ಜೂನ್ ತಿಂಗಳ ಶುರುವಿನಲ್ಲಿ ನಟ ದರ್ಶನ್ (Actor Darshan) ಅವರು ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎನ್ನುವ ಪ್ರಕರಣ ಜೋರಾಗಿಯೇ ಸದ್ದು ಮಾಡಿತು. ಈ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಿದ ದಕ್ಷ ಅಧಿಕಾರಿ ಎಸಿಪಿ ಚಂದನ್ ಕುಮಾರ್ (ACP Chandan) ಅವರಿಗೆ ಎಲ್ಲರಿಂದ ಪ್ರಶಂಸೆ ಕೂಡ ಸಿಕ್ಕಿತು. ಇವರ ಕಾರ್ಯವೈಖರಿಯನ್ನು ಜನರು ಮೆಚ್ಚಿಕೊಂಡರು. ಆದರೆ ಇದೀಗ ಚಂದನ್ ಅವರನ್ನೇ ಅಮಾನತುಗೊಳಿಸಬೇಕು ಎನ್ನುವ ಚರ್ಚೆ ಶುರುವಾಗಿದೆ..
ಹೌದು, ಇದೀಗ ಇವರ ಮೇಲೆ ಕೆಲವರು ಆಕ್ರೋಶಗೊಂಡಿರುವುದು ಇತ್ತೀಚೆಗೆ ನಡೆದ ಒಂದು ಪ್ರಕರಣದಿಂದ. ಜುಲೈ 26ರಂದು ಬೆಂಗಳೂರಿನಲ್ಲಿ ಮಾಂಸದ ವಿಚಾರವಾಗಿ ಒಂದು ಘಟನೆ ನಡೆಯಿತು.
ಅಂದು ಬೆಳಗ್ಗೆ ರಾಜಸ್ಥಾನದಿಂದ ಬಂದ ಮಾಂಸದ ಡಬ್ಬದಲ್ಲಿ ನಾಯಿ ಮಾಂಸವಿದೆ ಎಂದು ತಿಳಿಸಿ, ಕನ್ನಡ ಹೋರಾಟಗಾರ ಪುನೀತ್ ಕೆರೆಹಳ್ಳಿ ಎನ್ನುವವರು ಆ ಡಬ್ಬಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು, ಈ ವೇಳೆ ಪುನೀತ್ ಕೆರೆಹಳ್ಳಿ (Puneeth Kerehalli) ಹಾಗೂ ಅಬ್ದುಲ್ ರಜಾಕ್ ಎನ್ನುವವರ ನಡುವೆ ಜಗಳ ಕೂಡ ಶುರುವಾಗಿ, ಈ ಪ್ರಕರಣ ದೊಡ್ಡದಾಯಿತು.
ನಂತರ ಆ ಡಬ್ಬಗಳಲ್ಲಿ ಇದ್ದದ್ದು ನಾಯಿ ಮಾಂಸ ಅಲ್ಲ , ಕುರಿ ಮಾಂಸ ಎಂದು ಸಾಬೀತಾಯಿತು. ಆದರೆ ಈ ಪ್ರಕರಣದಲ್ಲಿ ಗಲಾಟೆ ಮಾಡಿದರು, ಶಾಂತಿ ಕಾಪಾಡಲಿಲ್ಲ, ಅಧಿಕಾರಿಗಳಿಗೆ ತಮ್ಮ ಕರ್ತವ್ಯ ಮಾಡಲು ಬಿಡಲಿಲ್ಲ ಎನ್ನುವ ಕಾರಣಕ್ಕೆ ಎಸಿಪಿ ಚಂದನ್ ಕುಮಾರ್ ಅವರು ಪುನೀತ್ ಕೆರೆಹಳ್ಳಿ ಅವರನ್ನು ಅರೆಸ್ಟ್ ಮಾಡಿದರು.
ಈ ಕಾರಣಕ್ಕೆ ಚಂದನ್ ಕುಮಾರ್ ಅವರ ವಿರುದ್ಧ ಒಂದಷ್ಟು ಜನರು ಆಕ್ರೋಶಗೊಂಡಿದ್ದಾರೆ, ಚಂದನ್ ಅವರು ಬೇರೆ ಜಾತಿಯವರನ್ನು ಬಂಧಿಸಲಿಲ್ಲ ಎಂದು ಕೆಲವರು ಚಂದನ್ ಅವರ ವಿರುದ್ಧ ದೂರು ಕೊಟ್ಟಿದ್ದಾರೆ.
ಅಬ್ದುಲ್ ರಜಾಕ್ ಕೂಡ ಗಲಾಟೆ ಮಾಡಿದರು, ಅವರಿಂದಲು ಶಾಂತಿ ಹಾನಿ ಆಯಿತು, ಅಧಿಕಾರಿಗಳಿಗೆ ತೊಂದರೆ ಆಯಿತು. ಆದರೆ ಅಬ್ದುಲ್ ರಜಾಕ್ ಹಾಗೂ ಆತನ ಜೊತೆಗೆ ಇರುವವರನ್ನು ಬಂಧಿಸದೇ, ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿದ್ದಾರೆ ಎನ್ನುವ ಆರೋಪಕ್ಕೆ ಚಂದನ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆಲ ದಿನಗಳ ಹಿಂದೆ ಕಮಿಷನರ್ ಅವರ ಬಳಿ ಕೆಲವರು ದೂರು ನೀಡಿದ್ದರು. ಇದೀಗ ರಾಜ್ಯಪಾಲರವರೆಗು ಈ ದೂರು ತಲುಪಿದೆ ಎಂದು ಮಾಹಿತಿ ಸಿಕ್ಕಿದೆ.
ಹೌದು, ಎಸಿಪಿ ಚಂದನ್ ಕುಮಾರ್ ಅವರ ವಿರುದ್ಧ ರಾಜ್ಯಪಾಲರ ಬಳಿ ಪುನೀತ್ ಕೆರೆಹಳ್ಳಿ ಅವರ ಪ್ರಕರಣಕ್ಕೆ ದೂರು ಕೊಟ್ಟು, ಆತನನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಪುನೀತ್ ಕೆರೆಹಳ್ಳಿ ಅವರು ಘಟನೆ ಬಗ್ಗೆ ಮಾತನಾಡಿ, ಅಬ್ಧುಲ್ ರಜಾಕ್ ಕೂಡ ಅಂದು ತೊಂದರೆ ಮಾಡುತ್ತಿದ್ದರು, ಆದರೆ ಆತನನ್ನು ಬಂಧಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಕಾರಣಕ್ಕೆ ಎಸಿಪಿ ಚಂದನ್ ಕುಮಾರ್ ಅವರ ಅಮಾನತು ನಡೆಯುತ್ತಾ ಎಂದು ಕಾದು ನೋಡಬೇಕಿದೆ.
ACP Chandan, who had arrested Darshan Update
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.