ಈ 7 ಕಂಡೀಷನ್ ಗೆ ಅರ್ಹರಾದರೆ ಮಾತ್ರ ಯುವನಿಧಿ ಸ್ಕೀಮ್ ಇಂದ ₹3000 ಸಿಗೋದು! ಏನೆಲ್ಲಾ ದಾಖಲೆ ಬೇಕು ಗೊತ್ತಾ?

ಯುವನಿಧಿ ಯೋಜನೆಯು ರಾಜ್ಯದ ನಿರುದ್ಯೋಗಿ ಹುಡುಗ ಹುಡುಗಿಯರಿಗೆ ಸಹಾಯ ಮಾಡುವ ಯೋಜನೆ ಆಗಿದೆ. ಈ ಯೋಜನೆ ಶುರುವಾಗೋದು ಯಾವಾಗ? ಮತ್ತು ಇನ್ನಿತರ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ

ಕರ್ನಾಟಕ ರಾಜ್ಯ ಸರ್ಕಾರವು ಜನರಿಗಾಗಿ 5 ಯೋಜನೆಗಳನ್ನು ಘೋಷಣೆ ಮಾಡಿ ಗೃಹಲಕ್ಷ್ಮಿ (Gruha Lakshmi), ಗೃಹಜ್ಯೋತಿ (Gruha Jyothi), ಅನ್ನಭಾಗ್ಯ (Annabhagya) ಮತ್ತು ಶಕ್ತಿ ಯೋಜನೆಯನ್ನು (Shakti Yojana) ಜಾರಿಗೆ ತಂದಿದೆ. ಒಂದೊಂದಾಗಿ ಎಲ್ಲಾ ಯೋಜನೆಗಳು ಜಾರಿಗೆ ಬರುವಾಗ, ಯುವನಿಧಿ ಯೋಜನೆ ಬರೋದು ಯಾವಾಗ ಎಂದು ಯುವಕರಲ್ಲಿ ಚಿಂತೆ ಶುರುವಾಗಿದೆ.

ಯುವನಿಧಿ ಯೋಜನೆಯು ರಾಜ್ಯದ ನಿರುದ್ಯೋಗಿ ಹುಡುಗ ಹುಡುಗಿಯರಿಗೆ ಸಹಾಯ ಮಾಡುವ ಯೋಜನೆ (Govt Scheme) ಆಗಿದೆ. ಈ ಯೋಜನೆ ಶುರುವಾಗೋದು ಯಾವಾಗ? ಮತ್ತು ಇನ್ನಿತರ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ಈ ಯುವನಿಧಿ ಯೋಜನೆಗೆ ಅರ್ಹತೆ ಪಡೆಯುವವರು ಯಾರು ಎಂದು ನೋಡುವುದಾದರೆ.. ಈ ಯೋಜನೆಯ ಮೂಲಕ ಹಣ ಪಡೆಯುವವರು 2022-23ನೇ ವರ್ಷದಲ್ಲಿ ಪದವಿ (Degree) ಮುಗಿಸುವವರು ಮಾತ್ರ ಆಗಿರುತ್ತಾರೆ.

ಈ 7 ಕಂಡೀಷನ್ ಗೆ ಅರ್ಹರಾದರೆ ಮಾತ್ರ ಯುವನಿಧಿ ಸ್ಕೀಮ್ ಇಂದ ₹3000 ಸಿಗೋದು! ಏನೆಲ್ಲಾ ದಾಖಲೆ ಬೇಕು ಗೊತ್ತಾ? - Kannada News

ಪದವಿ ಮುಗಿಸಿದ್ದರು, ಕೆಲಸ ಸಿಗದೆ ಮನೆಯಲ್ಲೇ ಇರುವ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯ ಸೌಲಭ್ಯ, ಈ ವರ್ಷ 6 ತಿಂಗಳಕಾಲ ಕೆಲಸ ಸಿಗದೆ ಇರುವ ಜಾಬ್ ಓರಿಯಂಟೆಡ್ ಕೋರ್ಸ್ ಮಾಡಿರುವವರಿಗೆ ಪದವಿ ಮಾಡಿರುವವರಿಗೆ ₹3000 ರೂಪಾಯಿ, ಡಿಪ್ಲೊಮಾ (Diploma) ಮಾಡಿರುವವರಿಗೆ ₹1500 ರೂಪಾಯಿ ಸಿಗುತ್ತದೆ.

