ಬುರುಡೆ ಪ್ರಕರಣ: ಚಿನ್ನಯ್ಯ ಬಾಯಿ ಬಿಟ್ಟ ರಹಸ್ಯ, ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಶೋಧ
ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ಮತ್ತಷ್ಟು ಗಟ್ಟಿಯಾಗಿದ್ದು, ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಎಸ್‌ಐಟಿ ದಾಳಿ ನಡೆಸಿ ಚಿನ್ನಯ್ಯ ಬಳಕೆ ಮಾಡಿದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ತನಿಖೆ ಮತ್ತಷ್ಟು ತೀವ್ರಗೊಂಡಿದೆ.
ಮಂಗಳೂರು, ಆಗಸ್ಟ್ 26: ಧರ್ಮಸ್ಥಳ ಬುರುಡೆ ಪ್ರಕರಣದ ತೀವ್ರ ತನಿಖೆಯ ಭಾಗವಾಗಿ ಎಸ್‌ಐಟಿ ಅಧಿಕಾರಿಗಳು ಇಂದು ಬೆಳಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯತ್ತ ದಾಳಿ ನಡೆಸಿದರು. ಈ ವೇಳೆ ಸಿಸಿಟಿವಿ ಡಿವಿಆರ್, ಐಡಿ ಕಾರ್ಡ್‌ಗಳು ಮತ್ತು ಆ್ಯಂಡ್ರಾಯ್ಡ್ ಫೋನ್ ಸೇರಿದಂತೆ ಚಿನ್ನಯ್ಯಗೆ ಸಂಬಂಧಿಸಿದ ಪ್ರಮುಖ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಚಿನ್ನಯ್ಯ ವಿಚಾರಣೆ ಸಂದರ್ಭದಲ್ಲಿ ಆತ ಎರಡು ತಿಂಗಳ ಕಾಲ ತಿಮರೋಡಿ ಮನೆಯಲ್ಲಿ ಆಶ್ರಯ ಪಡೆದಿದ್ದೆ ಎಂದು ಬಾಯ್ಬಿಟ್ಟಿದ್ದ. ಈ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳು ಮನೆಗೆ ಲಗ್ಗೆಯಿಟ್ಟು ಬಟ್ಟೆ, ಬ್ಯಾಗ್ ಸೇರಿದಂತೆ ಹಲವು ವಸ್ತುಗಳನ್ನು ಪರಿಶೀಲಿಸಿದರು.
ಚಿನ್ನಯ್ಯ ತನ್ನ ವಾಸದ ಅವಧಿಯಲ್ಲಿ ಯಾರನ್ನು ಭೇಟಿ ಮಾಡುತ್ತಿದ್ದ, ಯಾರ ಜೊತೆ ಸಂಪರ್ಕದಲ್ಲಿದ್ದ ಎಂಬುದರ ಬಗ್ಗೆ ಎಸ್‌ಐಟಿ ದಾಖಲೆ ಸಂಗ್ರಹಿಸಿದೆ. ಮನೆಯಿಂದ ಹೊರಗೆ ಹೋಗುವ ಮುನ್ನ, ಬಂದು ಹೋದ ನಂತರ ಏನು ಮಾಡುತ್ತಿದ್ದೆ ಎಂಬುದರ ತನಿಖೆಯನ್ನೂ ನಡೆಸಲಾಗಿದೆ.
ತನಿಖೆಯ ವೇಳೆ ಅಧಿಕಾರಿಗಳು ಚಿನ್ನಯ್ಯನಿಗೆ ಹಲವು ಕಟುವಾದ ಪ್ರಶ್ನೆಗಳನ್ನು ಕೇಳಿದ್ದಾರೆ. “ಶವಗಳನ್ನು ಹೂತಿದ್ದೀಯೆಂದು ದೂರು ನೀಡಲು ಬಂದಾಗ ನೀನು ಎಲ್ಲಿ ವಾಸವಿದ್ದೆ? ಶೆಟ್ಟಿ ಮನೆಯಲ್ಲಿ ಇದ್ದಾಗ ಯಾರನ್ನು ಭೇಟಿ ಮಾಡುತ್ತಿದ್ದೆ? ನಿನ್ನ ಫೋನ್ ಇಲ್ಲವೆಂದಿದ್ದೀಯಲ್ಲಾ, ಈಗ ಅದು ಸಿಕ್ಕಿದೆ, ಏನು ಹೇಳುತ್ತೀಯಾ?” ಎಂಬಂತೆ ಪ್ರಶ್ನೆ ಸುರಿಮಳೆಯಾಯಿತು.
ಇದರಿಂದ ಬುರುಡೆ ಪ್ರಕರಣದ ಮೂಲಕ್ಕೆ ತಲುಪುವ ಪ್ರಯತ್ನಕ್ಕೆ ಬಲ ಸಿಕ್ಕಿದೆ. ಚಿನ್ನಯ್ಯ ನೀಡಿದ ಮಾಹಿತಿಯ ಆಧಾರದ ಮೇಲೆ ಮುಂದಿನ ಹಂತದ ತನಿಖೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.
SIT Raids Timarodi House, Seizes Items Linked to Chinnayya







