Karnataka NewsSandalwood News

ಮೃತ ರಾಕೇಶ್ ಪೂಜಾರಿ ಮನೆಗೆ ರಿಷಭ್ ಶೆಟ್ಟಿ ದಂಪತಿ ಭೇಟಿ, ಸಾಂತ್ವನ

ಕಾಮಿಡಿ ಕಿಲಾಡಿ ಸೀಸನ್ 3 ವಿಜೇತ ರಾಕೇಶ್ ಪೂಜಾರಿ ನಿಧನದ ಬಳಿಕ, ಅವರ ತಾಯಿಗೆ ರಿಷಭ್ ಶೆಟ್ಟಿ ದಂಪತಿ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿ ಭರವಸೆ ನೀಡಿದರು.

Publisher: Kannada News Today (Digital Media)

  • ನಟ ರಿಷಭ್ ಶೆಟ್ಟಿ ದಂಪತಿಯು ಮೃತ ರಾಕೇಶ್ ಕುಟುಂಬಕ್ಕೆ ಭೇಟಿ
  • ತಂಗಿ ಮದುವೆಗೆ ಆರ್ಥಿಕ ಸಹಾಯ ನೀಡಿದ ಶೆಟ್ಟಿ ದಂಪತಿ
  • ಪುತ್ಥಳಿ ಲೋಕಾರ್ಪಣೆಗೂ ಭಾಗವಹಿಸುವ ಭರವಸೆ

‘ಕಾಂತಾರ ಚಾಪ್ಟರ್ 1’ (Kantara Chapter 1) ಚಿತ್ರದಲ್ಲಿ ತಮ್ಮ ಪಾತ್ರದ ಶೂಟಿಂಗ್ ಮುಗಿಸಿ ಕೊಟ್ಟಿದ್ದ ಕಲಾವಿದ ರಾಕೇಶ್ ಪೂಜಾರಿ (Rakesh Poojary) ವಿಧಿವಶರಾದ ಬೆನ್ನಲ್ಲೇ, ಅವರ ಮನೆಯವರೆಗೆ ತೆರಳಿ ರಿಷಭ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ (Rishab Shetty Family) ಸಾಂತ್ವನ ಹೇಳಿದ್ದಾರೆ.

ಕಿರುತೆರೆಯ ಜನಪ್ರಿಯ ಹಾಸ್ಯನಟನಿಗೆ ಅಂತಿಮ ನಮನ ಸಲ್ಲಿಸಲು ಶೆಟ್ಟಿ ದಂಪತಿಯ ಭೇಟಿ ಭಾವುಕ ಕ್ಷಣವಾಯಿತು.

ಮೃತ ರಾಕೇಶ್ ಪೂಜಾರಿ ಮನೆಗೆ ರಿಷಭ್ ಶೆಟ್ಟಿ ದಂಪತಿ ಭೇಟಿ, ಸಾಂತ್ವನ

ಇದನ್ನೂ ಓದಿ: ದಿನ ಭವಿಷ್ಯ 2-6-2025: ಈ ರಾಶಿಗಳಿಗೆ ಲೈಫ್ ಟರ್ನಿಂಗ್ ದಿನ, ಹೆಜ್ಜೆ ಹೆಜ್ಜೆಗೂ ಲಾಭ

ಈ ಸಂದರ್ಭದಲ್ಲಿ ರಿಷಭ್‌ ಶೆಟ್ಟಿ, ರಾಕೇಶ್‌ ಅವರ ತಂಗಿಯ ಮದುವೆಗಾಗಿ ಆರ್ಥಿಕ ನೆರವು ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ರಾಕೇಶ್ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗುವ ಪುತ್ಥಳಿಯ ಲೋಕಾರ್ಪಣಾ ಕಾರ್ಯಕ್ರಮಕ್ಕೂ ಆಗಮಿಸುವೆ ಎಂದು ಕುಟುಂಬದವರಿಗೆ ಭರವಸೆ ನೀಡಿದ್ದಾರೆ.

“ನಾನು ಸದಾ ನಿಮ್ಮೊಂದಿಗಿದ್ದೇನೆ” ಎಂಬ ಮಾತು ರಾಕೇಶ್ ಅವರ ತಾಯಿಗೆ ನೀಡಿದ ದಂಪತಿಗಳು ರಾಕೇಶ್ ಕೇವಲ ಓರ್ವ ಕಲಾವಿದನಾಗಿ ಇರಲಿಲ್ಲ, ಬದಲಾಗಿ ಆತ ಓರ್ವ ಸ್ನೇಹಬಾವದ ವ್ಯಕ್ತಿ ಎಂದರು

Rakesh Poojary

34 ವರ್ಷದ ರಾಕೇಶ್, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮೇ 12ರಂದು ಮುಂಜಾನೆ 3.30ರ ಸಮಯದಲ್ಲಿ ಹೃದಯಾಘಾತದಿಂದ (heart attack) ನಿಧನರಾದರು. ಕೊನೆಯ ಕ್ಷಣಕ್ಕೂ ಮೊದಲು ಮೆಹಂದಿ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಿದ್ದರು. ಈ ದುಃಖದ ಸುದ್ದಿ ಕಲಾವಿದರ ಸಮುದಾಯದಲ್ಲಿ ಶೋಕದ ಛಾಯೆ ತಂದಿತ್ತು.

ಇದನ್ನೂ ಓದಿ: ಮುಲಾಜಿಲ್ಲದೆ ಇಂತಹ ಬಿಪಿಎಲ್‌ ಕಾರ್ಡ್ ಕ್ಯಾನ್ಸಲ್ ಮಾಡಿ, ಸಿಎಂ ಖಡಕ್‌ ಆದೇಶ

ಟಿವಿ ಶೋ ‘ಕಾಮಿಡಿ ಕಿಲಾಡಿಗಳು’ (Comedy Kiladigalu) ಮೂಲಕ ಮನೆಮಾತಾಗಿದ್ದ ರಾಕೇಶ್, ಕನ್ನಡ ಚಿತ್ರರಂಗದಲ್ಲಿಯೂ ಚುರುಕುತನದಿಂದ ಹೆಸರು ಗಳಿಸಿದ್ದರು. ಅವರ ನಗುನಗುತಾ ಮಾತನಾಡುವ ಶೈಲಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಅವರು ನಿರ್ವಹಿಸಿದ ಪಾತ್ರಗಳು ಈಗ ಶಾಶ್ವತ ನೆನಪಾಗಿ ಉಳಿಯಲಿವೆ.

Rishab Shetty visits late actor Rakesh Poojary’s family

English Summary

Related Stories