ಹುಬ್ಬಳ್ಳಿ ಎನ್‌ಕೌಂಟರ್‌​: ಪಿಎಸ್​ಐ ಅನ್ನಪೂರ್ಣಗೆ ದೇಶಾದ್ಯಂತ ಮೆಚ್ಚುಗೆ

ಹುಬ್ಬಳ್ಳಿ ಬಾಲಕಿಯ ಹತ್ಯೆ ಆರೋಪಿಯನ್ನು ಎನ್‌ಕೌಂಟರ್ ಮಾಡಿದ ಪಿಎಸ್‌ಐ ಅನ್ನಪೂರ್ಣ ದೇಶಾದ್ಯಂತ ಮೆಚ್ಚುಗೆ ಗಳಿಸಿದ್ದಾರೆ. ಗಾಯಗೊಂಡ ಈ ಲೇಡಿ ಸಿಂಗಂ ಪಿಎಸ್‌ಐಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

  • ಪುಟಾಣಿ ಹತ್ಯೆ ಆರೋಪಿಯನ್ನು ಎನ್‌ಕೌಂಟರ್ ಮಾಡಿದ ಪಿಎಸ್‌ಐ
  • ಲಕ್ಷಾಂತರ ಜನರ ಮನ ಗೆದ್ದ ಲೇಡಿ ಸಿಂಗಂ
  • ಪಿಎಸ್​ಐ ಅನ್ನಪೂರ್ಣ ಅವರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಆರೋಪಿ ರಿತೇಶ್ ಸ್ಥಳ ಪರಿಶೀಲನೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ, ಪಿಎಸ್‌ಐ ಅನ್ನಪೂರ್ಣ (PSI Annapurna) ಅವರು ಎನ್‌ಕೌಂಟರ್ (Encounter) ಕ್ರಮ ಕೈಗೊಂಡಿದ್ದರು. ಅವರ ಸಮಯೋಚಿತ ನಿರ್ಧಾರ ಹಾಗೂ ಧೈರ್ಯಕ್ಕೆ ಜನತೆ ಕೊಂಡಾಡಿದ್ದಾರೆ, ಅವರು ಗಾಯಗೊಂಡು ಈಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅನ್ನಪೂರ್ಣ ಅವರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಗುಜನಟ್ಟಿ ಗ್ರಾಮದಲ್ಲಿ. ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಮಾಡಿದ ನಂತರ ಅವರು ಬೆಂಗಳೂರಿನ ಜಿಕೆವಿಕೆಯಿಂದ ಎಂಎಸ್‌ಸಿ ಪದವಿ ಪಡೆದು ಚಿನ್ನದ ಪದಕ ಸಹ ಪಡೆದಿದ್ದರು.

ಅಪ್ಪನನ್ನು ಬಾಲ್ಯದಲ್ಲೇ ಕಳೆದುಕೊಂಡ ಪಿಎಸ್‌ಐ ಅನ್ನಪೂರ್ಣ, ತಾಯಿ ನೆರಳಲ್ಲಿ ಬೆಳೆದು ಈ ಸ್ಥಾನವನ್ನು ತಲುಪಿದ್ದಾರೆ. ಹೀಗಾಗಿ ದೇಶದಾದ್ಯಂತ ಅವರು Role Model ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಮಹಾಪೂರ ಹರಿದು ಬರುತ್ತಿದೆ.

ಇನ್ನೊಂದೆಡೆ, ಬಾಲಕಿಯ ಮೃತದೇಹವನ್ನು ದೇವಾಂಗಪೇಟೆಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಕಂದಮ್ಮನ ಮರಣದಿಂದ ಶೋಕಸಾಗರಕ್ಕೆ ಬೀಳಿದ ಕುಟುಂಬಕ್ಕೆ ಸರ್ಕಾರವು ₹10 ಲಕ್ಷ ಪರಿಹಾರ ಘೋಷಿಸಿದೆ. ಸಂಬಂಧಿಕರ ಆಕ್ರಂದನ ಎಲ್ಲರ ಮನತೊಳಲಿಸಿತು.

ಸದ್ಯ ಅವರ ಧೈರ್ಯದ ಕೆಲಸಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ ‘ಸೆಲ್ಯೂಟ್’ ಹೊಡೆದಿದ್ದಾರೆ. ಗಾಯಗೊಂಡ ಪೊಲೀಸರು ಬೇಗನೆ ಚೇತರಿಸಿಕೊಳ್ಳಲಿ ಎಂಬ ಹಾರೈಕೆ ವ್ಯಕ್ತಪಡಿಸಿದರು. ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಅನ್ನಪೂರ್ಣನಿಗೆ ಶೇಕ್‌ಹ್ಯಾಂಡ್ ಮಾಡಿ ‘ಗೇಟ್‌ವೆಲ್‌ ಸೂನ್’ ಎಂದರು.

ಈ ಘಟನೆ ಬಳಿಕ “ಯಾರು ಈ ಲೇಡಿ ಸಿಂಗಂ?” ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿದೆ. ಹುಬ್ಬಳ್ಳಿ ಪೊಲೀಸರು, ಜಿಲ್ಲಾಡಳಿತ ಹಾಗೂ ಸರಕಾರ ಅವರ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಜನರಲ್ಲಿ ಹೊಸ ಆತ್ಮವಿಶ್ವಾಸ ಹುಟ್ಟಿಸಿರುವ ಈ ಘಟನೆ ಪೊಲೀಸ್ ವ್ಯವಸ್ಥೆಯ ಮೇಲೆ ನಂಬಿಕೆ ಹೆಚ್ಚಿಸಿದೆ.

Who is Lady Singham PSI Annapurna

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories