ತುಮಕೂರು: ಶಾಲೆಯಲ್ಲಿ ಕುಕ್ಕರ್ ಸ್ಫೋಟ, ಅಡುಗೆ ಸಿಬ್ಬಂದಿಗೆ ಗಾಯ

ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕು ಪುರವರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕುಕ್ಕರ್ ಸ್ಫೋಟಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಅಡುಗೆ ಸಹಾಯಕಿಯರಾದ ಉಮಾದೇವಿ (52) ಹಾಗೂ ಜಯಮ್ಮ (55) ಅವರು ಮಕ್ಕಳ ಊಟಕ್ಕೆ ಅನ್ನ ಬೇಯಿಸುತ್ತಿದ್ದಾಗ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅವರನ್ನು ಆಸ್ಪತ್ರೆಗೆ ದಾಖಲಿಸಿದ ಶಿಕ್ಷಕರು ಹಾಗೂ ಮೇಲಧಿಕಾರಿಗಳು ಏನೂ ಆಗಿಲ್ಲ ಎಂದು ಹೇಳುವ ಪ್ರಯತ್ನ ಮಾಡಿದರು. ಗಾಯಾಳುಗಳನ್ನು ಉತ್ತಮ ಚಿಕಿತ್ಸೆಗಾಗಿ ಮಧುಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರು 30ರಷ್ಟು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗುಣಮಟ್ಟದ ಕುಕ್ಕರ್ ನೀಡದ ಕಾರಣ ಸ್ಫೋಟ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಮಧುಗಿರಿ ತಾಲೂಕು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tumakuru Incident: Two Cooks Injured in Pressure Cooker Blast at School

English Summary▼

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories