Ration Card: ಕರ್ನಾಟಕ ರೇಷನ್ ಕಾರ್ಡ್‌ದಾರರಿಗೆ ಭರ್ಜರಿ ಸುದ್ದಿ! ಇನ್ಮುಂದೆ ಮನೆ ಬಾಗಿಲಿಗೆ ಅಕ್ಕಿ ಪೂರೈಕೆ
75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ರಾಜ್ಯ ಸರ್ಕಾರ ಹೊಸ ‘ಅನ್ನ ಸುವಿಧಾ’ ಯೋಜನೆ ಜಾರಿ ಮಾಡಿದೆ. ಇನ್ಮೇಲೆ ರೇಷನ್ ಅಂಗಡಿಗೆ ಹೋಗದೇ ಮನೆ ಬಾಗಿಲಿಗೇ ಅಕ್ಕಿ ಪೂರೈಕೆ ಸಾಧ್ಯ.

- ರೇಷನ್ ಕಾರ್ಡ್‌ದಾರರಿಗೆ ಮನೆ ಬಾಗಿಲಿಗೆ ಅಕ್ಕಿ ಪೂರೈಕೆ
- ಅನ್ನ ಸುವಿಧಾ ಯೋಜನೆ ಮೂಲಕ ಹಿರಿಯರಿಗೆ ದೊಡ್ಡ ಸೌಲಭ್ಯ
- 75 ವರ್ಷ ಮೇಲ್ಪಟ್ಟವರಿಗೆ ನ್ಯಾಯಬೆಲೆ ಅಂಗಡಿ ಓಡಾಟಕ್ಕೆ ಬ್ರೇಕ್
ಬೆಂಗಳೂರು (Bengaluru): ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲು, ಸರ್ವರ್ ಸಮಸ್ಯೆ, ದೀರ್ಘ ಕಾಲ ನಿಲ್ಲುವ ತೊಂದರೆ… ಇವೆಲ್ಲದಿಂದಾಗಿ ಹೆಚ್ಚು ಕಷ್ಟಪಡುವವರು ಹಿರಿಯ ನಾಗರಿಕರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ (Karnataka Govt) ಮಹತ್ವದ ಹೆಜ್ಜೆ ಇಟ್ಟಿದೆ.
ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಲಾಗುತ್ತಿದ್ದು, ಇದೀಗ ಅದರ ಉಪಕ್ರಮವಾಗಿ ‘ಅನ್ನ ಸುವಿಧಾ ಯೋಜನೆ’ ಜಾರಿಗೆ ಬಂದಿದೆ. ಈ ಯೋಜನೆಯ ಮೂಲಕ ಇನ್ಮೇಲೆ ಆಯ್ದ ಫಲಾನುಭವಿಗಳಿಗೆ ಪಡಿತರ ಆಹಾರ ಪದಾರ್ಥಗಳು ನೇರವಾಗಿ ಮನೆ ಬಾಗಿಲಿಗೆ ತಲುಪಲಿವೆ.
ಅನ್ನ ಸುವಿಧಾ ಯೋಜನೆ ಎಂದರೇನು?
ಒಂಟಿಯಾಗಿ ವಾಸಿಸುವ ಅಥವಾ ಆರೋಗ್ಯ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗೆ ಹೋಗಲು ಅಸಮರ್ಥರಾಗಿರುವ ಹಿರಿಯ ನಾಗರಿಕರಿಗಾಗಿ ಅನ್ನ ಸುವಿಧಾ ಯೋಜನೆ ರೂಪಿಸಲಾಗಿದೆ. ಅನ್ನಭಾಗ್ಯ ಯೋಜನೆಯ ಸೌಲಭ್ಯವೇ ಇದರಲ್ಲಿ ಮುಂದುವರಿಯುತ್ತದೆ, ಆದರೆ ಸೇವೆ ನೀಡುವ ವಿಧಾನದಲ್ಲಿ ದೊಡ್ಡ ಬದಲಾವಣೆ ತರಲಾಗಿದೆ.
ಯಾರು ಈ ಯೋಜನೆಗೆ ಅರ್ಹರು?
