ಈ ರೀತಿ ಮಾಡಿದರೆ ಸಿಗಲ್ಲ ಗೃಹಜ್ಯೋತಿ ಸೌಲಭ್ಯ! ಕರೆಂಟ್ ಬಿಲ್ ಕಟ್ಟಲೇ ಬೇಕಾಗುತ್ತೆ! ಮೊದಲು ತಿಳಿಯಿರಿ
ನೀವು ಹೆಚ್ಚುವರಿಯಾಗಿ ಬಳಸುವ ವಿದ್ಯುತ್ ಮೊತ್ತವನ್ನು ನಿಮಗೆ ಬಿಲ್ ಮೂಲಕ ನೀಡಲಾಗುತ್ತದೆ.. ಈ ಬಿಲ್ ಪಾವತಿ ಮಾಡಬೇಕು.
ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದಲ್ಲಿ ತಂದಿರುವ 5 ಗ್ಯಾರಂಟಿ ಯೋಜೆನೆಗಳಲ್ಲಿ ಒಂದು ಗೃಹಜ್ಯೋತಿ ಯೋಜನೆ (Gruha Jyoti Yojane) ಆಗಿದೆ. ಈ ಯೋಜನೆಯ ಮೂಲಕ ರಾಜ್ಯದಲ್ಲಿ ಎಲ್ಲರ ಮನೆಗೂ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳಲಾಗಿತ್ತು. ಆದರೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗುವ ಮೊದಲು ಕೆಲವು ಕಾಂಪ್ಲಿಕೇಶನ್ ಗಳು ಎದುರಾದರು ಕೂಡ.
ಈಗ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ.. ಸರ್ಕಾರ ಈಗಾಗಲೇ ಹೇಳಿರುವ ಹಾಗೆ ಗೃಹಜ್ಯೋತಿ ಯೋಜನೆಯಲ್ಲಿ ಅರ್ಜಿ ಹಾಕಿದ ಮುಂದಿನ ತಿಂಗಳಿನಿಂದಲೇ ನೀವು ಕರೆಂಟ್ ಬಿಲ್ (Electricity Bill) ಪಡೆಯುವುದಿಲ್ಲ ಉಚಿತವಾಗಿ ವಿದ್ಯುತ್ (Free Electricity) ಬಳಸಬಹುದು. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸೇವಾಸಿಂಧು ಪೋರ್ಟಲ್ ಗೆ ಭೇಟಿ ನೀಡಬೇಕು.
ಒಟ್ಟಿನಲ್ಲಿ ನೀವು ಎಷ್ಟು ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸುತ್ತೀರೋ, ಅಷ್ಟು ಬೇಗ ನಿಮಗೆ ಉಚಿತವಾಗಿ ವಿದ್ಯುತ್ ಸಿಗುತ್ತದೆ. ಫ್ರೀ ವಿದ್ಯುತ್ ಯೋಜನೆಯ ಸೌಲಭ್ಯ ಇವರಿಗೆ ಸಿಗುತ್ತೆ, ಇವರಿಗೆ ಸಿಗಲ್ಲ ಎನ್ನುವ ಹಾಗೆ. ಯಾವುದೇ ಬೇಧ ಭಾವ ಇಲ್ಲದೆ ರಾಜ್ಯದ ಎಲ್ಲಾ ಜನರಿಗೂ ಉಚಿತ ವಿದ್ಯುತ್ ಸಿಗಲಿದೆ. ಪ್ರತಿಯೊಬ್ಬರು ಕೂಡ ಈ ಸೌಲಭ್ಯ ಪಡೆಯಬಹುದು ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಯೋಜನೆಯನ್ನು ಉಚಿತವಾಗಿ ಎಷ್ಟು ವಿದ್ಯುತ್ ಪಡೆಯಬಹುದು ಎಂದು ಹೇಗೆ ಲೆಕ್ಕ ಹಾಕುತ್ತಾರೆ ಎಂದು ಕೂಡ ಈಗಾಗಲೇ ನಿಮಗೆ ಗೊತ್ತಾಗಿದೆ ಸಿಎಂ ಸಿದ್ದರಾಮಯ್ಯ (CM Siddaramaiah( ಅವರು ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಅಧಿಕೃತವಾಗಿ ಈ ಬಗ್ಗೆ ಮಾತನಾಡಿದ್ದಾರೆ. ಈ ಯೋಜನೆಯಲ್ಲಿ ನಿಮಗೆ ಉಚಿತ ವಿದ್ಯುತ್ ಹೇಗೆ ಸಿಗುತ್ತೆ? ಎಷ್ಟು ಸಿಗುತ್ತೆ?