ಪ್ರಸ್ತುತ ಬೇರೆ ಎಲ್ಲಾ ಯೋಜನೆಗಳಿಗೆ ಅಪ್ಲಿಕೇಶನ್ (Application) ಹಾಕುವ ಪ್ರಕ್ರಿಯೆ ಶುರುವಾಗಿದ್ದು, ಕೆಲವು ಯೋಜನೆಗಳನ್ನು ಪ್ರಾರಂಭ ಕೂಡ ಮಾಡಲಾಗಿದೆ. ಸರ್ಕಾರದಿಂದ ಮಾಹಿತಿ ಸಿಕ್ಕಿರುವ ಪ್ರಕಾರ, ಇನ್ನು ಕೆಲವೇ ದಿನಗಳಲ್ಲಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದ್ದು, ಈ ಬಗ್ಗೆ ಸರ್ಕಾರವು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿದೆ. ಒಟ್ಟಿನಲ್ಲಿ ಯುವನಿಧಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಶುರುವಾಗಲಿದೆ.

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಈ ಸ್ಟೈಪೆಂಡ್ ಸಿಗುವುದು ಎರಡು ವರ್ಷಗಳ ಕಾಲ ಮಾತ್ರ. 2 ವರ್ಷಗಳ ಒಳಗೆ ಕೆಲಸ ಪಡೆಯಬೇಕು, ಒಂದು ವೇಳೆ ಕೆಲಸ ಸಿಕ್ಕರೆ, ಅದನ್ನು ಸರ್ಕಾರಕ್ಕೆ ತಿಳಿಸಬೇಕು.

ಕೆಲಸ ಸಿಕ್ಕರೂ ಯುವನಿಧಿ ಯೋಜನೆಯಿಂದ ಹಣ ಪಡೆಯುತ್ತಾ ಹೋದರೆ, ದಂಡ ಕಟ್ಟಬೇಕಾಗುತ್ತದೆ. ಹಾಗೆಯೇ 2 ವರ್ಷಗಳಾದರೂ ಕೆಲಸ ಸಿಗಲಿಲ್ಲ ಎಂದರೆ, ಯುವನಿಧಿ ಯೋಜನೆಯಿಂದ ಹಣ ಸಿಗುವುದು ನಿಲ್ಲುತ್ತದೆ.

ಈ ಯೋಜನೆಯ ಫಲ ಪಡೆಯಲು ಬೇಕಾಗುವ ದಾಖಲೆಗಳು ಹೀಗಿವೆ..

Yuva Nidhi Yojana - Yuva Nidhi Scheme*ಬ್ಯಾಂಕ್ ಪಾಸ್ ಬುಕ್
*ಆಧಾರ್ ಕಾರ್ಡ್
*ಡಿಗ್ರಿ/ಡಿಪ್ಲೊಮಾ ಮಾರ್ಕ್ಸ್ ಕಾರ್ಡ್
*ಯೂನಿವರ್ಸಿಟಿ ಡಿಗ್ರಿ ಸರ್ಟಿಫಿಕೇಟ್
*ಡಿಪ್ಲೊಮಾ ಸರ್ಟಿಫಿಕೇಟ್
*ಇನ್ನಿತರ ಮಾಹಿತಿಗಳು

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ನಡೆಯುವುದು ಸೇವಾಸಿಂಧು ಪೋರ್ಟಲ್ ಮೂಲಕ. ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ಅರ್ಜಿ ಸಲ್ಲಿಕೆ ಶುರುವಾಗೋದು ಯಾವಾಗ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವಾಗ ಎನ್ನುವುದನ್ನು ಸರ್ಕಾರ ಇನ್ನಷ್ಟೇ ತಿಳಿಸಬೇಕಿದೆ.

You Will Get Rs 3000 from Yuva Nidhi Scheme only if eligible for these 7 conditions

Follow us On

FaceBook Google News

You Will Get Rs 3000 from Yuva Nidhi Scheme only if eligible for these 7 conditions