Karnataka News

ಮಧ್ಯರಾತ್ರಿ ಮನೆಗೆ ನುಗ್ಗಿದ ಕಳ್ಳ ಅಲ್ಲೇ ನಿದ್ರೆ ಮಾಡಿದ! ಬೆಳಿಗ್ಗೆ ಏನಾಯ್ತು ಗೊತ್ತಾ

ಶಿವಮೊಗ್ಗದಲ್ಲಿ ನಡೆದ ಈ ವಿಚಿತ್ರ ಕಳ್ಳತನ ಘಟನೆ ಸ್ಥಳೀಯರಲ್ಲಿ ಕುತೂಹಲ ಮತ್ತು ನಗುವಿಗೆ ಕಾರಣವಾಗಿದೆ. ಮನೆ ದೋಚಲು ಬಂದ ಕಳ್ಳ, ಹಣದ ಬದಲು ಟವಲ್-ಪಂಚ ಕದ್ದು, ಪಕ್ಕದ ಮನೆಯ ಮಂಚದ ಮೇಲೆ ನಿದ್ರೆ ಹೊಡೆದಿದ್ದ!

  • ಶಿವಮೊಗ್ಗದಲ್ಲಿ ರಾತ್ರಿ ಮನೆಗೆ ನುಗ್ಗಿದ ಕಳ್ಳ
  • ಹಣ ಸಿಗದೆ ಟವಲ್-ಪಂಚೆ ಕದ್ದ, ಪಕ್ಕದ ಮನೆಯ ಮಂಚದ ಮೇಲೆ ನಿದ್ರಿಸಿದ ಕಳ್ಳ
  • ಬೆಳಿಗ್ಗೆ ಪೊಲೀಸರು ಬಂದು ನಿದ್ರಿಸುತ್ತಿದ್ದ ಕಳ್ಳನ ಬಂಧನ

ಶಿವಮೊಗ್ಗ ನಗರದ ಸೋಮಿನಕೊಪ್ಪ ಟೀಚರ್ಸ್ ಕಾಲೋನಿ (Teachers Colony) ನಲ್ಲಿ ವಿಚಿತ್ರ ಘಟನೆ ನಡೆದಿದೆ. ಮನೆಯೊಳಗೆ ನುಗ್ಗಿದ ವ್ಯಕ್ತಿ ಹಣ-ನಗದು ಸಿಗದ ಕಾರಣ, ಅಲ್ಲಿದ್ದ ಟವಲ್ (Towel) ಮತ್ತು ಪಂಚೆ (Dhoti) ಅನ್ನು ಕದ್ದು ಪಕ್ಕದ ಮನೆಯ ಮೇಲ್ಮಹಡಿಗೆ ತೆರಳಿ ಅಲ್ಲೇ ನಿದ್ರಿಸಿದ್ದ!

ಈ ಕಳ್ಳತನವನ್ನು ಬೆಳಿಗ್ಗೆ ಮನೆ ಮಾಲಿಕ ಕುಮಾರ್ ಗಮನಿಸಿದರು. ಮನೆ ಬೀಗ ಒಡೆದು, ಅಲ್ಮಾರಿಯ (Cupboard) ಬಾಗಿಲು ತೆರೆದಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಮಧ್ಯರಾತ್ರಿ ಮನೆಗೆ ನುಗ್ಗಿದ ಕಳ್ಳ ಅಲ್ಲೇ ಗಾಢ ನಿದ್ರೆಗೆ ಜಾರಿದ್ದ! ಬೆಳಿಗ್ಗೆ ಏನಾಯ್ತು ಗೊತ್ತಾ

ಕಳ್ಳ ಅರೆಸ್ಟ್

ವಿನೋಬಾನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ, ಪಕ್ಕದ ಮನೆಯ ಮೇಲ್ಮಹಡಿಯಲ್ಲಿ ರಾಜನಂತೆ ಮಲಗಿದ್ದ ಕಳ್ಳ ಕಂಡುಬಂದ! ಎಸ್‌ಐ ಸುನೀಲ್ (SI Sunil) ನೇತೃತ್ವದ ತಂಡ, ಅವನನ್ನು ಎಚ್ಚರಿಸಿ, ತಕ್ಷಣ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಕಳ್ಳನ “ಟವಲ್ ಕಳ್ಳತನ” ಮತ್ತು “ಮಹಡಿ ಮೇಲೆ ನಿದ್ರೆ” ಮಾಡಿದ ಘಟನೆ ಕೇಳಿ ಸ್ಥಳೀಯರು ನಗುತ್ತಿದ್ದ ದೃಶ್ಯ ಕಂಡುಬಂದಿದೆ.

Thief Steals Towel, Sleeps on Roof, Wakes Up in Jail

English Summary

Our Whatsapp Channel is Live Now 👇

Whatsapp Channel

Related Stories