ಎಲ್ಲರಿಗು ಉಚಿತವಾಗಿ 200 ಯೂನಿಟ್ ಫ್ರೀ ವಿದ್ಯುತ್ ಸಿಗುತ್ತಾ, ಈ ಎಲ್ಲಾ ಪ್ರಶ್ನೆಗೆ ಉತ್ತರ ಈಗಾಗಲೇ ಸಿಕ್ಕಿದೆ.. ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ನೀಡಲು, ನಿಮ್ಮ ಮನೆಗೆ ಕಳೆದ 12 ತಿಂಗಳಿನಿಂದ ಎಷ್ಟು ವಿದ್ಯುತ್ ಬಿಲ್ ಬಂದಿದೆ ಎನ್ನುವುದನ್ನು ಲೆಕ್ಕ ಹಾಕಿ, ಅದರ ಆವರೇಜ್ ತೆಗೆದುಕೊಳ್ಳಲಾಗುತ್ತದೆ. ಅಷ್ಟು ಯೂನಿಟ್ ವಿದ್ಯುತ್ ನಿಮಗೆ ಫ್ರೀಯಾಗಿ ಸಿಗುತ್ತದೆ ಜೊತೆಗೆ 10% ವಿದ್ಯುತ್ ಹೆಚುವರಿಯಾಗಿ ಬಳಸಬಹುದು.
ಒಂದು ವೇಳೆ ನಿಮ್ಮ ಮನೆಯ ವಿದ್ಯುತ್ 200 ಯೂನಿಟ್ ಗಿಂತ ಹೆಚ್ಚು ಬಳಕೆ ಆಗಿದ್ದರೆ, ಆಗ ನೀವು ಗೃಹಜ್ಯೋತಿ ಯೋಜನೆಗೆ ಅರ್ಹರಾಗುವುದಿಲ್ಲ.. ಈ ಷರತ್ತು ಗೃಹಜ್ಯೋತಿ ಯೋಜನೆಗೆ ಇದೆ. ಗೃಹಜ್ಯೋತಿ ಸೌಲಭ್ಯ ಪಡೆಯುವುದಕ್ಕೆ ಈ ಯೋಜನೆಗೆ ಅಪ್ಲೈ ಮಾಡುವುದು ಬಹಳ ಮುಖ್ಯವಾಗಿದೆ..ಗೃಹಜ್ಯೋತಿ ಯೋಜನೆ ಉಚಿತವಾಗಿ ಯಾರಿಗು ಸಿಗುವುದಿಲ್ಲ.
ಇಲ್ಲಿ ಮತ್ತೊಂದು ವಿಚಾರ ಶುರುವಾಗಿದೆ, ಒಂದು ರೀತಿ ಇದು ಬ್ಯಾಡ್ ನ್ಯೂಸ್ ಎಂದು ಹೇಳಬಹುದು..ಗೃಹಜ್ಯೋತಿ ಯೋಜನೆ ಇಂದ ಉಚಿತ ವಿದ್ಯುತ್ ಏನೋ ಸಿಗುತ್ತದೆ, ಸೌಲಭ್ಯ ನೀಡುವ ಮೊದಲು ಯಾವ ಮನೆ ಎಷ್ಟು ವಿದ್ಯುತ್ ಬಳಕೆ ಮಾಡುತ್ತದೆ ಎಂದು ಆವೇರಿಗೆ ಗೊತ್ತಿರುತ್ತದೆ. ಆದರೆ ಪ್ರತಿ ತಿಂಗಳು ನಾವು ಅಷ್ಟೇ ವಿದ್ಯುತ್ ಬಳಸುತ್ತೇವೆ ಎಂದು ಹೇಳಲು ಆಗೋದಿಲ್ಲ.
ಕೆಲವೊಮ್ಮೆ ಸಂದರ್ಭಗಳು ಸಮಯಗಳು ಬೇರೆ ರೀತಿ ಇದ್ದಾಗ ಹೆಚ್ಚು ವಿದ್ಯುತ್ ಬಳಕೆ ಆಗಬಹುದು, ಆ ರೀತಿ ಆದಾಗ ನೀವು ಹೆಚ್ಚುವರಿಯಾಗಿ ಬಳಸುವ ವಿದ್ಯುತ್ ಮೊತ್ತವನ್ನು ನಿಮಗೆ ಬಿಲ್ ಮೂಲಕ ನೀಡಲಾಗುತ್ತದೆ.. ಈ ಬಿಲ್ ಪಾವತಿ ಮಾಡಬೇಕು, ಬಿಲ್ ಕ್ಲಿಯರ್ ಮಾಡುವುದಕ್ಕೆ 3 ತಿಂಗಳವರೆಗು ಸಮಯ ಇರುತ್ತದೆ.
3 ತಿಂಗಳಾದರೂ ಬಿಲ್ ಕಟ್ಟದೆ ಹೋದರೆ ನೀವು ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯುವ ಅರ್ಹತೆಯನ್ನು ಕಳೆದುಕೊಳ್ಳುತ್ತೀರಿ. ನೀವು ಆಗ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ಈಗ ವಿದ್ಯುತ್ ಬೆಲೆಯನ್ನು ಕೂಡ ಏರಿಸಲಾಗಿದ್ದು, ಪ್ರತಿ ತಿಂಗಳು ಹಣ ಕಟ್ಟುವುದು ನಿಮಗೆ ಆ
ಕಷ್ಟವಾಗುತ್ತದೆ. ಹಾಗಾಗಿ ಬಿಲ್ ಕಟ್ಟುವ ವಿಚಾರದಲ್ಲಿ ಹುಷಾರಾಗಿರಿ..
These people should pay electricity bill from next month