ಭೀಕರ ಅಪಘಾತ, ಕಾರು-ಟ್ರ್ಯಾಕ್ಟರ್ ಡಿಕ್ಕಿಯಾಗಿ ನಾಲ್ವರು ದುರ್ಮರಣ
ಚಿತ್ರದುರ್ಗದ ಚಿತ್ರಹಳ್ಳಿ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ದುರ್ಮರಣಕ್ಕೆ ತುತ್ತಾಗಿ, ಇಡೀ ಕುಟುಂಬವೇ ಶೋಕಸಾಗರದಲ್ಲಿ ಮುಳುಗಿದೆ.

- ಕಾರು ಟ್ರ್ಯಾಕ್ಟರ್ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವು
- ಇಬ್ಬರು ಪುಟಾಣಿ ಮಕ್ಕಳು ಕೂಡ ಅಪಘಾತದಲ್ಲಿ ಅಸುನೀಗಿದ್ದಾರೆ
- ಘಟನೆಯಿಂದ ತೀವ್ರ ಗಾಯಗೊಂಡ ಯಶವಂತ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು
ಚಿತ್ರದುರ್ಗ ಜಿಲ್ಲೆಯ (Chitradurga) ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ (ಮೇ 16) ರಾತ್ರಿ ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ಅಪಘಾತ (road accident) ನಾಲ್ವರ ಜೀವವನ್ನು ಕಸಿದುಕೊಂಡಿದೆ.
ಅಪಘಾತದ ವೇಳೆ ಕಾರಿನಲ್ಲಿ ಯಶವಂತ್ ಕುಟುಂಬದ ಎಲ್ಲಾ ಸದಸ್ಯರು ಇದ್ದರು. ಗಂಭೀರವಾಗಿ ಗಾಯಗೊಂಡ ಯಶವಂತ್ ಅವರನ್ನು ಕೂಡಲೇ ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದುರಾದೃಷ್ಟವಶಾತ್ ಈ ಘಟನೆಯಲ್ಲಿ ಪುಟಾಣಿ ಮಕ್ಕಳು ಹನ್ಸಿಕಾ (4) ಮತ್ತು ಮನಸ್ವಿ (2) ಕೂಡ ಬಲಿಯಾದರು. ಇನ್ನು ಯಶವಂತ್ ಅವರ ಪತ್ನಿ ಕಾವ್ಯಾ (30) ಮತ್ತು ತಾಯಂದಿರಾದ ಗಂಗಮ್ಮ (50) ಕೂಡ ಸ್ಥಳದಲ್ಲೇ ಮೃತರಾಗಿದ್ದಾರೆ. ಕುಟುಂಬದ ನೆಮ್ಮದಿ ಕ್ಷಣದಲ್ಲಿ ಧ್ವಂಸವಾಗಿದೆ ಎಂಬ ದುಃಖ ಭರಿತ ದೃಶ್ಯ ಸ್ಥಳದಲ್ಲಿ ನಿರ್ಮಾಣವಾಯಿತು.
ಇದನ್ನೂ ಓದಿ: ಹಣ ನೀಡದ ಅಜ್ಜಿಯ ಹತ್ಯೆ: ಮೊಮ್ಮಗನ ಅಮಾನುಷ ಕೃತ್ಯ
ಅಪಘಾತದ ತೀವ್ರತೆಗೆ ಕಾರಣವಾಗಿರುವ ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯ ಕುರಿತಾಗಿ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಚಿತ್ರದುರ್ಗ ಎಸ್‌ಪಿಐ ರಂಜಿತ್ ಕುಮಾರ್ ಬಂಡಾರು ಹಾಗೂ ಡಿವೈಎಸ್ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಅಪಘಾತ ಚಿತ್ರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಾಹನಗಳು ಛಿದ್ರಗೊಂಡ ದೃಶ್ಯ ನೋಡುವುದೇ ತೀವ್ರ ಆಘಾತ ಉಂಟುಮಾಡುತ್ತದೆ. ಇಡೀ ಕುಟುಂಬ ಶೋಕಸಾಗರಲ್ಲಿ ಮುಳುಗಿದೆ.
Tragic Crash Kills Four from Same Family



