ಬಸ್ ನಲ್ಲಿ ಫ್ರೀಯಾಗಿ ಓಡಾಡುತ್ತಿದ್ದ ಮಹಿಳೆಯರಿಗೆ ಬಿಗ್ ಶಾಕ್! ಶಕ್ತಿ ಯೋಜನೆಗೆ ಹೊಸ ನಿಯಮ ತಂದ ರಾಜ್ಯ ಸರ್ಕಾರ!

ಶಕ್ತಿ ಯೋಜನೆಯ ಕುರಿತಂತೆ ಸರ್ಕಾರ ಹೊಸ ನಿಯಮ ತಂದಿದೆ. ಶಕ್ತಿ ಯೋಜನೆಯಲ್ಲಿ ಹೊಸ ಸೌಲಭ್ಯ ಒಂದು ಮಹಿಳೆಯರಿಗೆ ಸಿಗಲಿದ್ದು, ಮಹಿಳೆಯರಿಗೆ ಟ್ಯಾಪ್ ಕಾರ್ಡ್ ನೀಡಲಿದೆ ರಾಜ್ಯ ಸರ್ಕಾರ.

ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರ (State Government) ಜಾರಿಗೆ ಬಂದ ನಂತರ 5 ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿತ್ತು. ಅದರಲ್ಲಿ ಸರಿಯಾಗಿ ಜಾರಿಗೆ ಬಂದಿರುವುದು ಶಕ್ತಿಯೋಜನೆ (Shakti Yojane) ಮಾತ್ರ. ಜೂನ್ 11ರಂದು ಶಕ್ತಿ ಯೋಜನೆ ಲಾಂಚ್ ಆಯಿತು. ಎಲ್ಲಾ ಮಹಿಳೆಯರು ಕೂಡ ಈಗ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

ಉಚಿತ ಪ್ರಯಾಣ ಸೌಲಭ್ಯ (Free Bus Travel) ಇರುವುದರಿಂದ ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ಉಚಿತ ಸೌಲಭ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ.. ಈ ಸೌಲಭ್ಯ ಜಾರಿಗೆ ಬಂದು ಒಂದು ತಿಂಗಳು ಕಳೆದಿದೆ, ಈಗಾಗಲೇ ಸರ್ಕಾರಕ್ಕೆ ಇದರಿಂದ ನೂರಾರು ಕೋಟಿ ವೆಚ್ಚವಾಗಿದೆ ಎನ್ನುವ ವಿಷಯ ಕೂಡ ಬಹಿರಂಗವಾಗಿದೆ.

ಮಹಿಳೆಯರು ಶಕ್ತಿ ಯೋಜನೆಯ ಉಚಿತ ಪ್ರಯಾಣವನ್ನು ಎಂಜಾಯ್ ಮಾಡುವಾಗಲೇ, ಈ ಯೋಜನೆಗೆ ಕುರಿತಂತೆ ಸರ್ಕಾರ ಹೊಸ ನಿಯಮ ತಂದಿದೆ. ಶಕ್ತಿ ಯೋಜನೆಯಲ್ಲಿ ಹೊಸ ಸೌಲಭ್ಯ ಒಂದು ಮಹಿಳೆಯರಿಗೆ ಸಿಗಲಿದ್ದು, ಈ ಯೋಜನೆಯ ಮೂಲಕ ಮಹಿಳೆಯರಿಗೆ ಟ್ಯಾಪ್ ಕಾರ್ಡ್ (Tap Card) ನೀಡಲಿದೆ ರಾಜ್ಯ ಸರ್ಕಾರ.

ಬಸ್ ನಲ್ಲಿ ಫ್ರೀಯಾಗಿ ಓಡಾಡುತ್ತಿದ್ದ ಮಹಿಳೆಯರಿಗೆ ಬಿಗ್ ಶಾಕ್! ಶಕ್ತಿ ಯೋಜನೆಗೆ ಹೊಸ ನಿಯಮ ತಂದ ರಾಜ್ಯ ಸರ್ಕಾರ! - Kannada News

