಗೆ ನೀವು https://ahara.kar.nic.in/?utm_source=DH-MoreFromPub&utm_medium=DH-app&utm_campaign=DH ಈ ವೆಬ್ಸೈಟ್ ಗೆ ಭೇಟಿ ನೀಡಿ.

ಲಿಂಕ್ ಓಪನ್ ಮಾಡಿದ ತಕ್ಷಣ ಇ ಸೇವೆಗಳು ಆಯ್ಕೆಯನ್ನು ಸೆಲೆಕ್ಟ್ ಮಾಡಿ.  ಇಲ್ಲಿ ನಿಮಗೆ ತಿದ್ದುಪಡಿ/ಹೊಸ ಸೇರ್ಪಡೆಯ ಆಯ್ಕೆ ಸಿಗುತ್ತದೆ. ಇದನ್ನು ಸೆಲೆಕ್ಟ್ ಮಾಡಿದ ಬಳಿಕ ಹೊಸ ಪೇಜ್ ಓಪನ್ ಆಗುತ್ತದೆ. ಈಗ ಇಲ್ಲಿ ಎಲ್ಲಾ ಜಿಲ್ಲೆಗಳ ಲಿಸ್ಟ್ ಬರುತ್ತದೆ, ಇದರಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ಇಲ್ಲಿ ಹೊಸ ಸೇರ್ಪಡೆ ಮತ್ತು ತಿದ್ದುಪಡಿ ಫಾರ್ಮ್ ಸೆಲೆಕ್ಟ್ ಮಾಡಿ.

ಇಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ನಮೂದಿಸಿ. ಹಾಗೆಯೇ ತಿದ್ದುಪಡಿಗೆ ಬೇಕಾಗುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ನಂತರ ಅಪ್ಲೋಡ್ ಮಾಡಿ. ಈಗ ಫಾರ್ಮ್ ಸಬ್ಮಿಟ್ ಮಾಡಿ. ಈಗ ನಿಮಗೆ ಅಪ್ಲಿಕೇಶನ್ ನಂಬರ್ ಸಿಗುತ್ತದೆ, ಅದನ್ನು ನೋಟ್ ಮಾಡಿಟ್ಟುಕೊಳ್ಳಿ, ಈ ನಂಬರ್ ಮೂಲಕ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಬಹುದು.

Ration card ownership change online

ಒಂದು ವೇಳೆ ಮನೆಯ ಯಜಮಾನರು ವಿಧಿವಶರಾಗಿದ್ದರೆ. ಮರಣ ಪ್ರಮಾಣಪತ್ರ, ರೇಷನ್ ಕಾರ್ಡ್ (Ration card), ಅರ್ಜಿ ಹಾಕುವವರ ಆಧಾರ್ ಕಾರ್ಡ್ (Aadhar Card), ಐಡೆಂಟಿಟಿ ಪ್ರೂಫ್ ಮತ್ತು ಇನ್ನಿತರ ದಾಖಲೆಗಳು ಬೇಕಾಗುತ್ತದೆ. ಆನ್ಲೈನ್ ಅರ್ಜಿ (Online Application) ಹಾಕಲು ಆಗದೆ ಹೋದರೆ, ರೇಷನ್ ಕಾರ್ಡ್ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು.

Ration card ownership change online

Follow us On

FaceBook Google News

Ration card ownership change online