ನಟಿ ಖುಷ್ಬೂ ಅವರ ಮಗಳು ಆವಂತಿಕಾ ಈಗ ಹೇಗಿದ್ದಾರೆ ಗೊತ್ತಾ? ಇದೀಗ ಅವರ ಲೇಟೆಸ್ಟ್ ಫೋಟೋಗಳು ವೈರಲ್ ಆಗಿವೆ

Story Highlights

Avantika sundar: ಖುಷ್ಬೂ ನಿರ್ದೇಶಕ ಸುಂದರ್ ಸಿ ಅವರನ್ನು 2000 ರಲ್ಲಿ ವಿವಾಹವಾದರು. ಅವರಿಗೆ ಆವಂತಿಕಾ ಮತ್ತು ಆನಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರೂ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

Avantika sundar: ನಟಿ ಖುಷ್ಬೂ ಒಂದು ಕಾಲದಲ್ಲಿ ದಕ್ಷಿಣ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದ್ದರು. ಅವರು 90 ರ ದಶಕದಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಕಾಲದಲ್ಲಿ ಆಕೆಯ ಸೌಂದರ್ಯ, ನಟನೆಗೆ ಮನಸೋಲದ ಅಭಿಮಾನಿಗಳೇ ಇರಲಿಲ್ಲವೆಂದೇ ಹೇಳಬೇಕು.

ಈಕೆಯ ಮೇಲಿನ ಅಭಿಮಾನಕ್ಕೆ ಅಭಿಮಾನಿಗಳು ಒಟ್ಟಾಗಿ ದೇವಸ್ಥಾನ ನಿರ್ಮಿಸಿ ಪೂಜೆ ಸಲ್ಲಿಸಿದರು. ಕನ್ನಡ, ತೆಲುಗು ಜೊತೆಗೆ ತಮಿಳಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಖುಷ್ಬೂ ಸದ್ಯ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ, ವದಂತಿಗಳಿಗೆ ಶೆಟ್ರ ಖಡಕ್ ಪ್ರತಿಕ್ರಿಯೆ ಏನು ಗೊತ್ತಾ? ಕಾಂತಾರ ನಾಯಕನಿಗೆ ಪ್ರಶಂಸೆಗಳ ಸುರಿಮಳೆ

ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿ ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಈ ನಡುವೆ ಇದೀಗ ಅವರ ಮಗಳ (Actress Khushboo Daughter) ಲೇಟೆಸ್ಟ್ ಫೋಟೋಗಳು (Latest Photos) ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ನಟಿ ಖುಷ್ಬೂ (Actress Khushboo) ಅವರಿಗೆ ಇಷ್ಟು ದೊಡ್ಡ ಮಗಳಿದ್ದಾಳಾ? ಇಷ್ಟು ದಿನ ಆಕೆ ಎಲ್ಲಿದ್ದಳು? ತಾಯಿಯಂತೆ ಸಿನಿಮಾ ರಂಗಕ್ಕೆ ಬರಲಿದ್ದಾರಾ? ಎಂಬೆಲ್ಲಾ ಪ್ರಶ್ನೆಗಳ ಉತ್ತರಕ್ಕೆ ಈ ಪುಟವನ್ನು ಪೂರ್ಣವಾಗಿ ಓದಿ.

ಖುಷ್ಬೂ 1991 ರಲ್ಲಿ ನಟ ಪ್ರಭು ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಪ್ರಭುವಿಗೆ ಅದಾಗಲೇ ಮದುವೆಯಾಗಿದ್ದರಿಂದ ಅವರ ತಂದೆ ಇವರಿಬ್ಬರ ಮದುವೆಗೆ ಒಪ್ಪಿರಲಿಲ್ಲ. ಪರಿಣಾಮವಾಗಿ, ಮದುವೆಯಾದ ಮೂರು ತಿಂಗಳ ನಂತರ ಅವರು ಬೇರ್ಪಟ್ಟರು.

ಭರದಿಂದ ಸಾಗುತ್ತಿದೆ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಸಿದ್ಧತೆ, ಎಷ್ಟು ಕೋಟಿ ಬಂಡವಾಳ ಗೊತ್ತಾ?

ಅದರ ನಂತರ ಖುಷ್ಬೂ ನಿರ್ದೇಶಕ ಸುಂದರ್ ಸಿ ಅವರನ್ನು 2000 ರಲ್ಲಿ ವಿವಾಹವಾದರು. ಅವರಿಗೆ ಆವಂತಿಕಾ ಮತ್ತು ಆನಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರೂ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

 

View this post on Instagram

 

A post shared by avantika (@avantikasundar)

ಆದರೆ ಅವರು ಸಂಪೂರ್ಣವಾಗಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಕ್ರಿಯರಾಗಿದ್ದಾರೆ. ಲಂಡನ್‌ನಲ್ಲಿ ಓದುತ್ತಿರುವ ಖುಷ್ಬೂ ಅವರ ಹಿರಿಯ ಮಗಳು ಆವಂತಿಕಾ ಇತ್ತೀಚೆಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಆಕೆಯ ಚಿತ್ರಗಳನ್ನು ಕಂಡು ನೆಟಿಜನ್‌ಗಳು ಶಾಕ್ ಆಗಿದ್ದಾರೆ. ಹೌದು, ನಾಯಕಿಯಾಗಿ ಎಂಟ್ರಿ ಕೊಡಲಿರುವ ಮಗಳಿದ್ದಾಳೆ ಎಂದು ಅಚ್ಚರಿ ಮೂಡಿಸಿದ್ದಾರೆ ನಟಿ ಖುಷ್ಬೂ. ಆದರೆ ಆವಂತಿಕಾ ಅವರ ಚಿತ್ರಗಳಲ್ಲೇ ಅವರು ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

Actress Khushboo Daughter Avantika

ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಕಾಲಿಡುವ ಸೂಚನೆಗಳಿದ್ದರೂ ಆ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ, ಇನ್ನು ಆವಂತಿಕಾ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಗ್ಲಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Actress Khushboo Daughter Avantika Latest Pics Goes Viral

Related Stories