ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆಯರ ಒಳಉಡುಪುಗಳನ್ನು ಕದಿಯುತ್ತಿದ್ದ ಯುವಕ

ಕಳ್ಳತನ ಮಾಡಲು ಬಂದ ಚೇತನ್ ಎಂಬ ಯುವಕ ಮನೆಯೊಂದರ ಮುಂಭಾಗದ ಗೇಟ್ ಮೇಲಿಂದ ಜಿಗಿದು ಮಹಿಳೆಯರು ಹೊರಗೆ ಒಣಗಿಸಲು ಹಾಕುತ್ತಿದ್ದ ಒಳಉಡುಪುಗಳನ್ನು ಕದಿಯಲು ಯತ್ನಿಸಿದ್ದು, ಈ ದೃಶ್ಯಗಳನ್ನು ಮನೆಯವರು ಗಮನಿಸಿದ್ದಾರೆ.

ಹುಬ್ಬಳ್ಳಿ: ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆಯರ ಒಳಉಡುಪುಗಳನ್ನು ದೋಚುತ್ತಿದ್ದ ಆರೋಪದ ಮೇಲೆ ಯುವಕನನ್ನು ಸ್ಥಳೀಯರು ಹಿಡಿದು ಹಳೇ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಮಹಿಳೆಯರು ಮನೆಯಿಂದ ಹೊರಗೆ ಒಣಗಿಸುವ ಒಳಉಡುಪುಗಳನ್ನು ಕಳ್ಳತನ ಮಾಡಲಾಗುತ್ತಿತ್ತು. ಇದರಿಂದ ಕೆಲ ಮನೆಗಳಲ್ಲಿ ಆಶ್ಚರ್ಯ ಜೊತೆಗೆ ಒಳಉಡುಪು ಕದಿಯುತ್ತಿರುವುದು ಯಾರೆಂಬ ಕುತೂಹಲ ಹೆಚ್ಚಾಗಿತ್ತು.

ಈ ನಿಟ್ಟಿನಲ್ಲಿ ಸ್ಥಳೀಯರು ತಮ್ಮ ಮನೆಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ವೇಳೆ ಕಳ್ಳತನ ಮಾಡಲು ಬಂದ ಚೇತನ್ ಎಂಬ ಯುವಕ ಮನೆಯೊಂದರ ಮುಂಭಾಗದ ಗೇಟ್ ಮೇಲಿಂದ ಜಿಗಿದು ಮಹಿಳೆಯರು ಹೊರಗೆ ಒಣಗಿಸಲು ಹಾಕುತ್ತಿದ್ದ ಒಳಉಡುಪುಗಳನ್ನು ಕದಿಯಲು ಯತ್ನಿಸಿದ್ದು, ಈ ದೃಶ್ಯಗಳನ್ನು ಮನೆಯವರು ಗಮನಿಸಿದ್ದಾರೆ.

ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆಯರ ಒಳಉಡುಪುಗಳನ್ನು ಕದಿಯುತ್ತಿದ್ದ ಯುವಕ

ಸಿಸಿಟಿವಿ ಕ್ಯಾಮೆರಾದಲ್ಲಿ ನೋಡಿದ ಯುವಕನನ್ನು ಅಕ್ಕಪಕ್ಕದವರ ಜೊತೆ ಸೇರಿ ಹಿಡಿದಿದ್ದಾರೆ. ನಂತರ ಹಳೇ ಹುಬ್ಬಳ್ಳಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Youth Caught Stealing Women’s Undergarments at Midnight Handed Over to Police

Related Stories