ಶಕ್ತಿಯೋಜನೆ ಇಂದ ಪ್ರಯಾಣ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ, ಪ್ರತಿಯೊಬ್ಬ ಮಹಿಳೆಯ ಐಡೆಂಟಿಟಿ ಪ್ರೂಫ್ (ID Proof) ಚೆಕ್ ಮಾಡುವುದಕ್ಕೆ ಟಿಕೆಟ್ ಕೊಡುವುದಕ್ಕೆ ಕಂಡಕ್ಟರ್ ಗಳಿಗೆ ತೊಂದರೆ ಆಗುತ್ತದೆ. ಜೊತೆಗೆ ಬೇರೆ ರಾಜ್ಯದ ಮಹಿಳೆಯರು ಬಸ್ ಗೆ ಬಂದರೆ ಅವರಿಗೆ ಟಿಕೆಟ್ ಇಷ್ಯು ಮಾಡಬೇಕಾಗುತ್ತದೆ. ಇದೆಲ್ಲವೂ ಈ ಎಲ್ಲಾ ತೊಂದರೆಗಳು ಇರುವುದರಿಂದ ಸರ್ಕಾರ ಈಗ ಮಹಿಳೆಯರಿಗೆ ಟ್ಯಾಪ್ ಸ್ಮಾರ್ಟ್ ಕಾರ್ಡ್ (Tap Smart card) ವಿತರಿಸುವ ನಿರ್ಧಾರ ಮಾಡಿದೆ.

Shakti yojaneಟಿಕೆಟ್ ಕೊಡುವುದು, ಐಡಿ ಪರಿಶೀಲನೆ ಇದೆಲ್ಲವೂ ಹೆಚ್ಚಿನ ಕೆಲಸ ಆಗಿರುತ್ತದೆ. ಹಾಗಾಗಿ ಮಹಿಳೆಯರಿಗೆ ನಾರ್ಮಲ್ ಸ್ಮಾರ್ಟ್ ಕಾರ್ಡ್ ಕೊಡುವುದಕ್ಕಿಂತ ಟ್ಯಾಪ್ ಅಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ (Tap and Travel Smart Card) ಕೊಟ್ಟರೆ ಒಳ್ಳೆಯದು ಎನ್ನುವ ಚಿಂತೆ ನಡೆಯುತ್ತಿದೆ. ಈ ಟ್ಯಾಪ್ ಅಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ಗಳನ್ನು ಬಳಸುವುದು ಹೇಗೆ ಎಂದರೆ.

ಮಹಿಳೆಯರು ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಟ್ಯಾಪ್ ಅಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ಅನ್ನು ಪಡೆಯಬೇಕು. ಬಸ್ ನಲ್ಲಿ ಪ್ರಯಾಣ ಮಾಡುವಾಗೆಲ್ಲಾ ಇದನ್ನು ಬಳಸಬೇಕು, ಬಸ್ ಒಳಗೆ ಹತ್ತುವಾಗ ಬಾಗಿಲಲ್ಲಿ ಸ್ಮಾರ್ಟ್ ಕಾರ್ಡ್ ಅನ್ನು ಟ್ಯಾಪ್ ಮಾಡಿ ಹತ್ತಬೇಕು, ಹೊರಬರುವಾಗ ಟ್ಯಾಯ್ಪ್ ಮಾಡಿ ಹೊರಗೆ ಬರಬೇಕು.

ಈ ಸೌಲಭ್ಯದಿಂದ ಕಂಡಕ್ಟರ್ ಗಳಿಗೆ ಮತ್ತು ಬಸ್ ಡ್ರೈವರ್ ಗಳಿಗೆ ಹೆಚ್ಚು ಸಮಸ್ಯೆ ಆಗುವುದಿಲ್ಲ. ಯಾವ ಮಹಿಳೆ ಎಲ್ಲಿ ಬಸ್ ಹತ್ತಿ ಎಲ್ಲಿ ಇಳಿದರು ಎನ್ನುವ ಪೂರ್ತಿ ಮಾಹಿತಿ ಡಿಜಿಟಲ್ ಆಗಿ ರೆಕಾರ್ಡ್ ಆಗುತ್ತದೆ. ಹೊರ ರಾಜ್ಯದ ಮಹಿಳೆಯರಿಗೆ ಮಾತ್ರ ಟಿಕೆಟ್ ವಿತರಣೆ ಮಾಡಬೇಕಾಗುತ್ತದೆ. ಮೆಟ್ರೋ ಟ್ರೇನ್ ಗಳಲ್ಲಿ ಈ ರೀತಿಯ ಸೇವೆಗಳು ಲಭ್ಯವಿದೆ. ಅದನ್ನೇ ಈಗ ಬಸ್ ಗಳಲ್ಲೂ ತರಲು ಮುಂದಾಗಿದೆ ರಾಜ್ಯ ಸರ್ಕಾರ.

Shakti yojane new update smart card for ladies

Follow us On

FaceBook Google News

Shakti yojane new update smart card for ladies