ಕರ್ನಾಟಕ ಸಿಎಂ ಕುರ್ಚಿ! ಪಕ್ಷದ ಕಾರ್ಯಕರ್ತನಾಗಿಯೇ ಕೆಲಸ ಮಾಡುತ್ತೇನೆ: ಡಿಕೆ ಶಿವಕುಮಾರ್
ದೆಹಲಿ ಪ್ರವಾಸದ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿ ವಿಚಾರದಲ್ಲಿ ಹೈಕಮಾಂಡ್‌ಗೆ ಒತ್ತಡ ತರುವ ಉದ್ದೇಶ ಇಲ್ಲ, ಪಕ್ಷದ ಕಾರ್ಯಕರ್ತನಾಗಿಯೇ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
- ಹೈಕಮಾಂಡ್‌ಗೆ ತೊಂದರೆ ಕೊಡಲ್ಲ ಎಂದ ಡಿಕೆ ಶಿವಕುಮಾರ್
- ಸಿಎಂ ಬದಲಾವಣೆ ಕುರಿತು ಊಹಾಪೋಹಕ್ಕೆ ತೆರೆ
- ಪಕ್ಷದ ಕಾರ್ಯಕರ್ತನಾಗಿ ಮುಂದುವರೆಯುವ ಇಚ್ಛೆ
ಬೆಂಗಳೂರು / ದೆಹಲಿ (ಡಿ.25): ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಗಳ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ದೆಹಲಿ ಪ್ರವಾಸದಲ್ಲಿರುವ ಅವರು, ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್‌ಗೆ ಯಾವುದೇ ರೀತಿಯ ಸಮಸ್ಯೆ ಸೃಷ್ಟಿಸುವ ಉದ್ದೇಶ ನನಗಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವಿಚಾರವನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ ಎನ್ನುವ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ನಾನು ರಾಹುಲ್ ಗಾಂಧಿಯವರನ್ನು ಅಥವಾ ಪಕ್ಷದ ನಾಯಕತ್ವವನ್ನು ಒತ್ತಡಕ್ಕೆ ಒಳಪಡಿಸಲು ಇಚ್ಛಿಸುವುದಿಲ್ಲ. ನನಗೆ ಅಧಿಕಾರಕ್ಕಿಂತ ಪಕ್ಷ ಮುಖ್ಯ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವುದು ನನಗೆ ಹೆಮ್ಮೆ” ಎಂದು ಹೇಳಿದರು.
ಊಹಾಪೋಹಗಳಿಗೆ ಬ್ರೇಕ್:
ದೆಹಲಿ ಪ್ರವಾಸದಲ್ಲಿ ಹೈಕಮಾಂಡ್ ನಾಯಕರೊಂದಿಗೆ ಯಾವುದೇ ಸಭೆ ನಡೆಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಬದಲಾವಣೆ ಕುರಿತು ನಡೆಯುತ್ತಿರುವ ಊಹಾಪೋಹಗಳು ಆಧಾರರಹಿತವಾಗಿದ್ದು, ಕೆಲ ಊಟದ ಭೇಟಿಗಳನ್ನು ರಾಜಕೀಯ ಅರ್ಥ ನೀಡುವುದು ಸರಿಯಲ್ಲ ಎಂದರು.
ಮೈಸೂರು ಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸಭೆ ನಡೆಸುವ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಚಟುವಟಿಕೆಗಳು ಅಗತ್ಯವಿಲ್ಲ, ಪಕ್ಷದೊಳಗಿನ ವಿಷಯಗಳನ್ನು ಶಾಂತಿಯುತವಾಗಿ ಬಗೆಹರಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಿಎಂ ಸ್ಥಾನ ಭದ್ರ ಎಂದ ಸಚಿವ ಜಮೀರ್:
ಇನ್ನೊಂದೆಡೆ, ಮುಖ್ಯಮಂತ್ರಿ ಸ್ಥಾನ ಸಂಪೂರ್ಣ ಭದ್ರವಾಗಿದೆ ಎಂದು ಗೃಹ ನಿರ್ಮಾಣ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. 2028ರವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. ಹೈಕಮಾಂಡ್ ಹೊರತುಪಡಿಸಿ ಯಾರಿಗೂ ಮುಖ್ಯಮಂತ್ರಿ ಸ್ಥಾನ ಬದಲಿಸುವ ಶಕ್ತಿ ಇಲ್ಲ ಎಂದು ಅವರು ಹೇಳಿದರು.
ದಿನ ಭವಿಷ್ಯ 29-10-2026: ಮಹಾಲಕ್ಷ್ಮಿ ರಾಜಯೋಗ; 4 ರಾಶಿಗಳಿಗೆ ಶುಭ ಸೂಚನೆ! ಹಣಕಾಸು ಭವಿಷ್ಯ ಉಜ್ವಲ
Read the story
ಕರ್ನಾಟಕ ಮಹಿಳೆಯರಿಗೆ ₹2 ಲಕ್ಷದವರೆಗೆ ಸಾಲ ಸೌಲಭ್ಯ; ಸ್ವಂತ ಉದ್ಯಮ ಆರಂಭಿಸಲು ಆರ್ಥಿಕ ನೆರವು
Read the story
ರೈತರಿಗೆ ಅನುಗ್ರಹ ಯೋಜನೆ ಹಣ ಬಿಡುಗಡೆ! ಬಾಕಿ ಉಳಿದಿದ್ದ ಪರಿಹಾರ ಮೊತ್ತ ಖಾತೆಗೆ ಜಮಾ
Read the story
ಇನ್ನು 2 ದಿನಗಳಲ್ಲಿ ರೈತರ ಖಾತೆಗೆ 2 ಸಾವಿರ ಜಮಾ; ಗುಡ್ ನ್ಯೂಸ್ ಕೊಟ್ಟ ಮೋದಿಜಿ
Read the story
ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ತೆರೆಯಲು ಸಿದ್ಧತೆ; ಗುರುವಾರದಿಂದ ಭಕ್ತರ ದರ್ಶನಕ್ಕೆ ವ್ಯವಸ್ಥೆ
Read the story
ಬೆಂಗಳೂರು: ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ! ಮನೆಯಲ್ಲೇ ಸ್ವಂತ ಉದ್ಯಮ ಶುರು ಮಾಡಿ
Read the story
ಬೆಂಗಳೂರು ಮೆಟ್ರೋ ಜಾಲ, ಹೊಸಕೋಟೆ, ತುಮಕೂರಿಗೂ ವಿಸ್ತರಣೆ! ಈ ಭಾಗದ ಭೂಮಿಗೆ ಬಂಗಾರದ ಬೆಲೆ
Read the story
ಇಳುವರಿ ಕುಸಿತ, ಮಾರುಕಟ್ಟೆಗೆ ಪೂರೈಕೆ ಕಡಿಮೆ! ಈರುಳ್ಳಿ ಬೆಲೆ ಭಾರೀ ಏರಿಕೆ
Read the story