75 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರು ಮಾತ್ರ ಇರುವ ಕುಟುಂಬಗಳು ಈ ಯೋಜನೆಯ ಪ್ರಮುಖ ಫಲಾನುಭವಿಗಳು. ಇಂತಹ ಕುಟುಂಬಗಳಿಗೆ ಸ್ಥಳೀಯ ನ್ಯಾಯಬೆಲೆ ಅಂಗಡಿ ಮಾಲೀಕರೇ ನಿಗದಿತ ದಿನಗಳಲ್ಲಿ ಪಡಿತರವನ್ನು ಮನೆ ಬಾಗಿಲಿಗೆ ತಂದು ಒಪ್ಪಿಸಲಿದ್ದಾರೆ.
ಹಿರಿಯರಿಗೆ ದೊಡ್ಡ ರಿಲೀಫ್
ಈ ವ್ಯವಸ್ಥೆಯಿಂದ ನ್ಯಾಯಬೆಲೆ ಅಂಗಡಿಗೆ ಗಂಟೆಗಟ್ಟಲೆ ನಿಲ್ಲುವ ಅನಿವಾರ್ಯತೆ ತಪ್ಪಲಿದೆ. ವಿಶೇಷವಾಗಿ ಆರೋಗ್ಯ ಸಮಸ್ಯೆ ಇರುವವರು, ನಡೆಯಲು ತೊಂದರೆ ಇರುವವರು ಹಾಗೂ ಒಂಟಿ ಹಿರಿಯರಿಗೆ ಇದು ದೊಡ್ಡ ಸಹಾಯವಾಗಲಿದೆ.
ಯೋಜನೆ ಜಾರಿ ಮತ್ತು ಸರ್ಕಾರದ ವೆಚ್ಚ
2025ರ ಮೇ ತಿಂಗಳಲ್ಲಿ ಈ ಸೇವೆ ಆರಂಭವಾಗಿದ್ದು, ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಮನೆ ಬಾಗಿಲಿಗೆ ಪಡಿತರ ಪೂರೈಕೆ ಮಾಡುವ ಪ್ರತೀ ಕುಟುಂಬಕ್ಕೆ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸರ್ಕಾರದಿಂದ ₹50 ಪಾವತಿ ಮಾಡಲಾಗುತ್ತದೆ. ಈ ಯೋಜನೆಗೆ ಫಲಾನುಭವಿಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು.
ಮಂಡ್ಯ ಜಿಲ್ಲೆಯಲ್ಲಿ 75 ವರ್ಷ ಮೇಲ್ಪಟ್ಟ ಒಂಟಿ ಸದಸ್ಯರ ಕುಟುಂಬಗಳಿಗೆ ಶೀಘ್ರದಲ್ಲೇ ಮನೆ ಬಾಗಿಲಿಗೆ ಪಡಿತರ ಪೂರೈಕೆ ಆರಂಭವಾಗಲಿದೆ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸೇವೆ ಇನ್ನಷ್ಟು ಜಿಲ್ಲೆಗಳಿಗೆ ವಿಸ್ತರಿಸುವ ನಿರೀಕ್ಷೆ ಇದೆ.
ದಿನ ಭವಿಷ್ಯ 29-10-2026: ಮಹಾಲಕ್ಷ್ಮಿ ರಾಜಯೋಗ; 4 ರಾಶಿಗಳಿಗೆ ಶುಭ ಸೂಚನೆ! ಹಣಕಾಸು ಭವಿಷ್ಯ ಉಜ್ವಲ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story
ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ತೆರೆಯಲು ಸಿದ್ಧತೆ; ಗುರುವಾರದಿಂದ ಭಕ್ತರ ದರ್ಶನಕ್ಕೆ ವ್ಯವಸ್ಥೆ
Read the story
ಬೆಂಗಳೂರು: ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ! ಮನೆಯಲ್ಲೇ ಸ್ವಂತ ಉದ್ಯಮ ಶುರು ಮಾಡಿ
Read the story
ಬೆಂಗಳೂರು ಮೆಟ್ರೋ ಜಾಲ, ಹೊಸಕೋಟೆ, ತುಮಕೂರಿಗೂ ವಿಸ್ತರಣೆ! ಈ ಭಾಗದ ಭೂಮಿಗೆ ಬಂಗಾರದ ಬೆಲೆ
Read the story
ಇಳುವರಿ ಕುಸಿತ, ಮಾರುಕಟ್ಟೆಗೆ ಪೂರೈಕೆ ಕಡಿಮೆ! ಈರುಳ್ಳಿ ಬೆಲೆ ಭಾರೀ ಏರಿಕೆ
Read the story




