ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಹರಿದ ಕ್ಯಾನ್ಟರ್ ಲಾರಿ, ಸ್ಥಳದಲ್ಲೇ ಸಾವು
ಮಂಗಳೂರು ಕಾಲೇಜಿಗೆ ಹಿಂತಿರುಗುವಾಗ ನಡೆದ ದುರ್ಘಟನೆ, ಸಹೋದರನ ಜೊತೆ ಬೈಕ್‌ನಲ್ಲಿ ಬರುತ್ತಿದ್ದಾಗ ಘಟನೆ, ಊರಿನಲ್ಲಿ ಜಾತ್ರೆ ಮುಗಿಸಿಕೊಂಡು ಹಿಂತಿರುಗುವಾಗ ದುರ್ಘಟನೆ
Publisher: Kannada News Today (Digital Media)
- ಬೈಕ್‌ನಿಂದ ಬಿದ್ದ ವಿದ್ಯಾರ್ಥಿನಿ, ಹಿಂಬದಿಯಿಂದ ಬಂದ ಕ್ಯಾನ್ಟರ್ ಹರಿದು ಸಾವು
- ಊರಿನಲ್ಲಿ ಜಾತ್ರೆ ಮುಗಿಸಿ ಕಾಲೇಜಿಗೆ ಹಿಂದಿರುಗುತ್ತಿದ್ದಾಗ ದುರಂತ
- ಸ್ಥಳದಲ್ಲಿಯೇ ಮೃತಪಟ್ಟ ಯುವತಿ, ಶೋಕದಲ್ಲಿ ಕುಟುಂಬ
ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ 20 ವರ್ಷದ ಧನುಶ್ರೀ (Dhanushree) ಅಚಾನಕ್ ಬಿದ್ದು, ಹಿಂಬದಿಯಿಂದ ಬಂದ ಕ್ಯಾನ್ಟರ್ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾಗಡಿ ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ನಿವಾಸಿ ಸಿದ್ಧರಾಜು ಹಾಗೂ ಜಗದಾಂಬ ದಂಪತಿಗಳ ಪುತ್ರಿ ಧನುಶ್ರೀ, ಮಂಗಳೂರಿನ ಆಳ್ವಾಸ್ (Alvas) ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ಗ್ರಾಮದ ಜಾತ್ರೆಗೆ ಆಗಮಿಸಿದ್ದ ಅವರು, ಜಾತ್ರೆ ಮುಗಿದ ನಂತರ ಮತ್ತೆ ಕಾಲೇಜಿಗೆ ಹಿಂತಿರುಗುತ್ತಿದ್ದರು. ತನ್ನ ಸಹೋದರನೊಂದಿಗೆ ಬೈಕ್‌ನಲ್ಲಿ ಕುಣಿಗಲ್ ರೈಲ್ವೆ ನಿಲ್ದಾಣದತ್ತ ಪ್ರಯಾಣಿಸುತ್ತಿದ್ದರು.
ಮಾರ್ಗಮದ್ಯೆ ಬೈಕ್ ಸ್ಕಿಡ್ ಆಗಿದ್ದು, ಧನುಶ್ರೀ ರಸ್ತೆಗೆ ಬಿದ್ದಿದ್ದಾರೆ. ದುರಾದೃಷ್ಟವಶಾತ್, ಅವರ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕ್ಯಾನ್ಟರ್ ಲಾರಿ ನೇರವಾಗಿ ಅವರ ಮೇಲೆ ಹರಿದು, ಸ್ಥಳದಲ್ಲಿಯೇ ಸಾವನ್ನಪ್ಪಿದರು.
ಯುವತಿ ಅಕಾಲಿಕ ಸಾವಿನಿಂದ ಕುಟುಂಬದ ಶೋಕ ಮುಗಿಲು ಮುಟ್ಟಿತ್ತು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Student Dies in Horrific Accident After Falling from Bike